ಮಾಶಾಳ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಅಸಂಖ್ಯ ಭಕ್ತರ ಜೈೂಷದ ಮಧ್ಯೆ ದೇವಿ ಶೂಲ ಮುಟ್ಟಿದಳು. 
ರಾಜ್ಯ

ಚೌಡೇಶ್ವರಿ ಜಗನ್ಮಾತೆಗೆ ನಮೋ ನಮಃ

ಪ್ರಮುಖ ಮುಖ್ಯಾಂಶಗಳು

  • ಮಾಶಾಳದಲ್ಲಿ ಜಾತ್ರೋತ್ಸವ ಸಂಭ್ರಮ
  • ಅಸಂಖ್ಯ ಭಕ್ತರ ಮಧ್ಯೆ ಶೂಲ ಮುಟ್ಟಿದ ತಾಯಿ
ಕರಜಗಿ: ಮಾಶಾಳ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಅಸಂಖ್ಯಾತ ಭಕ್ತರ ಜೈೂಷ ಮಧ್ಯೆ ವೈಭವದಿಂದ ಶೂಲ ಮುಟ್ಟುವ ಕಾರ್ಯಕ್ರಮ ಜರಗಿತು.
ಮೇ 6ರಿಂದ ಜಾತ್ರೋತ್ಸವ ಆರಂಭವಾಗಿದ್ದು, ಮೇ 29ರವರೆಗೆ ನಡೆಯುತ್ತದೆ. ಎಂಟನೇ ದಿನವಾದ ಶುಕ್ರವಾರ ಬೆಳಗ್ಗೆ ದೇವಸ್ಥಾನದಲ್ಲಿ ದೇವಿ ಆರಾಧಕ ಶರಣಬಸು ಕುಂಬಾರ ಅವರು ಚೌಡೇಶ್ವರಿ ದೇವಿ ಮೂರ್ತಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಭಕ್ತರು ಮಾತೆಗೆ ದಂಡಿ, ಹೂ, ಕಾಯಿ&ಕರ್ಪೂರ ಅರ್ಪಿಸಿ ದರ್ಶನ ಪಡೆದರು.
ಮಧ್ಯಾಹ್ನ 12ಕ್ಕೆ ಚಪ್ಪದ ಕಟ್ಟಿ ತಲುಪಿ 4 ಆಟಗಳು ನಡೆದವು. ಗ್ರಾಮದ ಮುಖಂಡರೆಲ್ಲರೂ ಹೋಗಿ ಸಂಜೀವಕುಮಾರ ಅಂಕದ ಅವರನ್ನು ಕರೆದುಕೊಂಡು ಬಂದು, 4 ಕಟ್ಟಿಗೆಗಳನ್ನು ನೆಟ್ಟು ಅದರ ಮೇಲೆ ಬಡಗಿ ಹಿಡಿದುಕೊಂಡು ಅಂಕದ ಕುಳಿತುಕೊಳ್ಳುತ್ತಾರೆ. ಚೌಡೇಶ್ವರಿ ದೇವಿಯು ತನ್ನ ಬೆಳ್ಳಿ ಬೆತ್ತದಿಂದ ಅಂಕದ ಅವರ ಕೈಯಲ್ಲಿದ್ದ ಕಟ್ಟಿಗೆಗೆ ಮೂರು ಬಾರಿ ಹೊಡೆಯುವ ಮೂಲಕ ಶೂಲ ಮುಟ್ಟಿದಳು. ಈ ವೇಳೆ ಅಸಂಖ್ಯ ಭಕ್ತರು ಜಗನ್ಮಾತೆಗೆ ಜಯವಾಗಲಿ.. ಚೌಡೇಶ್ವರಿಗೆ ನಮೋ ನಮ@.. ಮಾಶಾಳ ಚೌಡಮ್ಮ ದೇಶಕ್ಕೆ ದೊಡ್ಡಾಕಿ.. ಎಂಬ ಜೈೂಷ ಕೂಗಿದರು.
ದೇವಸ್ಥಾನ ಕಮಿಟಿ ಅಧ್ಯ ದುಂಡಪ್ಪ ಕುಂಬಾರ, ಪ್ರಮುಖರಾದ ಶಿವರುದ್ರಪ್ಪ ಅವಟೆ, ವಿಶ್ವನಾಥ ರೇವೂರ, ಚಂದ್ರಾಮ ಕುಂಬಾರ, ಶಂಕರ ನಾವಿ, ಧೂಳಪ್ಪ ರಾದಾ, ಅಣ್ಣಾರಾವ ಪ್ರಧಾನಿ, ಸಂತೋಷ ಗಂಜಿ, ಶಿವು ಪ್ಯಾಟಿ, ಶಿವಪುತ್ರ ಜಿಡ್ಡಗಿ, ಸೂರ್ಯಕಾಂತ ರಾಕಾ, ಮಲ್ಲಿನಾಥ ಗಡೆದ, ಬಸವ ಹಡಪದ, ಚನ್ನಪ್ಪ ಹಳಗೋಧಿ, ಸಿದ್ದರಾಮ ಐಸುರ, ಗುಂಡು ಕುಲಕರ್ಣಿ, ಸಂತೋಷ ಮರಾಟೆ, ಆಕಾಶ ಪ್ರಧಾನಿ ಇತರರಿದ್ದರು.
"

ಜಗನ್ಮಾತೆ ಚೌಡೇಶ್ವರಿ ನ್ಯಾಯ ದೇವತೆಯಾಗಿದ್ದು, ಭಕ್ತಿಯಿಂದ ಪೂಜಿಸಿದರೆ ಎಲ್ಲರಿಗೂ ಒಳಿತನ್ನು ಮಾಡುತ್ತಾಳೆ. ದೇವಿ ಆರಾಧನೆಯಿಂದ ದಾರಿದ್ರ ಹೋಗಿ, ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಭಕ್ತರ ಸಹಕಾರದಿಂದ ಉತ್ಸವ ಅಚ್ಚುಕಟ್ಟಾಗಿ ನಡೆದಿದೆ.

— > ಶಿವರುದ್ರಪ್ಪ ಅವಟೆ, ರೈತ ಮುಖಂಡ, ಮಾಶಾಳ