ಸವದತ್ತಿ: ಗುಜರಾತ್ ರಾಜ್ಯದ ಗಾಂಧಿನಗರದಲ್ಲಿರುವ ರಾಷ್ಟ್ರೀಯ ರಾ ವಿಶ್ವವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ 4ನೇ ಪಿಎಎ್ಐ ರಾಷ್ಟ್ರೀಯ ಪಂಜಾ ಕುಸ್ತಿ ಹಾಗೂ ಪ್ಯಾರಾ ಪಂಜಾ ಕುಸ್ತಿ ಚಾಂಪಿಯನ್ಶಿಪ್&2026ರಲ್ಲಿ ತಾಲೂಕಿನ ಇಬ್ಬರು ಮಹಿಳಾ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ತಾಲೂಕಿನ ಗೋವನಕೊಪ್ಪ ಗ್ರಾಮದ ಯಲ್ಲವ್ವ ಗದಿಗೆಪ್ಪ ಉಪ್ಪಾರ 55 ಕೆಜಿ ತೂಕ ವಿಭಾಗದ ಪಿಐಯು ಸ್ಟಾಂಡಿಂಗ್ ವಿಭಾಗದಲ್ಲಿ ರೈಟ್ ಹ್ಯಾಂಡ್ ಹಾಗೂ ಲ್ಟ್ೆ ಹ್ಯಾಂಡ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕ ಪಡೆದಿದ್ದಾರೆ. ಶಿರಸಂಗಿ ಗ್ರಾಮದ ನೀಲವ್ವ ಶಿವಪ್ಪ ಬಗವಾಡಿ 55 ಕೆಜಿ ತೂಕ ವಿಭಾಗದ ಪಿಐಡಿ ಸಿಟ್ಟಿಂಗ್ ವಿಭಾಗದಲ್ಲಿ ರೈಟ್ ಹ್ಯಾಂಡ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಲ್ಟ್ೆ ಹ್ಯಾಂಡ್ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದು ಚಿನ್ನ ಮತ್ತು ಬೆಳ್ಳಿ ಪದಕ
ಗೆದ್ದಿದ್ದಾರೆ. ಯಲ್ಲವ್ವ ಉಪ್ಪಾರ ಹಾಗೂ ನೀಲವ್ವ ಬಗವಾಡಿ ಸಾಧನೆಗೆ ಶಾಸಕ ವಿಶ್ವಾಸ ವೈದ್ಯ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.