ತಲ್ಲೂರ ಗ್ರಾಮದ ವಿಠ್ಠಲ ರುಕ್ಮಿಣಿ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾರುತಿ ಮಹಾರಾಜರು ಆಶೀರ್ವಚನ ನೀಡಿದರು. ಗೋವಿಂದ ಮಹಾರಾಜರು, ಕೀರಪ್ಪ ಮಹಾರಾಜರು, ಪರಶುರಾಮ ಜಾಧವ ಇತರರಿದ್ದರು.
ತಲ್ಲೂರ: ಪುರಾಣ ಪ್ರವಚನಗಳು ಮನುಷ್ಯನಲ್ಲಿ ವಿಚಾರಶಕ್ತಿ ಹೆಚ್ಚಿಸುತ್ತವೆ. ಇದರಿಂದ ದೆನಂದಿನ ಬದುಕಿನ ಸಮಸ್ಯೆಗೆ ಉತ್ತರ ಸಿಗುತ್ತಿದೆ ಎಂದು ರಾಮದುರ್ಗದ ಶಿವನಪ್ಪ ಮಹಾ
ರಾಜರು ಹೇಳಿದರು.ಗ್ರಾಮದ ವಿಠ್ಠಲ ರುಕ್ಮಿಣಿ ಜಾತ್ರಾ ಮಹೋತ್ಸವದ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಜಗತ್ತಿನಲ್ಲಿ ಸಷ್ಟಿಯಾದ ಸಕಲ ವಸ್ತು
ಭಗವಂತನಿಂದ ಸಷ್ಟಿಯಾಗಿದ್ದು, ದೇವರಿಗೆ ಕತರಾಗಿರಬೇಕು ಎಂದರು. ರೆನಾಪುರದ ವೆಂಕಪ್ಪ ಮಹಾರಾಜರು ಮಾತನಾಡಿದರು. ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರ ಆರತಿಯೊಂದಿಗೆ ಪಾಂಡುರಂಗನ ಪಲ್ಲಕ್ಕಿ ಉತ್ಸವ ಹಾಗೂ ಮಹಾ ಪ್ರಸಾದ ಜರುಗಿತು. ಹೂಗಾರದ ಗೋವಿಂದ ಮಹಾರಾಜರು, ಕೀರಪ್ಪ ಮಹಾರಾಜರು, ಪರಶುರಾಮ ಜಾಧವ, ಯಲ್ಲಪ್ಪ ಉಪ್ಪಾರ, ಸಿದ್ದಪ್ಪ ಕಡಕೋಳ, ಚಂದ್ರಪ್ಪ ಭೋವಿ, ಹನಮಂತ ಜಗಮನಿ, ಫಕೀರಪ್ಪ ಹವಾಲ್ದಾರ, ಭೀಮಶಿ ಉಪ್ಪಾರ, ಗೋವಿಂದ ಯರಗಟ್ಟಿ, ಮಲ್ಲಪ್ಪ ದೊಡವಾಡ, ಸಂಗಪ್ಪ ಕಾಜಗಾರ, ಶಿವಾಜಿ ಬೊಯಿಟೆ, ವಿಠ್ಠಲ ಕಲ್ಲನ್ನವರ, ಯಲ್ಲಪ್ಪ ದೊಡಮನಿ, ಕೀರಪ್ಪ ಭಜಂತ್ರಿ, ವಿಠ್ಠಲ ದೊಡಮನಿ,
ಬಸವರಾಜ ಈಟಿ, ದುಂಡಪ್ಪ ಮಾಳಗಿ, ಕಾಶವ್ವ ಹೂಗಾರ ಇತರರು ಇದ್ದರು.