ನಮ್ಮ ಮೆಟ್ರೋ ಟಿಕೆದ್ ದರ ಏರಿಕೆ
- ಮತ್ತೊಮ್ಮೆ ಟಿಕೆಟ್ ಬೆಲೆ ಏರಿಕೆಗೆ ಮುಂದಾದ ನಮ್ಮ ಮೆಟ್ರೋ
- ಕಳೆದ ವರ್ಷ ಫೆಬ್ರವರಿಯಲ್ಲಿ ಶೇ.71 ರಷ್ಟು ಬೆಲೆ ಏರಿಸಿದ್ದ ಬಿಎಂಆರ್ಸಿಎಲ್
- ಇದೀಗ ಮತ್ತೆ ಫೆಬ್ರವರಿ ತಿಂಗಳಲ್ಲಿ ಶೇ.5ರಷ್ಟು ಹೆಚ್ಚಳಕ್ಕೆ ಮುಂದಾಗಿದೆ
ಬೆಂಗಳೂರು: ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಟಿಕೆಟ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಿದ್ದ ನಮ್ಮ ಮೆಟ್ರೋ ( Namma Metro ) ಇದೀಗ, ಮತ್ತೊಮ್ಮೆ ಬೆಲೆ ಏರಿಕೆಗೆ ಸಜ್ಜಾಗಿದೆ. ಇದೇ ಫೆ.09ರಿಂದ ಮತ್ತೊಮ್ಮೆ ಮೆಟ್ರೋ ದರ ಹೆಚ್ಚಳಕ್ಕೆ ಬಿಎಂಆರ್ಸಿಎಲ್ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಚಿತ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) 2026ರ ಫೆಬ್ರವರಿಯಿಂದ ಶೇ.5ರಷ್ಟು ಟಿಕೆಟ್ ದರ ಹೆಚ್ಚಿಸಲು ಮುಂದಾಗಿದೆ. ದರ ನಿಗದಿ ಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಈ ದರ ಹೆಚ್ಚಳವಾಗಲಿದೆ. ಫೇರ್ ಫಿಕ್ಸಿಂಗ್ ಕಮಿಟಿ (FARE FIXING COMMITTEE) ಸಲಹೆಯಂತೆ ಮೆಟ್ರೋ ದರ ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಎಲ್ಲಿಂದ ಎಲ್ಲಿಗೆ ಎಷ್ಟೆಷ್ಟು?
- ವೈಟ್ ಫೀಲ್ಡ್ ಟು ಚೆಲ್ಲಘಟ್ಟ ಸದ್ಯ 90 ರುಪಾಯಿ ದರವಿದ್ದು, ಶೇ.5ರಷ್ಟು ಏರಿಕೆಯಿಂದ 95 ರೂ. ಏರಿಕೆಯಾಗಲಿದೆ (ನೇರಳೆ ಮಾರ್ಗ)
- ಸಿಲ್ಕ್ ಇನ್ಸ್ಟಿಟ್ಯೂಟ್ ಟು ಮಾದಾವರ ಸದ್ಯ 90 ರೂ. ಇದ್ದು, ಶೇ.5ರಷ್ಟು ದರ ಏರಿಕೆಯ ಬಳಿಕ 95 ರೂ. ಆಗಲಿದೆ ( ಗ್ರೀನ್ ಲೈನ್ )
- ಆರ್.ವಿ ರೋಡ್ ಟು ಬೊಮ್ಮಸಂದ್ರ ಸದ್ಯ 60 ರುಪಾಯಿ ಇದ್ದು, ಶೇ.5ರಷ್ಟು ದರ ಏರಿಕೆಯಿಂದ 63 ರೂ. ಆಗಲಿದೆ ( ಯೆಲ್ಲೋ ಲೈನ್ )
- ಮೆಜೆಸ್ಟಿಕ್ನಿಂದ ವೈಟ್ಫೀಲ್ಡ್ ದರ 80 ರೂ. ಇದ್ದು, ಏರಿಕೆ ನಂತರ 84 ರೂ. ಆಗಲಿದೆ.
- ಮೆಜೆಸ್ಟಿಕ್-ಬೊಮ್ಮಸಂದ್ರ 84 ರೂ. ಆಗಲಿದೆ
- ಮೆಜೆಸ್ಟಿಕ್-ಚಲ್ಲಘಟ್ಟ 63 ರೂ. ಆಗಲಿದೆ
ಹೊಸ ಮೆಟ್ರೋ ದರ ವಿವರ
10-15 ಕಿ.ಮೀ : 60 → 63 ರೂ.
15-20 ಕಿ.ಮೀ : 70 → 74 ರೂ.
20-25 ಕಿ.ಮೀ : 80 → 84 ರೂ.
25-30 ಕಿ.ಮೀ : 90 → 95 ರೂ.
ಒಟ್ಟು 10 ಫೇರ್ ಜೋನ್‌ಗಳಲ್ಲಿ ದರ ಪರಿಷ್ಕರಣೆ ಜಾರಿಯಾಗಲಿದೆ. ಕಳೆದ 7.5 ವರ್ಷಗಳ ಬಳಿಕ ದರ ಪರಿಷ್ಕರಣೆ ಮಾಡಲಾಗಿದ್ದು, ಭವಿಷ್ಯದಲ್ಲಿ ಏಕಾಏಕಿ ದರ ಹೆಚ್ಚಳ ತಪ್ಪಿಸಲು ಪ್ರತಿವರ್ಷ ಸ್ವಯಂಚಾಲಿತ ದರ ಬದಲಾವಣೆ ಆಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ದರ ಏರಿಕೆ ಏಕೆ?
ವಿದ್ಯುತ್ ದರ ಏರಿಕೆ, ನಿರ್ವಹಣೆ ವೆಚ್ಚ ಹೆಚ್ಚಳ, ಸಾಲ ಮರುಪಾವತಿ ಮತ್ತು ಆರ್ಥಿಕ ಸ್ಥಿರತೆಗಾಗಿ ದರ ಹೆಚ್ಚಳ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಈ ಏರಿಕೆಯಿಂದ ಪ್ರಯಾಣಿಕರಿಗೆ (ವಿಶೇಷವಾಗಿ ದೈನಂದಿನ ಕಾರ್ಮಿಕರು) ಹೆಚ್ಚಿನ ಹೊರೆ ಆಗಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಸ್ಮಾರ್ಟ್ ಕಾರ್ಡ್ ಅಥವಾ QR ಟಿಕೆಟ್ ಬಳಸುವವರಿಗೆ 5% ರಿಯಾಯಿತಿ ಮುಂದುವರಿಯುತ್ತದೆ.
ದರ ಏರಿಕೆ ಖಂಡಿಸಿದ ಸಂಸದ ತೇಜಸ್ವಿ ಸೂರ್ಯ
"ಬೆಲೆ ಏರಿಕೆಗೆ ರಾಜ್ಯ ಸರ್ಕಾರವನ್ನು ಟೀಕಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಅಭಿವೃದ್ಧಿ ಕೆಲಸಗಳಿಗೆ 'ನೋ' ಎನ್ನುವ ಕಾಂಗ್ರೆಸ್ ಸರ್ಕಾರ, ಮೆಟ್ರೋ ಟಿಕೆಟ್ ದರ ಏರಿಕೆಗೆ 'ಯೆಸ್' ಎಂದು ಹೇಳುವುದು ಎಷ್ಟು ಸರಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸಬ್ ಅರ್ಬನ್ ರೈಲು ಯೋಜನೆ ಮಾಡಲ್ಲ, ಗುಂಡಿಗಳನ್ನು ಮುಚ್ಚುವುದಿಲ್ಲ. ಕಸ ಕ್ಲೀನ್ ಮಾಡೋದಿಲ್ಲ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲ್ಲ, ಮೆಟ್ರೋ ಕಾಮ" ಎಂದು ಆಕ್ರೋಶ ಹೊರಹಾಕಿದ್ದಾರೆ.