ಮಮದಾಪುರ: ಸಮೀಪದ ಹಿರೇನಂದಿ ಗ್ರಾಮದ ನಂದಿ ಬಸವೇಶ್ವರ ದೇವರ ಜಾತ್ರಾಮಹೋತ್ಸವ ಮಾ.29ರಿಂದ ಪ್ರಾರಂಭವಾಗಿದ್ದು, ಏ.4ರ ವರೆಗೆ ಸಂಭ್ರಮದ ಜಾತ್ರಾ ಮಹೋತ್ಸವ ನಡೆಯಲಿದೆ.
ಏ.1ರಂದು ರಾತ್ರಿ 9ಕ್ಕೆ ಡೊಳ್ಳಿನ ಪದ, ಶಿವ ಭಜನೆ ಜರುಗಲಿದೆ. ಏ.2ರ ಬೆಳಗಿನ ಜಾವ 4ಗಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಪಾರ್ವತಿ ಪರಮೇಶ್ವರ ಉತ್ಸವ ಜರುಗಲಿದೆ. ಬಳಿಕ ಮುತೆದೆಯರಿಗೆ ಉಡಿ ತುಂಬುವುದು ಹಾಗೂ ಸದಾನಂದಯ್ಯ ಸ್ವಾಮೀಜಿಗಳಿಂದ ಕಲಶಾರೋಹಣ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 6ಕ್ಕೆ ನಂದೀಶ್ವರ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ
ಜರುಗಲಿದೆ. ಬಳಿಕ ಗ್ರಾಮಸ್ಥರಿಂದ ನೈವೇದ್ಯ ಅರ್ಪಣೆ, 10ಗಂಟೆಗೆ ಅನ್ನ ಸಂತರ್ಪಣೆಗೆ ನಡೆಯಲಿದೆ. ಬಳಿಕ ಸಂಜೆ 6.15ಕ್ಕೆ ತವಗ ಮಠದ ಬ್ರಹ್ಮಶ್ರೀ ಮುದಿ ಬಾಳಯ್ಯ ಕುಮಾರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿ 10.30ಕ್ಕೆ "ಸಾವು ಗೆದ್ದ ಸೈನಿಕ' ಸಾಮಾಜಿಕ ನಾಟಕ ಪ್ರದರ್ಶನವಿದೆ. ಏ.3ರಂದು ಬೆಳಗ್ಗೆ 9ಕ್ಕೆ ಎತ್ತಿನ ಬಂಡಿ ಹಾಗೂ ಜೋಡು ಕುದುರೆ ಸ್ಪರ್ಧೆಗೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ. ಸಂಜೆ 5ಕ್ಕೆ ಜಂಗಿ ಕುಸ್ತಿಗಳು ನಡೆಯಲಿದೆ. ರಾತ್ರಿ 10.30ಕ್ಕೆ "ಸಂಗ್ಯಾ& ಬಾಳ್ಯಾ' ನಾಟಕ ಪ್ರದರ್ಶನವಿದೆ. ಏ.4ರಂದು ಮಧ್ಯಾಹ್ನ 12ಕ್ಕೆ ಗ್ರಾಮದ ಎಲ್ಲ ದೇವರ ವಾಲಗಗಳು ಆಗಮನ, ರಾತ್ರಿ 8ಗಂಟೆಗೆ ತೇರಿನ ಕಳಶ ಇಳಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.