ಮೈಸೂರು ದಸರಾ ಆನೆಗಳ ತೂಕ ಪರೀಕ್ಷೆ 
ರಾಜ್ಯ

ಮೈಸೂರು ದಸರಾ ಆನೆಗಳ ತೂಕ ಪರೀಕ್ಷೆ: ಶ್ರೀಕಂಠ ಪ್ರಥಮ, ಕೊನೇ ಸ್ಥಾನದಲ್ಲಿ ಕಾವೇರಿ; ಇಲ್ಲಿದೆ ನೋಡಿ ಪಟ್ಟಿ | Mysuru Dasara Elephants

ಪ್ರಮುಖ ಮುಖ್ಯಾಂಶಗಳು

  • ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭ
  • ಆರಮನೆಗೆ ಲಗ್ಗೆಯಿಟ್ಟಿರುವ ಆನೆಗಳ ತೂಕ ಪರೀಕ್ಷೆ ಮುಕ್ತಾಯ
  • ಹೆಚ್ಚಿನ ತೂಕ ಹೊಂದುವ ಮೂಲಕ ಅಗ್ರಸ್ಥಾನಕ್ಕೇರಿದ ಶ್ರೀಕಂಠ ಆನೆ
ಮೈಸೂರು: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು, ಈಗಾಗಲೇ ಗಜಪಡೆಯು ಸಾಂಸ್ಕೃತಿಕ ನಗರಿಗೆ ಅದ್ಧೂರಿಯಾಗಿ ಎಂಟ್ರಿಕೊಟ್ಟಿದೆ. ತಾಲೀಮು ಸಿದ್ಧತೆಗೂ ಮುನ್ನ ನಡೆಸಿದ ದಸರಾದಲ್ಲಿ ಪಾಲ್ಗೊಳ್ಳಲಿರುವ 9 ಆನೆಗಳ ತೂಕ ಮಾಪನದಲ್ಲಿ ಇದೀಗ ಶ್ರೀಕಂಠ ಮೊದಲ ಸ್ಥಾನವನ್ನು ಅಲಂಕರಿಸಿದೆ.
ಆರಂಭದಲ್ಲಿ ಮೈಸೂರು ದಸರಾ ಉತ್ಸವಕ್ಕೆ 12 ಆನೆಗಳ ಪಟ್ಟಿಯನ್ನು ಪ್ರಕಟಿಸಿದ ಅರಣ್ಯ ಇಲಾಖೆ, ಅಂಬಾರಿ ಹೊರುತ್ತಿದ್ದ ಅಭಿಮನ್ಯುವನ್ನು ಕೈ ಬಿಡುವ ಮೂಲಕ ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಹೊಸ ಆನೆಯೇ ಅಂಬಾರಿ ಹೊರಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಈಗ ಶ್ರೀಕಂಠ ಹೆಚ್ಚು ತೂಕ ಹೊಂದುವ ಮೂಲಕ ಪ್ರಥಮ ಸ್ಥಾನ ಪಡೆದಿರುವುದನ್ನು ನೋಡಿದರೆ, ನಾಡದೇವತೆಯನ್ನು ಶ್ರೀಕಂಠನೇ ಹೊರುವ ಸಾಧ್ಯತೆ ಹೆಚ್ಚಿದೆ.
ಮೈಸೂರಿಗೆ ತಲುಪಿರುವ ಮೊದಲ ತಂಡದ ಆನೆಗಳ ತೂಕದ ಪರೀಕ್ಷೆಯಲ್ಲಿ ಶ್ರೀಕಂಠ, ಮಹೇಂದ್ರ, ಲಕ್ಷ್ಮಿ, ಪ್ರಶಾಂತ, ಧನಂಜಯ, ಶ್ರೀರಾಮ, ಕಾವೇರಿ, ಗೋಪಿ, ಏಕಲವ್ಯ ಭಾಗವಹಿಸಿತು. ಈ ಪೈಕಿ ಅತ್ಯಂತ ತೂಕದ ಹಸ್ತಿಯಾಗಿ ಶ್ರೀಕಂಠ ಪ್ರಥಮ ಸ್ಥಾನಕ್ಕೇರಿದರೆ, ಕಡಿಮೆ ತೂಗಿದ ಕಾವೇರಿ ಪಟ್ಟಿಯಲ್ಲಿ ಕೊನೇ ಸ್ಥಾನ ಪಡೆದಿದೆ. ಅಲ್ಲಿಗೆ, ತೂಕ ಮಾಪನಕ್ಕೆ ಒಳಪಟ್ಟ ಒಟ್ಟು 9 ಆನೆಗಳ ತೂಕವನ್ನು ಇದೀಗ ಅಂತಿಮವಾಗಿ ಪ್ರಕಟಿಸಲಾಗಿದೆ.

9 ಆನೆಗಳ ತೂಕ ಪಟ್ಟಿ

  1. ಶ್ರೀಕಂಠ 5,790 ಕೆಜಿ (ಪ್ರಥಮ ಸ್ಥಾನ)
  2. ಏಕಲವ್ಯ 5,600 ಕೆಜಿ
  3. ಧನಂಜಯ 5,530 ಕೆಜಿ
  4. ಮಹೇಂದ್ರ - 5,490 ಕೆಜಿ
  5. ಪ್ರಶಾಂತ 5,205 ಕೆಜಿ
  6. ಗೋಪಿ 5,170 ಕೆಜಿ
  7. ಶ್ರೀರಾಮ 4,820 ಕೆಜಿ
  8. ಲಕ್ಷ್ಮಿ 3,990 ಕೆಜಿ
  9. ಕಾವೇರಿ 3,075 ಕೆಜಿ