ಮರುಮತ ಎಣಿಕೆಯಲ್ಲಿ ನನ್ನದೇ ಗೆಲುವು election
- ಶಾಸಕ ಕೆ.ವೈ. ನಂಜೇಗೌಡ ಅಭಯ
- 2300 ಕೋಟಿ ರೂಪಾಯಿಯಲ್ಲಿ ಕಾಮಗಾರಿ
ಮಾಲೂರು: ಮಾಲೂರು ಯೋಜನಾ ಪ್ರಾಧಿಕಾರದಿಂದ ಉತ್ತಮ ಯೋಜನೆ ರೂಪಿಸಿ ಪಟ್ಟಣ ಹಾಗೂ ತಾಲೂಕನ್ನು ಅಭಿವೃದ್ಧಿ ಪಡಿಸಲು ಶ್ರಮಿಸಬೇಕೆಂದು ಶಾಸಕ ಕೆ.ವೈ. ನಂಜೇಗೌಡ ನೂತನವಾಗಿ ನೇಮಕಗೊಂಡ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ವಿಜಯ ನರಸಿಂಹ ಅವರಿಗೆ ಸೂಚಿಸಿದರು. election
ಪಟ್ಟಣದ ಮಾಲೂರು ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ನೂತನ ಅಧ್ಯಕ್ಷರು ಪಕ್ಷದ ಹಿರಿಯ ಮುಖಂಡರನ್ನು ಗಣನೆಗೆ ತೆಗೆದುಕೊಂಡು ಉತ್ತಮ ಆಡಳಿತ ಮಾಡುವುದರೊಂದಿಗೆ ಪಕ್ಷ ಸಂಘಟನೆಗೆ ಸಹಕಾರ ನೀಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಸರ್ಕಾರದಿಂದ ಸಿಗುವ ಸಹಕಾರ ನೀಡುತ್ತೇನೆ. ಈಗಾಗಲೇ 2,300 ಕೋಟಿ ರೂ. ಅನುದಾನ ತಂದು ಕಾಮಗಾರಿ ನಡೆಸುತ್ತಿದ್ದೇನೆ. ಕಾರ್ಯಕರ್ತರು ನಿಷ್ಠೆ, ತಾಳ್ಮೆಯಿಂದ ಇದ್ದರೆ ಅವಕಾಶಗಳು ಸಿಗುತ್ತವೆ. ನ.11ರಂದು ನಡೆಯಲಿರುವ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಮರು ಎಣಿಕೆಯಲ್ಲಿ ಗೆಲ್ಲುತ್ತೇನೆ. ಯಾವುದೇ ಆತಂಕ ಬೇಡ ಎಂದು ತಿಳಿಸಿದರು.
ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಎಚ್. ಎಂ. ವಿಜಯನರಸಿಂಹ ಮಾತನಾಡಿ, ಯೋಜನಾ ಪ್ರಾಧಿಕಾರದ ಆಡಳಿತ ನಿರ್ವಹಿಸುವಾಗ ಸಲಹೆ ಹಾಗೂ ಮಾರ್ಗದರ್ಶನ ಪಡೆಯಲಾಗುವುದು. ನಮ್ಮ ವ್ಯಾಪ್ತಿಗೆ ಬರುವ ಅಭಿವವೃದ್ಧಿ ಕಾರ್ಯಗಳನ್ನು ಪಾರದರ್ಶಕತೆಯಿಂದ ಮಾಡುತ್ತೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ. ಲಕ್ಷಿ$್ಮನಾರಾಯಣ್, ಮಾಲೂರು ನಗರಸಭೆಯ ಅಧ್ಯೆ ವಿಜಯಲಕ್ಷಿ$್ಮ, ಉಪಾಧ್ಯೆ ವಿಜಯಲಕ್ಷಿ$್ಮ, ಮಾಲೂರು ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಮ್ಮದ್ ನಯೀಮ್ ಉಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ಪ, ರಾಮಮೂರ್ತಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್, ಮಾಲೂರು ಯೋಜನ ಪ್ರಾಧಿಕಾರದ ಕಾರ್ಯದರ್ಶಿ ಎಚ್.ಆರ್. ಕೃಷ್ಣಪ್ಪ, ಮುಖಂಡರಾದ ಬುಲೆಟ್ ವೆಂಕಟೇಶ್, ಕೆ.ಎಚ್. ಚನ್ನರಾಯಪ್ಪ, ಎಚ್ ಹನುಮಂತಪ್ಪ, ಎಂ.ವಿ. ಹನುಮಂತಯ್ಯ, ವೆಂಕಟೇಶ್ ಗೌಡ ಇದ್ದರು.