ಕಲಬುರಗಿ ಸಿಯುಕೆನಲ್ಲಿ ಆ.18ರಂದು ನಡೆಯಲಿರುವ ರಾಷ್ಟ್ರೀಯ ವಿಚಾರ ಸಂಕಿರಣದ ಪೋಸ್ಟರ್​ ಅನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಶುಕ್ರವಾರ ಬಿಡುಗಡೆ ಮಾಡಿದರು. ಪ್ರೊ.ಆರ್​.ಆರ್​.ಬಿರಾದಾರ್​, ಪ್ರೊ.ಬಸವರಾಜ ಕುಬಕಡ್ಡಿ, ಡಾ.ಅನಂತ ಚಿಂಚುರೆ, ಡಾ.ರೇಣುಕಾ ಗುಬ್ಬೇವಾಡ್​ ಇತರರಿದ್ದರು. 
ರಾಜ್ಯ

ಆ.18ರಂದು ರಾಷ್ಟ್ರೀಯ ವಿಚಾರ ಸಂಕಿರಣ

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಬಟ್ಟು ಸತ್ಯನಾರಾಯಣ ಮಾಹಿತಿ
  • ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜನೆ
ಕಲಬುರಗಿ: ಕರ್ನಾಟಕ ಕೇದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗ ಮತ್ತು ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್​ನಿಂದ ಸಹಜೀವನದ ವಿಕಸನ: ವಿವಾಹ ಮತ್ತು ಲಿವ್​-ಇನ್​ ಸಂಬಂಧಗಳಲ್ಲಿನ ಪಾವಿತ್ರ್ಯ, ಕಾನೂನುಬದ್ಧತೆ ಹಾಗೂ ಸಾಮಾಜಿಕ ಆಯಾಮ ಕುರಿತು ಆ.18ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಪೋಸ್ಟರ್​ ಬಿಡುಗಡೆ ಮಾಡಿ ಮಾತನಾಡಿ, ವಿಚಾರ ಸಂಕಿರಣದಲ್ಲಿ ಸಂಸ್ಕಾರಯುತ ವಿವಾಹ, ವಿವಾಹದ ಕಾನೂನು ಕಟ್ಟಳೆಗಳು, ಸಹಜೀವನ ವಿಕಸನ, ಲಿವ್​-ಇನ್​ ಸಂಬಂಧ, ಮಹಿಳೆಯರ ನತೆ ಮತ್ತು ಅವರ ಹಕ್ಕುಗಳು, ಸಪ್ತಪದಿ, ಆರ್ಥಿಕ ಸ್ವಾಯತ್ತತೆ ಹಾಗೂ ಸಾಂಪ್ರದಾಯಿಕ ಪದ್ಧತಿ, ಆಧುನಿಕ ಕಾನೂನಿನ ನಡುವಿನ ಸಂಬಂಧಗಳು ಸೇರಿ ಹಲವಾರು ಸಮಕಾಲೀನ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಸಂಶೋಧನಾ ಪ್ರಬಂಧಗಳನ್ನು ಆನ್​ಲೈನ್​ ಅಥವಾ ಆಫ್​ಲೈನ್​ ಮೂಲಕ ಮಂಡಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಸಾರಾಂಶ ಸಲ್ಲಿಕೆಗೆ ಆ.8 ಹಾಗೂ ನೋಂದಣಿಗೆ ಆ.15 ಕೊನೆಯ ದಿನವಾಗಿದೆ. ವಿಚಾರ ಸಂಕಿರಣವು ಆ.18ರಂದು ವಿವಿ ಆವರಣದಲ್ಲಿ ನಡೆಯಲಿದೆ. ಶಿಕ್ಷಣ ತರು ಹಾಗೂ ಕಾನೂನು ವೃತ್ತಿಪರರು 500 ರೂ., ಸಂಶೋಧನಾ ವಿದ್ಯಾರ್ಥಿಗಳಿಗೆ 300 ರೂ. ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 200 ರೂ. ಶುಲ್ಕವಿದೆ ಎಂದು ಮಾಹಿತಿ ನೀಡಿದರು.
ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​, ಕಾನೂನು ಅಧ್ಯಯನ ನಿಕಾಯದ ಡೀನ್​ ಪ್ರೊ.ಬಸವರಾಜ ಕುಬಕಡ್ಡಿ, ಕಾನೂನು ವಿಭಾಗದ ಮುಖ್ಯಸ್ಥ ಡಾ.ಅನಂತ ಚಿಂಚುರೆ, ವಿಚಾರ ಸಂಕಿರಣದ ಸಂಚಾಲಕಿ ಡಾ.ರೇಣುಕಾ ಗುಬ್ಬೇವಾಡ್​, ವಿಭಾಗದ ಅಧ್ಯಾಪಕ ಡಾ.ಶಶಿರೇಖಾ ಮಾಳಗಿ, ಡಾ.ಜಗದೀಶಚಂದ್ರ ಟಿ.ಜಿ., ಡಾ.ಜಯಂತ ಬೊರೂವಾ, ಡಾ.ಕೆ.ಎಂ.ಕೃಷ್ಣಶೇಖರ್​ ಶರ್ಮಾ, ಪಿ.ವೈಷ್ಣವಿ ನಾರಾಯಣಿ, ಡಾ.ನಿಕಿತಾ ಚೌಧರಿ, ಜುನು ದಾಸ್​, ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್​ನ ಮಹಾದೇವಯ್ಯ ಕರದಳ್ಳಿ ಇತರರಿದ್ದರು.