ಅಂತಾರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು. ರುದ್ರಯ್ಯ ರೊಟ್ಟಯ್ಯನವರ, ಶಂಕರ ಮಾಡಲಗಿ, ಈರಣ್ಣ ಕರಿಕಟ್ಟಿ, ಚಂದ್ರಶೇಖರ ಕಾರಿಮನಿ, ಅಶೋಕ ಮತ್ತಿಕೊಪ್ಪ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೆಲಹೊಂಗಲ/ಮಲ್ಲಮ್ಮನ ಬೆಳವಡಿ
ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವ-&2026 ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಪ್ರೇಕ್ಷಕರಿಗೆ ರಸದೌತಣ ನೀಡಿದವು. ಸಿಳ್ಳೆ, ಚಪ್ಪಾಳೆಗಳ ಮೂಲಕ ಕುಸ್ತಿ ಪಟುಗಳಿಗೆ ಪ್ರೋತ್ಸಾಹ ದೊರೆಯಿತು.
ಶಾಸಕ ಮಹಾಂತೇಶ ಕೌಜಲಗಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಪುರುಷರ ವಿಭಾಗದ ಅಂತಾರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಪುಣೆಯ ಪೈಲ್ವಾನ್ ಅಜಯ ಅವರು ಘೀಸಾ ಡಾವ ಮೂಲಕ ಬ್ರೆಜಿಲ್ ದೇಶದ ಪ್ರಡೆಲಾ ಲಿಮಾ ಅವರನ್ನು ಚಿತ್ತ ಮಾಡಿ ಜಯಗಳಿಸಿದರು. ಮಹಾರಾಷ್ಟ್ರದ ಪೈಲ್ವಾನ್ ಸತೀಶ್ ಮುಂಡೆ ಆಟಪಾಡೆ ಅವರು ದೆಹಲಿಯ ವೀರೇಂದ್ರ ಸಿಂಗ್ ಅವರನ್ನು ಡಾಕ್ ಡಾವ ಸೋಲಿಸಿದರು.
ದೆಹಲಿಯ ಪೈಲ್ವಾನ್ ಅಜಯಕುಮಾರ ಅವರನ್ನು ಧಾರವಾಡದ ನಾಗರಾಜ ಬಸಿಡೋಣಿ ನಿಕಾಲಿ ಡಾವ ಮೂಲಕ ಸೋಲಿಸಿದರು. ಹಳಿಯಾಳದ ಪೈಲ್ವಾನ್ ರೋಹನ ವಡೆ ಕೋಲ್ಲಾಪುರದ ಶ್ರೇಯಸ್ ಅವರನ್ನು ಘೀಸಾ ಡಾವ ಮೂಲಕ ಸೋಲಿಸಿದರು. ಒಟ್ಟು 36 ಪುರುಷರ ಕುಸ್ತಿ ನಡೆದವು.
ಮಹಿಳಾ ವಿಭಾಗ: ಮಹಾರಾಷ್ಟ್ರದ ಪೈ. ಸಂಚಿತಾ ಮೋರೆ ಹಳಿಯಾಳದ ಪೈ.ಮಾನಸಿ ಚಿತ್ತ ಮಾಡಿ ಜಯಗಳಿಸಿದರು. ಮಹಾರಾಷ್ಟ್ರದ ಪೈ. ದುರ್ಗಾ ನಾಯಕ ಅವರನ್ನು ದಸರಾ ಕೇಸರಿ ಸ್ವಾತಿ ಪಾಟೀಲ ಕಡೋಲಿ ಚಿತ್ತ ಮಾಡಿ ವಿಜಯಶಾಲಿಯಾದಳು. ಮಹಿಳಾ ವಿಭಾಗದಲ್ಲಿ ಒಟ್ಟು 5 ಕುಸ್ತಿಗಳು ನಡೆದವು. ಮಲ್ಲಮ್ಮ ಸಹಕಾರಿ ಅಧ್ಯ ರುದ್ರಯ್ಯ ರೊಟ್ಟಯ್ಯನವರ, ಜೆಡಿಎಸ್ ಜಿಲ್ಲಾಧ್ಯ ಶಂಕರ ಮಾಡಲಗಿ, ತಹಸೀಲ್ದಾರ್ಗಳಾದ ಹನುಮಂತ ಶಿರಹಟ್ಟಿ, ಕಲಗೌಡ ಪಾಟೀಲ ಹಾಗೂ ಚಂದ್ರಶೇಖರ ಕಾರಿಮನಿ, ಯುವ ಸಬಲೀಕರಣದ ಇಲಾಖೆ ಉಪನಿರ್ದೇಶಕ ಪ್ರಕಾಶ ಬಳಿಗಾರ, ಬಿ.ಶ್ರೀನಿವಾಸ, ಸಿಪಿಐ ಶಿವಾನಂದ ಗುಡಗನಟ್ಟಿ, ಬಿ.ಜಿ.ದೇಗಾಂವಿ, ಶಂಕರ ಕರಿಕಟ್ಟಿ, ಶಶಿಧರ ಪತ್ತಾರ ಇತರರಿದ್ದರು.