Narcotics seized in Chintamani
ಚಿಂತಾಮಣಿ: ಚಿಂತಾಮಣಿ&ಬೆಂಗಳೂರು ಮುಖ್ಯರಸ್ತೆಯಲ್ಲಿ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಚಿನ್ನಸಂದ್ರದ ಸೈಯದ್ ಅರ್ಪಾಥ್ ಅಹ್ಮದ್ (23) ಎಂಬಾತನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತನಿಂದ 1.520 ಗ್ರಾಂ ಎಂಡಿಎಂಎ ಮಾದಕ ವಸ್ತು, ಬೈಕ್ ವಶಪಡಿಸಿಕೊಳ್ಳಲಾಗಿದೆ.
ಮತ್ತಿಬ್ಬರು ಆರೋಪಿಗಳಾದ ಮೊಹ್ಮದ್ ಅಬುಬಕ್ಕರ್ ಹಾಗೂ ರಿಯಾನ್ ಷರೀಪ್ ಪರಾರಿಯಾಗಿದ್ದಾರೆ.
ಅಬಕಾರಿ ಉಪ ಅಧೀಕ್ಷಕ ಜಿ.ಎಸ್.ಪಾಟೀಲ್ ನೇತೃತ್ವದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಲಾಯಿತು. ಪ್ರಕರಣ ದಾಖಲಿಸಲಾಗಿದೆ.