ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ಭಾನುವಾರ ನಾಗದೇವರುಗಳ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ವೇ. ಶಾಂತವೀರಯ್ಯ ಸ್ವಾಮಿ, ಶರಣಯ್ಯಸ್ವಾಮಿ ಪತ್ರಿಮಠ ಇವರುಗಳ ವೈದಿಕತ್ವದಲ್ಲಿ ಶಾಸ್ತೊಥಕ್ತವಾಗಿ ಜರುಗಿತು.ಶಂಭುಲಿಂಗಪ್ಪ ಅರುಣಿ ಇತರರಿದ್ದರು. 
ರಾಜ್ಯ

ಬಾಂದ್ಯವ್ಯ ವೃದ್ಧಿಸುವ ನಾಗರ ಪಂಚಮಿ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಸ್ಥ ಶಂಭುಲಿಂಗಪ್ಪ ಹೇಳಿಕೆ
  • ಗಾಜರಕೋಟ ಗ್ರಾಮದಲ್ಲಿ ನೂತನ ನಾಗರ ಕಟ್ಟೆ ಲೋಕಾರ್ಪಣೆ
 ಯಾದಗಿರಿ: 

ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ನಾಗರ ಪಂಚಮಿಗೆ ಮುನ್ನಾದಿನ ಭಾನುವಾರ ಮರಗಮ್ಮ ದೇವಿ ದೇವಸ್ಥಾನದ ಹತ್ತಿರ ನೂತನ ನಾಗರ ಕಟ್ಟೆಯ ಮೇಲೆ ನಾಗದೇವರುಗಳ ಪ್ರತಿಷ್ಠಾಪನೆ ಕಾರ್ಯಕ್ರಮವು ವೇ. ಶಾಂತವೀರಯ್ಯ ಸ್ವಾಮಿ, ಶರಣಯ್ಯಸ್ವಾಮಿ ಪತ್ರಿಮಠ ಇವರುಗಳ ವೈದಿಕತ್ವದಲ್ಲಿ ಶಾಸ್ತೊಥಕ್ತವಾಗಿ ಜರುಗಿತು.

ಈ ವೇಳೆ ಮಾತನಾಡಿದ ಅರಿವು-ಆಚಾರ ಸಧ್ಬಾವನಾ ಸಂಸ್ಥೆ ಮುಖ್ಯಸ್ಥ ಶಂಭುಲಿಂಗಪ್ಪ ಅರುಣಿ, ನಾಗಾರಾಧನೆ ಪುರಾತನ ಕಾಲದಿಂದ ನಡೆದು ಬಂದ ನಮ್ಮ ಭಾರತೀಯ ಸನಾತನ ಸಂಸ್ಕೃತಿಯಾಗಿದೆ. ನಾಗ ಪಂಚಮಿಯ ಔಚಿತ್ಯ ಸಕಲ ಜೀವರಾಶಿಗಳಲ್ಲಿ ದೈವತ್ವವನ್ನು ಕಾಣುವುದು ಎಂಬುದಾಗಿದೆ. ವಿಶೇಷವಾಗಿ ಇದು ತವರಿನ ಬಾಂದವ್ಯ ಸಾರುವ ಹೆಣ್ಣು ಮಕ್ಕಳಿಗಾಗಿಯೇ ಇರುವ ನಾಗಪಂಚಮಿ ಹಬ್ಬವಾಗಿದೆ ಎಂದರು.
ಕುಟುಂಬದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ, ಬಾಂದವ್ಯ ವೃದ್ಧಿಸುವ ದಿಸೆಯಲ್ಲಿ ಹಬ್ಬಗಳು ಮಹತ್ವ ಪಡೆದಿವೆ ಎಂದರು.ಗ್ರಾಮದಲ್ಲಿ ನಮ್ಮ ಪೂರ್ವಿಕರು ಸ್ಥಾಪಿಸಿದ್ದ ನಾಗರ ಕಟ್ಟೆ ಪಾಳುಬಿದ್ದು ಹಾಳಾಗಿತ್ತು, ಈಗ ಎಂದು ಸದ್ಭಕ್ತ ಗ್ರಾಮಸ್ಥರ ಸಹಕಾರದಿಂದ ಈ ನಗರ ಕಟ್ಟೆಯನ್ನು ಜೀರ್ಣೋದ್ಧಾರ ಮಾಡಿ ನೂತನವಾಗಿ ನಾಗರಕಟ್ಟೆಯನ್ನು ನಿರ್ಮಾಣ ಮಾಡಿ, ಇಲ್ಲಿ ನಾಗಪಂಚಮಿಗೆ ಜನತೆಗೆ ಅನುಕೂಲವಾಗಲೆಂದು ನೂತನ ನಾಗರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಮಹಿಳೆಯರಿಗೆ ಪಂಚಮಿಯಂದು ನಾಗ ದೇವರಿಗೆ ಹಾಲೆರೆಯಲು ಸೂಕ್ತ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ ಎಂದರು.
ನಾಗರ ಪಂಚಮಿಯ ದಿನವಾದ ಸೋಮವಾರ ಗ್ರಾಮದ ಮಹಿಳೆಯರು ನೂತನ ನಾಗರ ಕಟ್ಟೆಯ ನಾಗ ದೇವರಿಗೆ ಪೂಜಿಸಿ, ಹಾಲೆರೆದು ನೈವೈದ್ಯ ಅರ್ಪಿಸಿ ಸಂಭ್ರಮಿಸಿದರು. ಇದೇ ವೇಳೆಯಲ್ಲಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನವೀಕೃತಗೊಂಡ ನವಗ್ರಹ ಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು, ಯುವಕರು, ಮಹಿಳೆಯರು ಇತರರಿದ್ದರು.