ಕಲಬುರಗಿ ಜಿಲ್ಲಾ ಕೈಗಾರಿಕೆ ಕೇಂದ್ರ ಸೋಮವಾರ ಆಯೋಜಿಸಿದ್ದ ಇನ್ಕ್ಯೂಬೇಷನ್ ಕಾರ್ಯಾಗಾರಕ್ಕೆ ಡಿಸಿ ಫೌಜಿಯಾ ತರನ್ನುಮ್ ಚಾಲನೆ ನೀಡಿದರು. ಡಿಐಸಿ ಜಂಟಿ ನಿರ್ದೇಶಕ ಅಬ್ದುಲ್ ಅಜೀಂ, ಕೆಜಿಟಿಟಿಐ ನಿರ್ದೇಶಕ ರಾಜೇಶ ಬಾವಗಿ ಇತರರಿದ್ದರು.
- ಕಲಬುರಗಿ ಡಿಸಿ ಫೌಜಿಯಾ ತರನ್ನುಮ್ ಚಾಲನೆ
ಕಲಬುರಗಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರಗಿ ವತಿಯಿಂದ ವಿಶ್ವ ಬ್ಯಾಂಕ್ ನೆರವಿನ ಕೇಂದ್ರ ಪುರಸತ ಮಹತ್ವಾಕಾಂ ರ್ಯಾಂಪ್ (ಆರ್ಎಎಂಪಿ) ಯೋಜನೆಯಡಿ ಅಂತಿಮ ವರ್ಷದ ತಾಂತ್ರಿಕ ವಿದ್ಯಾರ್ಥಿಗಳಿಗಾಗಿ ಸೋಮವಾರ ಆಯೋಜಿಸಿದ್ದ ಇನ್ಕ್ಯೂಬೇಷನ್ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಚಾಲನೆ ನೀಡಿದರು.
ಕರ್ನಾಟಕ&ಜರ್ಮನ್ ತಾಂತ್ರಿಕ ತರಬೇತಿ ಕೇಂದ್ರ (ಕೆಜಿಟಿಟಿಐ) ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಈ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆಯಬೇಕು. ಜಿಲ್ಲೆಯ ವಿವಿಧ ತಾಂತ್ರಿಕ ಶಿಣ ಸಂಸ್ಥೆಗಳಲ್ಲಿ ಇನ್ಕ್ಯೂಬೇಷನ್ ಕೇಂದ್ರ ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯು ಇನ್ಕ್ಯೂಬೇಷನ್ ಹಬ್ ಆಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಪ್ರಾಸ್ತಾವಿಕ ಮಾತನಾಡಿದರು. ಅಧ್ಯತೆ ವಹಿಸಿದ್ದ ಕೆಜಿಟಿಟಿಐ ನಿರ್ದೇಶಕ ರಾಜೇಶ ಬಾವಗಿ ಮಾತನಾಡಿ, ಇನ್ಕ್ಯೂಬೇಷನ್ದಿಂದ ತಾಂತ್ರಿಕ ವಿದ್ಯಾರ್ಥಿಗಳಿಗೆ ಅವರ ನವೋದ್ಯಮ (ಸ್ಟಾರ್ಟ್ಅಪ್) ಪ್ರಾರಂಭಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ರಾವೇಂದ್ರ ಆರ್.ಪಿ, , ಕೆಎಸ್ಎಫ್ಸಿ ಶಾಖಾ ವ್ಯವಸ್ಥಾಪಕ ಡಾ.ಚಂದ್ರಕಾಂತ ಚಂದಾಪೂರ, ಸಿಡಾಕ್ ಹಿರಿಯ ತರಬೇತಿದರ ಸೈಯ್ಯದ್ ಅಶ್ಫಾಕ್ ಅಹ್ಮದ್, ಸಹಾಯಕ ನಿರ್ದೇಶಲೊ ರೂಪಾಲಿ ಶೇರಖಾನೆ, ಜಾಫರ್ ಖಾಸಿಮ್ ಅನ್ಸಾರಿ, ಸುಮಾರು 130 ವಿದ್ಯಾರ್ಥಿಗಳು ಹಾಜರಿದ್ದರು. ನವೋದ್ಯಮಿ ಪ್ರವಿಣಕುಮಾರ ಡಿಗ್ಗೆ ಅನುಭವ ಹಂಚಿಕೊಂಡರು.