ನೆಹರು ತಾರಾಲಯದಲ್ಲಿ ‘ನಾಸಾ’ದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಏರೋಸ್ಪೇಸ್ ಇಂಜಿನಿಯರ್ ಮತ್ತು ಆಸ್ಟ್ರೋನ್ಯಾವ್ ಪ್ರಾಜೆಕ್ಟೃ್ ಮ್ಯಾನೇಜರ್ ಡಾ. ಸ್ವಾತಿ ಮೋಹನ್ ಜತೆ ಆಯೋಜಿಸಿದ್ದ ಸಂವಾ 
ರಾಜ್ಯ

ನಾಸಾ- ಇಸ್ರೋ ದ್ವಿಪಕ್ಷೀಯ ಮಾತುಕತೆ

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಅಮೆರಿಕ ಮತ್ತು ಭಾರತ ನಾಗರಿಕ ಬಾಹ್ಯಾಕಾಶ ಕುರಿತು ಜಂಟಿ ಸಂಶೋಧನೆ ಸಂಬಂಧ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗಿದೆ. ಈ ವೇಳೆ ಬಾಹ್ಯಾಕಾಶ ಕ್ಷೇತ್ರ ಕುರಿತು ನಾಸಾ ಮತ್ತು ಇಸ್ರೋ ತಜ್ಞರ ನಡುವೆ ದ್ವಿಪಕ್ಷಿಯ ಮಾತುಕತೆ ನಡೆಯಲಿದೆ.
ನಗರದ ನೆಹರು ತಾರಾಲಯದಲ್ಲಿ ‘ನಾಸಾ’ದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಏರೋಸ್ಪೇಸ್ ಇಂಜಿನಿಯರ್ ಮತ್ತು ಆಸ್ಟ್ರೋನ್ಯಾವ್ ಪ್ರಾಜೆಕ್ಟೃ್ ಮ್ಯಾನೇಜರ್ ಡಾ. ಸ್ವಾತಿ ಮೋಹನ್ ಜತೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅಮೆರಿಕ ಚೆನ್ನೈ ಕಾನ್ಸುಲೇಟ್ ಎರಿಕ್ ಅಟ್ಕಿನ್ಸ್ ಮಾಹಿತಿ ನೀಡಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಮತ್ತು ಭಾರತದ ತಜ್ಞರ ನಡುವಿನ ಈ ದ್ವಿಪಕ್ಷೀಯ ಸಭೆಯು ಎರಡು ದೇಶಗಳ ನಡುವಿನ ಮುಂದಿನ ನಿಗದಿತ ಕಾರ್ಯಕ್ರಮವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳನ್ನು ನೀಡಲಾಗುವುದು. 2025ರ ೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸಭೆಯ ಬಳಿಕ ಇಸ್ರೋ ಮತ್ತು ನಾಸಾ ತಜ್ಞರ ಸಭೆ ನಡೆಸಲು ಉದ್ದೇಶಿಸಲಾಗಿತ್ತು ಎಂದರು.
"

ಆಳವಾದ ಬಾಹ್ಯಾಕಾಶ (ಡೀಪ್ ಸ್ಪೆಸ್) ಪರಿಶೋಧನೆಯಲ್ಲಿ ಸಂಚರಣೆ (ನ್ಯಾವಿಗೇಷನ್) ಅತ್ಯಂತ ದೊಡ್ಡ ಇಂಜಿನಿಯರಿಂಗ್ ಸವಾಲುಗಳಲ್ಲಿ ಒಂದಾಗಿದೆ. ಭೂಮಿ ಮೇಲೆ ನಮಗೆ ಜಿಪಿಎಸ್ ಉಪಗ್ರಹಗಳಿವೆ. ಆದರೆ, ಬಾಹ್ಯಾಕಾಶದಲ್ಲಿ ಜಿಪಿಎಸ್ ಇರುವುದಿಲ್ಲ. ತಮ್ಮ ಸ್ಥಾನವನ್ನು ನಿಖರವಾಗಿ ನಿರ್ಧರಿಸುವುದು ಮತ್ತು ಸಂಚರಿಸುವುದು ಆಳವಾದ ಬಾಹ್ಯಾಕಾಶ ಪರಿಶೋಧನೆಯ ಮೂಲಭೂತ ಸವಾಲುಗಳಲ್ಲಿ ಒಂದಾಗಿದೆ

— ಡಾ. ಸ್ವಾತಿ ಮೋಹನ್, ‘ನಾಸಾ’ ವಿಜ್ಞಾನಿ


2021ರ ಫೆಬ್ರವರಿಯಲ್ಲಿ ಮಂಗಳ ಗ್ರಹದ ಮೇಲೆ ನಾಸಾ ಪರ್ಸೆವೆರೆನ್ಸ್ ರೋವರ್ ಇಳಿಯುವಾಗ ಅದರ ಮಾರ್ಗದರ್ಶನ, ನ್ಯಾವಿಗೇಷನ್ ಮತ್ತು ನಿಯಂತ್ರಣ ಕಾರ್ಯಾಚರಣೆ ನೇತೃತ್ವವನ್ನು ಡಾ. ಸ್ವಾತಿ ಮೋಹನ್ ವಹಿಸಿದ್ದರು. ರೋವರ್‌ನ ಪ್ರವೇಶ, ಇಳಿಯುವಿಕೆ ಮತ್ತು ಲ್ಯಾಂಡಿಂಗ್ ಪ್ರಕ್ರಿಯೆಯ ವಿವರಣೆ (ಕಾಮೆಂಟರಿ) ಹಿಂದಿನ ಧ್ವನಿ ಎಂದೇ ಸ್ವಾತಿ ಗುರುತಿಸಿಕೊಂಡಿದ್ದರು.
ನಾಸಾದಿಂದ ಮಂಗಳ ಗ್ರಹ ಪರಿಶೋಧನಾ ಕಾರ್ಯಕ್ರಮ ವೈಜ್ಞಾನಿಕ ಮಾರ್ಗಸೂಚಿಯ ಮೂಲಕ ಮುಂದುವರಿದಿದೆ. ಪ್ರಮುಖವಾಗಿ ನೀರಿನ ಹುಡುಕಾಟದಿಂದ ಪ್ರಾರಂಭವಾಗಿ, ವಾಸಯೋಗ್ಯ ಪರಿಸರದ ಅಧ್ಯಯನದತ್ತ ಸಾಗಿ, ಈಗ ಪ್ರಾಚೀನ ಜೀವ ಸಂಕುಲದ ಕುರುಹುಗಳತ್ತ ಗಮನಹರಿಸುತ್ತಿದೆ ಎಂದು ಡಾ.ಸ್ವಾತಿ ವಿವರಿಸಿದರು.
ಏಕೀಕೃತ ಗುರಿಯನ್ನು ಸಾಧಿಸಲು ರೋವರ್, ಲ್ಯಾಂಡರ್ ಮತ್ತು ಆರ್ಬಿಟರ್‌ಗಳನ್ನು ಬಳಸಿಕೊಂಡು ಹೇಗೆ 3 ಪೂರಕ ದತ್ತಾಂಶಗಳನ್ನು ಪಡೆಯಬಹುದು ಎಂಬುದಕ್ಕೆ ಮಂಗಳ ಗ್ರಹ ಪರಿಶೋಧನಾ ಮಾರ್ಗಸೂಚಿಯು ಒಂದು ಉತ್ತಮ ಉದಾಹರಣೆಯಾಗಿದೆ. ಸಂಗ್ರಹಿಸಿದ ಮಾಹಿತಿ ಮುಂದಿನ ಸಂಶೋಧನೆಗೆ ವರ್ಗಾಯಿಸುವ ಮೂಲಕ ಮಂಗಳನ ಮೇಲ್ಮೈಯಲ್ಲಿ ಉತ್ತಮ ನಿಖರತೆ, ಉತ್ತಮ ರೆಸಲ್ಯೂಶನ್ ಮತ್ತು ಉತ್ತಮ ಸ್ಥಳ ಗುರುತಿಸುವಿಕೆ ಸಾಧಿಸಲಾಗುತ್ತದೆ ಎಂದು ಹೇಳಿದರು. ನೆಹರು ತಾರಾಲಯ ಸಂಸ್ಥೆಯ ನಿರ್ದೇಶಕ ಡಾ. ಗುರುಪ್ರಸಾದ್ ಸಂವಾದ ನಡೆಸಿಕೊಟ್ಟರು.

ಅಲ್ಲಿ ಮನುಷ್ಯರು ಜೀವಿಸಲು ಸಾಧ್ಯವೇ?

ಮಂಗಳಗ್ರಹವು ಅನೇಕ ವಿಷಯಗಳಲ್ಲಿ ಭೂಮಿಗೆ ಅತ್ಯಂತ ಹತ್ತಿರದ ಗುಣಲಕ್ಷಣಗಳು ಹೊಂದಿವೆ. ಅಲ್ಲಿನ ಗುರುತ್ವಾಕರ್ಷಣ ಶಕ್ತಿ ಭೂಮಿಕ್ಕಿಂತ ಕಡಿಮೆ ಇದ್ದರೂ 3ನೇ ಒಂದು ಭಾಗದಷ್ಟಿದೆ. ಆದರಿಂದ ಅದು ಸಂಪೂರ್ಣವಾಗಿ ಅಪರಿಚಿತ ಪರಿಸರವಲ್ಲ. ತಾಪಮಾನ ಭೂಮಿಗಿಂತ ಸಾಕಷ್ಟು ಕಡಿಮೆ ಇದ್ದರೂ ಅದು ಮಾನವರಿಗೆ ಸಂಪೂರ್ಣವಾಗಿ ಅಸಾಧ್ಯವಾದ ಪರಿಸರವಲ್ಲ ಎಂದು ಡಾ.ಸ್ವಾತಿ ಮೋಹನ್ ವಿವರಿಸಿದ್ದಾರೆ. ಮುಖ್ಯವಾಗಿ ಭೂಮಿಯಲ್ಲಿ ಇರುವ ಅನೇಕ ಖನಿಜಗಳು ಮತ್ತು ರಾಸಾಯನಿಕ ಉದಾಹರಣೆಗೆ ಕಾರ್ಬನ್ ಡೈ ಆಕ್ಸೆ ಡ್, ನೀರು ಅಥವಾ ನೀರಿನ ಗುರುತುಗಳು ಇವೆ.

ಈ ಕಾರಣದಿಂದ ಮಾನವ ಬಾಹ್ಯಾಕಾಶ ಅನ್ವೇಷಣೆಗೆ ಅಗತ್ಯವಾದ ರೋಬಾಟಿಕ್ ಮೂಲಸೌಕರ್ಯ ಹಾಗೂ ತಂತ್ರಜ್ಞಾನದ ಅಭಿವೃದ್ಧಿಪಡಿಸಲು ಮಂಗಳ ಅತ್ಯುತ್ತಮ ಪರೀಕ್ಷಾ ವೇದಿಕೆಯಾಗಿದೆ. ಮಂಗಳ ಗ್ರಹದಲ್ಲೇ ಆಮ್ಲಜನಕ ಉತ್ಪಾದಿಸುವ ಸಂಬಂಧ ಪರೀಕ್ಷೆಗಳು ನಡೆದಿವೆ. ಕಾರ್ಬನ್ ಡೈ ಆಕ್ಸೆಡ್‌ನಿಂದ ಯಶಸ್ವಿಯಾಗಿ ಅಮ್ಲಜನಕವನ್ನು ಉತ್ಪಾದಿಸಿದಾಗ ಅದರ ಶುದ್ಧತೆ ಶೇ.99.9 ಇರುವುದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.