ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಎಸ್​ಡಿಎಂಸಿ ಸದಸ್ಯರಾದ ರಾಜಣ್ಣ, ವಿಜಯ್​ಕುಮಾರ್​, ಶಿಕ್ಷಕರಾದ ಪ್ರವಿಣ್​ ಕುಮಾರ್​, ಸ್ನೇಹಹೆಗ್ಗಡೆ, ಕನಕಮ್ಮ, ಕವಿತಾ, ಮಂಜುಳಾ, ಪವಿತ್ರಾ, ರೂಪಾ ಇದ್ದರು. 
ರಾಜ್ಯ

ನಾಡಹಬ್ಬ ನವೆಂಬರ್​ಗೆ ಸೀಮಿತವಾಗದಿರಲಿ / NANDAGUDI

ನಂದಗುಡಿ : ಕನ್ನಡತನವನ್ನುಉಳಿಸಿ ಬೆಳೆಸುವ ಕಾರ್ಯಕ್ಕೆ ನಮ್ಮನ್ನು ನಾವುಸಮರ್ಪಿಸಿಕೊಳ್ಳಬೇಕಾದ ದಿನ. ಕನ್ನಡದ ಬಗೆಗಿನ ಪ್ರೀತಿ, ಕಾಳಜಿ ಈ ದಿನಕ್ಕಷ್ಟೇ ಸೀಮಿತವಾಗದೆ, ನಮ್ಮೆಲ್ಲರ ಬದುಕಿನ ನಿತ್ಯೋತ್ಸವವಾಗಬೇಕು ಎಂದು ಬೆಂ. ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನ ಸಂಘಟನಾ ಕಾರ್ಯದರ್ಶಿ ಟಿ.ನಾಗರಾಜ್​ ಹೇಳಿದರು.
ಹೋಬಳಿಯ ತಾವರೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ರಾಜ್ಯೋತ್ಸವ ನವೆಂಬರ್​ಗಷ್ಟೇಸೀಮಿತವಾಗದೆ ವರ್ಷವೆಲ್ಲಾ ರಾಜ್ಯೋತ್ಸವ ಪ್ರತಿ ಮನೆಮನೆಯಲ್ಲೂ ಹಬ್ಬದಂತೆ ಆಚರಣೆಯಾಗಬೇಕು. ಕನ್ನಡ ರಾಜ್ಯೋತ್ಸವ ಎಂದರೆ ನಮ್ಮ ಜನ, ಭಾಷೆ, ಸಂಸತಿ, ನೆಲ, ಜಲ ಎಲ್ಲವನ್ನೂ ಒಳಗೊಂಡಂತೆ ಕನ್ನಡ ಸಂಸತಿಯನ್ನು ಕನ್ನಡಿಗರು ಗೌರವಿಸಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ವೆಂಕಟರಮಣಪ್ಪ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ನಿಮ್ಮ ಮನೆಗಳಲ್ಲಿ ನಿಮ್ಮ ಮಾತೃ ಭಾಷೆಯನ್ನು ಮಾತನಾಡಬೇಕು. ಹೊರಗಡೆ ಬಂದ ನಂತರ ಅನ್ಯಭಾಷಿಕರಿಗೆ ನಮ್ಮ ಭಾಷೆ ಕಲಿಸಬೇಕು. ಕನ್ನಡ ಈಗಾಗಲೇ ಅತಿ ಎತ್ತರಕ್ಕೆ ಬೆಳೆದಿದೆ. ಆದರೆ, ಇದನ್ನು ಸಾರ್ವಜನಿಕವಾಗಿ ಬೆಳೆಸಬೇಕಾದ ಅಗತ್ಯವಿದೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ನೌಕರಿ ಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು. ಯಾವುದೇ ಕಾರ್ಖಾನೆಗಳಲ್ಲಿ ಮೊದಲು ಕನ್ನಡಿಗರಿಗೆ ಆದ್ಯತೆ ಸಿಗಬೇಕು ಎಂದರು.