/ ಆಳಂದನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಮನಾ ಚಿತ್ತರಗಿ ಮಾತನಾಡಿದರು. ಅಣ್ಣಾರಾವ ಪಾಟೀಲ್, ಸಂಜೀವ ರೆಡ್ಡಿ ಇತರರಿದ್ದರು.
- ನ್ಯಾಯಾಧೀಶೆ ಸುಮನಾ ಚಿತ್ತರಗಿ ಮಾಹಿತಿ
- ಆಳಂದನಲ್ಲಿ ಪೂರ್ವಭಾವಿ ಸಭೆ
ಆಳಂದ: ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಜು.11ರಂದು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಮನಾ ಚಿತ್ತರಗಿ ತಿಳಿಸಿದರು.
ಜೆಎಂಎಫ್ಸಿ ನ್ಯಾಯಾಲಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್ ವಸೂಲಾತಿ, ಮೋಟಾರ್ ಅಪಘಾತ ಪರಿಹಾರ, ಮಿತ್ಯ ಹಾಗೂ ನೀರಿನ ಶುಲ್ಕ, ಭೂಸ್ವಾದಿನ, ರಾಜಿಯಾಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಬಗ್ಗೆ ಚರ್ಚಿಸುವ ಸಲುವಾಗಿ ಈ ಸಭೆ ಹಮ್ಮಿಕೊಳ್ಳಲಾಗಿದೆ. ಲೋಕ ಅದಾಲತ್ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಪಿಎಸ್ಐ ಸಂಜೀವ ರೆಡ್ಡಿ, ಸಹಾಯಕ ಸರ್ಕಾರಿ ಅಭಿಯೋಜಕ ಜ್ಯೋತಿ ಬಂದಿ, ಇಸ್ಮಾಯಿಲ್ ಪಟೇಲ್, ನ್ಯಾಯವಾದಿಗಳ ಸಂದ ತಾಲೂಕು ಅಧ್ಯಕ್ಷ ಕಮಲಾಕರ ರಾಠೋಡ್, ಪಿಎಸ್ಐ ಮಹಾಂತೇಶ ಪಾಟೀಲ್, ಪ್ರಭಾರಿ ಬಿಇಒ ಅಣ್ಣಪ್ಪ ಹಾದಿಮನಿ, ಸಾರಿಗೆ ಟಕ ವ್ಯವಸ್ಥಾಪಕ ಯೋಗಿರಾಜ ಸರಸಂಬಿ ಇತರರಿದ್ದರು.