‘ನವರತನ್ ಜುವೆಲ್ಲರಿ 
ರಾಜ್ಯ

ವಿಜೇತರಿಗೆ ಬಹುಮಾನ ವಿತರಿಸಿದ ‘ನವರತನ್ ಜುವೆಲ್ಲರಿ-Jewellery

ಬೆಂಗಳೂರು: ನವರತನ್ ಜುವೆಲ್ಲರಿ ಪ್ರೈ.ಲಿ. ವತಿಯಿಂದ ನಗರದ ಹೋಟೆಲ್‌ನಲ್ಲಿ ಆಯೋಜಿಸಿದ್ದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಆಯ್ಕೆಯಾದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಥಮ ಬಹುಮಾನವಾಗಿ ವಿಜೇತರಿಗೆ ಕಿಯಾ ಕಾರು, 2ನೇ ಬಹುಮಾನವಾಗಿ 5 ಮಂದಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, 3ನೇ ಬಹುಮಾನ ರೂಪದಲ್ಲಿ ಐವರಿಗೆ 50 ಸಾವಿರ ರೂ. ಮೌಲ್ಯದ ಗ್‌ಟಿ ವೋಚರ್, 4ನೇ ಬಹುಮಾನವಾಗಿ 10 ಮಂದಿಗೆ 100 ಗ್ರಾಂ ಬೆಳ್ಳಿ ನಾಣ್ಯ ಹಾಗೂ 5ನೇ ಬಹುಮಾನವಾಗಿ 10 ಮಂದಿಗೆ 50 ಗ್ರಾಂ ಬೆಳ್ಳಿ ನಾಣ್ಯ ವಿತರಿಸಲಾಯಿತು. ಡಬಲ್ ಧಮಾಕಾ ಉತ್ಸವ ಹಿನ್ನೆಲೆಯಲ್ಲಿ ಆ. 15ರಿಂದ ಜ. 2ರವರೆಗೆ ನವರತನ್ ಜುವೆಲ್ಲರಿ ಮಳಿಗೆಗಳಲ್ಲಿ ಚಿನ್ನಾಭರಣ ಖರೀದಿಸಿದ ಗ್ರಾಹಕರಿಗೆ ಕೂಪನ್ ವಿತರಿಸಲಾಗಿತ್ತು.
ಸಂಸದ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ದೊಡ್ಡ ಬ್ರ್ಯಾಂಡ್ ಆಗಿ ನವರತನ್ ಜುವೆಲ್ಲರಿ ಹೊರಹೊಮ್ಮಿದೆ. ಗುಣಮಟ್ಟ ಮಾತ್ರವಲ್ಲದೆ ಗ್ರಾಹಕರ ನಂಬಿಕೆ ಉಳಿಸಿಕೊಂಡಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಜಾಸ್ತಿಯಾಗುತ್ತದೆ. ಆದರೆ, ಮನುಷ್ಯನ ಬೆಲೆ ಕಡಿಮೆಯಾಗುತ್ತಿರುವಾಗ ಈ ಬಗೆಯ ಮೌಲ್ಯಗಳನ್ನು ಮರುಸ್ಥಾಪಿಸುವಲ್ಲಿ ನವರತನ್ ಪ್ರಯತ್ನಗಳು ಶ್ಲಾಘನೀಯ ಎಂದರು.
ಚಿತ್ರನಿರ್ದೇಶಕ ರಾಕ್‌ಲೈನ್ ವೆಂಕಟೇಶ್ ಮಾತನಾಡಿ, ಚಿನ್ನ ಖರೀದಿಸುವುದು ಮುಖ್ಯವಲ್ಲ. ಗ್ರಾಹಕರಿಗೆ ಯಾವ ಮಳಿಗೆಯಲ್ಲಿ ಚಿನ್ನಾಭರಣ ಖರೀದಿಸುವುದು ಮುಖ್ಯ. ಹಲವು ವರ್ಷಗಳಿಂದ ನನ್ನ ಪತ್ನಿ ನವರತನ್ ಜುವೆಲ್ಲರಿಯಲ್ಲೇ ಖರೀದಿಸುತ್ತಿರುವುದು ಈ ಸಂಸ್ಥ ಗಳಿಸಿರುವ ವಿಶ್ವಾಸಾರ್ಹತೆಗೆ ಸಾಕ್ಷಿ ಎಂದು ಹೇಳಿದರು.
ಇದೇ ವೇಳೆ ಫ್ಯಾಶನ್ ಶೋ, ಸಂಗೀತ ಕಾರ್ಯಕ್ರಮ ನಡೆಯಿತು. ಶಾಸಕ ಸಿ.ಕೆ. ರಾಮಮೂರ್ತಿ, ಜಯನಗರ ಟ್ರೇಡರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ್ ಮಂಡೋತ್, ನವರತನ್ ಜುವೆಲ್ಲರಿ ಪ್ರೈ.ಲಿ. ನಿರ್ದೇಶಕರಾದ ಮಹೇಂದರ್ ಕಟಾರಿಯಾ, ಅಶೋಕ್ ಬಾಫ್ನಾ, ನಿರ್ಮಲಾ ಬಾಫ್ನಾ ಮತ್ತಿತರರಿದ್ದರು.
ನವರತನ್ ಜುವೆಲ್ಲರಿ ವತಿಯಿಂದಮೊದಲ ಬಾರಿಗೆ ಡಬಲ್ ಧಮಾಕಾ ಉತ್ಸವ ಆಯೋಜಿಸಲಾಯಿತು. ಈ ಉತ್ಸವ ನಿಮಿತ್ತ ಮಳಿಗೆಯಲ್ಲಿ ಚಿನ್ನಾಭರಣ ಖರೀದಿಸಿದ ಗ್ರಾಹಕರಿಗೆ ಅಂದಾಜು 10 ಸಾವಿರ ಕೂಪನ್ ನೀಡಲಾಗಿತ್ತು. ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡುವಲ್ಲಿ ಸಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ.
- ಅಕ್ಷಯ್ ಬಾಫ್ನಾ, ನವರತನ್ ಜುವೆಲ್ಲರಿ ಪ್ರೈ.ಲಿ. ನಿರ್ದೇಶಕ.