ರಾಜ್ಯ

ಕನ್ನಡದ ನೆಲದಲ್ಲಿ ಕನ್ನಡಿಗರೇ ಪರಕೀಯರಂತೆ ಬದುಕಬೇಕೇ?

ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿರುವ 'ಆಗ್ರಹ ಅಭಿಯಾನ'ಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡಿಗರು, ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಬೆಂಬಲಿಸುತ್ತಿದ್ದಾರೆ. ನಮ್ಮ ಬೆಂಗಳೂರಿನ ಐಟಿ ಕಾರಿಡಾರ್‌ಗಳು, ಟೆಕ್ ಪಾರ್ಕ್‌ಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಐಟಿ-ಬಿಟಿ ಸಂಸ್ಥೆಗಳಿಗೆ ಭೇಟಿ ನೀಡಿ, ಮುಖ್ಯಸ್ಥರು ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಆಗ್ರಹ ಪತ್ರಗಳನ್ನು ಸಲ್ಲಿಸುತ್ತಿದ್ದಾರೆ.

ನಮ್ಮ ಆಗ್ರಹ ಸರಳವಾಗಿದೆ- ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಎಷ್ಟು ಮಂದಿ ಕನ್ನಡಿಗರು ಉದ್ಯೋಗದಲ್ಲಿದ್ದಾರೆ? ಕಳೆದ 3 ವರ್ಷಗಳಲ್ಲಿ ಎಷ್ಟು ಕನ್ನಡಿಗರನ್ನು ನೇಮಿಸಿಕೊಳ್ಳಲಾಗಿದೆ? ಯಾವ ಹುದ್ದೆಗಳಲ್ಲಿ ಅವರಿಗೆ ಅವಕಾಶ ನೀಡಲಾಗುತ್ತದೆ? ಕನ್ನಡದ ಯುವಜನರಿಗೆ ಉದ್ಯೋಗ ಕಲ್ಪಿಸಲು ಸಂಸ್ಥೆಗಳು ಯಾವ ಕ್ರಮ ಕೈಗೊಂಡಿವೆ? ಈ ಪ್ರಶ್ನೆಗಳಿಗೆ ಉತ್ತರ ಬೇಕು.

ಇದುವರೆಗೆ ನಮ್ಮ 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ಭೇಟಿ ನೀಡಿ ಆಗ್ರಹ ಪತ್ರವನ್ನು ನೀಡಿದೆ. ಎಲ್ಲಿಯೂ ಕಹಿ ಅನುಭವವಾಗಿಲ್ಲ, ಯಾವುದೇ ಸಂಸ್ಥೆ ಮನವಿ ಸ್ವೀಕರಿಸಲು ನಿರಾಕರಿಸಲಾಗಿದೆ, ಅಗೌರವದಿಂದ ನಡೆದುಕೊಂಡಿಲ್ಲ. ನಮ್ಮ ಮುಖಂಡರೂ ಇದ್ದಾರೆ ಗೌರವಯುತವಾಗಿ ನಡೆದುಕೊಂಡಿದ್ದಾರೆ. ಸಣ್ಣ ಸಂಘರ್ಷಕ್ಕೂ ಅವಕಾಶ ನೀಡಿಲ್ಲ. ಸಂಸ್ಥೆಗಳು ಕೇಳಿದ ಮಾಹಿತಿಯನ್ನು ನೀಡುತ್ತವೆಯೋ ಇಲ್ಲವೋ ಮುಂದೆ ನೋಡೋಣ.

ಆದರೆ ಉದ್ಯೋಗದ ಬಿಕ್ಕಟ್ಟಿನ ಕುರಿತು ಸರ್ಕಾರ ಮತ್ತು ಸಂಸ್ಥೆಗಳ ನಡುವೆ ಮಾತುಕತೆ ನಡೆಸಿ ಕನ್ನಡಿಗರಿಗೆ ಪರಿಹಾರ ಎಂಬ ವಿಶ್ವಾಸ ಈ ಭೇಟಿಗಳಿಂದ ಮೂಡಿದೆ. ಸಂಸ್ಥೆಗಳ ನಾಯಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಬೆರಳಣಿಕೆಯ ಕೆಲವು ಯಥಾಸ್ಥಿತಿವಾದಿಗಳು ಅಪಪ್ರಚಾರ ಮಾಡುತ್ತಿದ್ದಾರೆ.

'ಕರವೇ ಅತಿಕ್ರಮ ಪ್ರವೇಶ ಮಾಡುತ್ತಿದೆ, ಮಾರಲ್ ಪೊಲೀಸ್ ನಡೆಸುತ್ತಿದೆ, ಖಾಸಗಿ ಸಂಸ್ಥೆಗಳ ಮಾಹಿತಿ ಕೇಳುವ ಅಧಿಕಾರವೇ ಇಲ್ಲ' ಎನ್ನುತ್ತಿದ್ದಾರೆ. ಅವರಿಗೆ ನಮ್ಮ ಪ್ರಶ್ನೆ- ಕರ್ನಾಟಕದಲ್ಲಿ ಉದ್ಯಮಗಳು ಬೆಳೆಯಬೇಕು ನಾವು, ಆ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿದೆ ಕೇಳಬಾರದಾ?

ಐಟಿ-ಬಿಟಿ ಸಂಸ್ಥೆಗಳು ಖಾಸಗಿಯಾಗಿರಬಹುದು. ಆದರೆ ಅವು ಕರ್ನಾಟಕದ ನೆಲದಲ್ಲಿ, ಸ್ಥಳೀಯ ಜನರ ಸಂಪನ್ಮೂಲಗಳನ್ನು ಬೆಳೆದಿವೆ. ರೈತರ ಭೂಮಿ, ಸಾರ್ವಜನಿಕ ಹಣದಿಂದ ನಿರ್ಮಿಸಿದ ಮೂಲಸೌಕರ್ಯ, ನೀರು, ವಿದ್ಯುತ್, ರಸ್ತೆಗಳು ಮತ್ತು ತೆರಿಗೆ ರಿಯಾಯಿತಿಗಳ ಪ್ರಯೋಜನವನ್ನು ಪಡೆದಿವೆ. ಹಾಗಿರುವಾಗ ಜನರ ಏಳಿಗೆ ಬಗ್ಗೆ ಅವರಿಗೆ ಹೊಣೆಗಾರಿಕೆ ಇಲ್ಲವೇ?

ಬೆಂಗಳೂರು ಜಾಗತಿಕ ಕೇಂದ್ರ ತಂತ್ರಜ್ಞಾನವಾಗಲು ಉದ್ಯಮಿಗಳು ಮತ್ತು ಉದ್ಯೋಗಿಗಳ ಪರಿಶ್ರಮದ ಜೊತೆಗೆ ಕರ್ನಾಟಕದ ಈ ಸರ್ಕಾರಗಳು ದೂರದೃಷ್ಟಿ, ಸಾರ್ವಜನಿಕ ಹೂಡಿಕೆ ಮತ್ತು ಜನರ ಕೊಡುಗೆಯೂ ಕಾರಣ. 1990 ರ ಇತ್ತೀಚಿನ ಸರ್ಕಾರಗಳು ಐಟಿ ಮತ್ತು ಕೈಗಾರಿಕಾ ನೀತಿಗಳ ಮೂಲಕ ಭೂಮಿ, ಹಣಕಾಸು ನೆರವು, ತೆರಿಗೆ ರಿಯಾಯಿತಿ, ವಿದ್ಯುತ್, ಮೂಲಸೌಕರ್ಯ ಹಾಗೂ ಆಡಳಿತಾತ್ಮಕ ಅನುಮತಿಗಳ ಸರಳೀಕರಣ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲವೂ ಎಲ್ಲಾ ಜನರ ನೇರ-ಪರೋಕ್ಷ ತೆರಿಗೆ ಹಣದಿಂದಲೇ ಆಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಅಭಿವೃದ್ಧಿ ಸಿಟಿ, ಐಟಿಪಿಎಲ್ ಮತ್ತು ಇತರ ಕೈಗಾರಿಕಾ ಪ್ರದೇಶಗಳಿಗೆ ಭೂಮಿ, ಮೂಲಸೌಕರ್ಯ ಒದಗಿಸಲಾಗಿದೆ. ಅನೇಕ ಕಡೆ ರೈತರ ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡು ಕೈಗಾರಿಕಾ ಉದ್ದೇಶಕ್ಕಾಗಿ ಬಳಸಲಾಗಿದೆ, ಕೆಲವು ಯೋಜನೆಗಳಲ್ಲಿ ರಿಯಾಯಿತಿ ದರದಲ್ಲಿ ಭೂಮಿ ಹಂಚಿಕೆಯಾಗಿದೆ. ತಲೆಮಾರುಗಳಿಂದ ಕೃಷಿ ಮಾಡಿದ ಭೂಮಿಯನ್ನೇ ಕೈಗಾರಿಕಾ ಬೆಳವಣಿಗೆಗಾಗಿ ಬಿಟ್ಟುಕೊಟ್ಟ ರೈತರ ತ್ಯಾಗವನ್ನು ಸಿಲಿಕಾನ್ ಸಿಟಿಯ ಕಣ್ಣುಕುಕ್ಕುವ ವೈಭವದಲ್ಲಿ ಮರೆಯಲಾಗದು.

ವಿವಿಧ ಕೈಗಾರಿಕಾ ಮತ್ತು ಐಟಿ ನೀತಿಗಳಡಿ ಅರ್ಹ ಸಂಸ್ಥೆಗಳಿಗೆ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕದಲ್ಲಿ ರಿಯಾಯಿತಿ, ನಿರ್ದಿಷ್ಟ ತೆರಿಗೆ, ಸುಂಕ ಸೌಲಭ್ಯ ನೀಡಲಾಗಿದೆ.

ವಿಶೇಷ ಆರ್ಥಿಕ ವಲಯಗಳು ಮತ್ತು ರಫ್ತು ಆಧಾರಿತ ಘಟಕಗಳಿಗೆ ಅನ್ವಯಿಸುವ ಅನೇಕ ಸೌಲಭ್ಯಗಳಿವೆ. ಜಿಎಸ್‌ಟಿ ವ್ಯವಸ್ಥೆಯ ಇನ್‌ಪುಟ್ ತೆರಿಗೆ ಕ್ರೆಡಿಟ್‌ನಂತಹ ಸಾಮಾನ್ಯ ಸೌಲಭ್ಯಗಳೂ ಇವೆ. ಉದ್ಯಮಗಳ ಬೆಳವಣಿಗೆಗೆ ಸರ್ಕಾರ ತೆರಿಗೆ ಸಂಬಂಧಿತ ಅನುಕೂಲಗಳನ್ನು ನೀಡಿರುವುದು ವಾಸ್ತವ.

ಐಟಿ/ಐಟಿಐಎಸ್ ಉದ್ಯಮಗಳಿಗೆ ಕೈಗಾರಿಕಾ ವಿದ್ಯುತ್ ದರ, ಅರ್ಹ ಘಟಕಗಳಿಗೆ ವಿದ್ಯುತ್ ಸುಂಕ ವಿನಾಯಿತಿ ಮತ್ತು ನಿರಂತರ ವಿದ್ಯುತ್ ಪೂರೈಕೆ ಆದ್ಯತೆ ನೀಡಲಾಗಿದೆ. ತಂತ್ರಜ್ಞಾನ ಉದ್ಯಾನಗಳಲ್ಲಿ ರಸ್ತೆ, ಕುಡಿಯುವ ನೀರು, ಸಾರಿಗೆ, ವಿದ್ಯುತ್ ಜಾಲ ಮತ್ತು ದೂರಸಂಪರ್ಕ ಸೌಲಭ್ಯಗಳಿಗೆ ಸರ್ಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳು ಹೂಡಿಕೆ ಮಾಡಿವೆ.

ಕರ್ನಾಟಕದ ಐಟಿ ನೀತಿ 2020-25ರಲ್ಲಿ ಅರ್ಹ ಸಂಸ್ಥೆಗಳಿಗೆ ಹಲವು ಆರ್ಥಿಕ ನೆರವುಗಳನ್ನು ನೀಡಲಾಗಿದೆ- ಐಟಿ ಹಬ್, ಕ್ಲಸ್ಟರ್‌ಗಳ ಮೂಲಸೌಕರ್ಯ ಹೂಡಿಕೆ ಶೇ. 20ರವರೆಗೆ, ಗರಿಷ್ಠ ₹3 ಕೋಟಿ; ಕೋ-ವರ್ಕಿಂಗ್ ಮತ್ತು ಪ್ಲಗ್ ಆಯಂಡ್ ಪ್ಲೇ ಮೂಲಸೌಕರ್ಯಕ್ಕೆ ಶೇ. 33ರವರೆಗೆ, ಗರಿಷ್ಠ ₹2 ಕೋಟಿ; ಅರ್ಹ ಪ್ರದೇಶಗಳಲ್ಲಿ ಬಾಡಿಗೆ ಮರುಪಾವತಿ; ಮೈಸೂರು, ಹುಬ್ಬಳ್ಳಿ, ಮಂಗಳೂರಿನಂತಹ ಪ್ರದೇಶಗಳಲ್ಲಿ ಮುದ್ರಾಂಕ ಶುಲ್ಕ ವಿನಾಯಿತಿ, ಅರ್ಹ ಘಟಕಗಳಿಗೆ ಹೊಸ ತಾಂತ್ರಿಕ ಉದ್ಯೋಗಿಗಳ ಪಿಎಫ್‌, ಐಎಸ್‌ಐ ಮರುಪಾವತಿ, ಕೆಲವು ಪ್ರತಿ ಉದ್ಯೋಗಿಗೆ ತಿಂಗಳಿಗೆ ₹2,000 ರಂತೆ 2 ವರ್ಷಗಳವರೆಗೆ ಮತ್ತು ಗುಣಮಟ್ಟದ ಪ್ರಮಾಣಪತ್ರ ವೆಚ್ಚದ ಶೇ. 50, ಗರಿಷ್ಠ ₹6 ಲಕ್ಷದವರೆಗೆ ಮರುಪಾವತಿ ಒದಗಿಸಲಾಗಿದೆ.

ದೇಶೀಯ ಪೇಟೆಂಟ್‌ಗೆ ₹2 ಲಕ್ಷದವರೆಗೆ, ಅಂತರರಾಷ್ಟ್ರೀಯ ಪೇಟೆಂಟ್‌ಗೆ ₹10 ಲಕ್ಷದವರೆಗೆ ವೆಚ್ಚ ಮರುಪಾವತಿ ಮತ್ತು ಅರ್ಹ ಸಂಶೋಧನೆ-ಅಭಿವೃದ್ಧಿ ಯೋಜನೆಗಳಿಗೆ ನೆರವೂ ಇತ್ತು. ಬೆಂಗಳೂರಿನ ಹೊರಗಿನ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆಗೆ ಬಾಡಿಗೆ ಮರುಪಾವತಿ ನೇಮಕಾತಿ, ನೆರವು ಮತ್ತು ಬಂಡವಾಳ ಹೂಡಿಕೆ ಸಬ್ಸಿಡಿಗಳಂತಹವು ಪ್ರೋತ್ಸಾಹಗಳನ್ನು ಒದಗಿಸಲಾಗಿದೆ.

'ಕರ್ನಾಟಕ ಉದ್ಯೋಗ ಮಿತ್ರ' ಮೂಲಕ ಏಕಗವಾಕ್ಷಿ ಅನುಮತಿ ವ್ಯವಸ್ಥೆ ರೂಪಿಸಿ, ಭೂಮಿ, ವಿದ್ಯುತ್, ನೀರು ಆಯ್ಕೆ ಮಾಡಲು ಸುಲಭಗೊಳಿಸಲಾಗಿದೆ. ಕ್ಷೇತ್ರಕ್ಕೆ ಅನುಕೂಲವಾಗುವಂತೆ ಕೆಲಸದ ಸಮಯ, ಪಾಳಿಗಳ ವ್ಯವಸ್ಥೆ, ಅಗತ್ಯ ರಕ್ಷಣಾ ಕ್ರಮಗಳು ಮಹಿಳೆಯರ ರಾತ್ರಿ ಪಾಳಿಗೂ ನಿಯಮಾತ್ಮಕ ಅವಕಾಶ ನೀಡಲಾಗಿದೆ. ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ, ರಫ್ತು ಪ್ರೋತ್ಸಾಹ ಯೋಜನೆಗಳು, ದೂರಸಂಪರ್ಕ ಮತ್ತು ಫೈಬರ್-ಆಪ್ಟಿಕ್ ಸಂಪರ್ಕದ ಮೂಲಕ ಜಾಗತಿಕ ಮಾರುಕಟ್ಟೆ ತಲುಪಲು ನೆರವು ನೀಡಲಾಗಿದೆ.

ಈ ಸೌಲಭ್ಯಗಳೆಲ್ಲ ಎಲ್ಲಾ ಸಂಸ್ಥೆಗಳಿಗೂ ದೊರೆತಿವೆ ಎಂದಲ್ಲ. ಕಾಲಘಟ್ಟ, ನೀತಿ, ಪ್ರದೇಶ, ಅರ್ಹತೆ, ಷರತ್ತುಗಳಿಗೆ ಅನುಗುಣವಾಗಿ ಕೊಡಲಾಗಿದೆ. ಐಟಿ ಕ್ಷೇತ್ರದ ಬೆಳವಣಿಗೆಗೆ ಕರ್ನಾಟಕ ಸರ್ಕಾರ ಸಾರ್ವಜನಿಕ ನೆರವು ನೀಡಿದ ಮೇಲೆ ಈ ನೆಲದ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ವಿಚಾರದಲ್ಲಿ ಸಂಸ್ಥೆಗಳ ಜವಾಬ್ದಾರಿಯಿಂದ ನಡೆದುಕೊಳ್ಳಬಾರದೇ?

ನಾವು "ಐಟಿ ಕಂಪನಿಗಳು ಕರ್ನಾಟಕಕ್ಕೆ ಬರಬಾರದು,' ಎನ್ನುತ್ತಿಲ್ಲ. ಇನ್ನಷ್ಟು ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸಿ ಬೆಳವಣಿಗೆಯಲ್ಲಿ ಕನ್ನಡಿಗರ ಸ್ಥಾನ ಏನು? ಪ್ರಾತಿನಿಧ್ಯದಲ್ಲಿ ನಮ್ಮ ಪ್ರಮಾಣ ಎಷ್ಟು ಎಂದಷ್ಟೇ ಕೇಳಬಹುದು. ಸ್ಥಳೀಯ ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್ಗಳು, ಐಟಿಐಗಳು ರೂಪಿಸುವ ಮಾನವ ಸಂಪನ್ಮೂಲವೂ ಈ ಬೆಳವಣಿಗೆಯ ಬೆನ್ನೆಲುಬಾಗಿದೆ. ನಮ್ಮ ಯುವಕರು ಪ್ರಪಂಚದಾದ್ಯಂತ ತಮ್ಮ ಪ್ರತಿಭೆಯನ್ನು ಕಾಲಕಾಲಕ್ಕೆ ಗುರುತಿಸಿದ್ದಾರೆ. ಹೀಗಿರುವಾಗ ನಾಡಿನಲ್ಲಿ ಅರ್ಹ ಕನ್ನಡಿಗರಿಗೆ ಅವಕಾಶ ಸಿಗುತ್ತಿದೆಯೇ ಎಂದು ಕೇಳುವುದರಲ್ಲಿ ತಪ್ಪೇನು?

ಸಂಸ್ಥೆಗಳ ನಾಯಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಬೆರಳಣಿಕೆಯ ಕೆಲವು ಯಥಾಸ್ಥಿತಿವಾದಿಗಳು ಅಪಪ್ರಚಾರ ಮಾಡುತ್ತಿದ್ದಾರೆ. 'ಕರವೇ ಅತಿಕ್ರಮ ಪ್ರವೇಶ ಮಾಡುತ್ತಿದೆ, ಮಾರಲ್ ಪೊಲೀಸ್ ನಡೆಸುತ್ತಿದೆ, ಖಾಸಗಿ ಸಂಸ್ಥೆಗಳ ಮಾಹಿತಿ ಕೇಳುವ ಅಧಿಕಾರವೇ ಇಲ್ಲ' ಎನ್ನುತ್ತಿದ್ದಾರೆ. ಅವರಿಗೆ ನಮ್ಮ ಪ್ರಶ್ನೆ- ಕರ್ನಾಟಕದಲ್ಲಿ ಉದ್ಯಮಗಳು ಬೆಳೆಯಬೇಕು ನಾವು, ಆ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿದೆ ಕೇಳಬಾರದಾ?

ಅರ್ಹತೆ ಇಲ್ಲದವರಿಗೆ ಉದ್ಯೋಗ ನೀಡಿ ಎಂದು ನಾವು ಹೇಳುತ್ತಿಲ್ಲ; ಬೇರೆಯವರಿಂದ ಹೊರಹಾಕಲು ಒತ್ತಾಯಿಸುತ್ತಿಲ್ಲ. ಆದರೆ ಅರ್ಹತೆ, ಅನುಭವ ಮತ್ತು ಕೌಶಲ್ಯ ಇದ್ದರೂ ಕನ್ನಡಿಗರು ಎಂಬ ಕಾರಣಕ್ಕೆ ಅವಕಾಶ ನಿರಾಕರಿಸು ವುದನ್ನು ಸಹಿಸಲಾಗದು. ನೇಮಕಾತಿಯಲ್ಲಿ ಪಾರದರ್ಶಕತೆ, ನ್ಯಾಯಯುತ ಅವಕಾಶ, ಕೌಶಲ್ಯ ತರಬೇತಿ, ಇಂಟರ್ನ್ ಶಿಪ್, ಉದ್ಯೋಗ ಸಿದ್ಧತಾ ಕಾರ್ಯಕ್ರಮಗಳು ಬೇಕು.

ಐಟಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ಎಷ್ಟಿದೆ ಎಂದು ಸರ್ಕಾರವೂ ಕೇಳಲು ಪ್ರಯತ್ನಿಸಿದೆ. 2026ರ ಎ. 26 ರಂದು ಪ್ರಕಟವಾದ ಮಾಧ್ಯಮ ವರದಿ ಪ್ರಕಾರ, 2015-16ರಿಂದ ಕಾರ್ಮಿಕ ಇಲಾಖೆ ಸ್ಥಳೀಯ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದ ಕಾನೂನು ಪ್ರಸ್ತಾವನೆಗೆ ಐಟಿ-ಬಿಟಿ ಮತ್ತು ಕೈಗಾರಿಕಾ ಇಲಾಖೆಗಳ ಒಪ್ಪಿಗೆ 3 ಬಾರಿ ವಿಫಲವಾಗಿದೆ. ಆ ಪ್ರಸ್ತಾವನೆಯ ಉದ್ದೇಶ ಜಾರಿಯಾದಲ್ಲಿ ಖಾಸಗಿ ಸಂಸ್ಥೆಗಳಿಂದ ಉದ್ಯೋಗ ದಾಖಲೆಗಳನ್ನು ಪಡೆಯಲು ಕಾರ್ಮಿಕ ಇಲಾಖೆಗೆ ಅಧಿಕಾರ ನೀಡುವುದು. ಸರ್ಕಾರದ ಯೋಜನೆಯ ಪ್ರಸ್ತಾವನೆಗೆ 3 ಬಾರಿ ಒಪ್ಪಿಗೆ ಸಿಗದಿರಲು ಕಾರಣವೇನು? ಯಾರು ಅಡ್ಡಿಯಾದರು? ಕನ್ನಡಿಗರ ಉದ್ಯೋಗದ ಪ್ರಶ್ನೆಯಲ್ಲಿ ಯಾವ ಹಿತಾಸಕ್ತಿಗಳು ಮೇಲುಗೈ ಸಾಧಿಸಿದವು? ಸರ್ಕಾರ ಉತ್ತರಿಸಬೇಕು.

ಈಗ ಕರವೇ ಜನರ ಪರವಾಗಿ ಇದೇ ಪ್ರಶ್ನೆ ಕೇಳುತ್ತಿದೆ. ಸಂಸ್ಥೆಗಳು ಮಾಹಿತಿ ನೀಡುತ್ತವೆ ಎಂದು ನೋಡುತ್ತೇವೆ. ನೀಡಿದರೆ ಅದನ್ನು ಕಂಡು ಜನರ ಮುಂದಿಡು ತ್ತೇವೆ; ನೀಡದಿದ್ದರೆ ಅದನ್ನೂ ಸರ್ಕಾರ ಮತ್ತು ಸಾರ್ವಜನಿಕರ ಗಮನಕ್ಕೆ ತರುತ್ತೇವೆ. ಪ್ರಜಾಸತ್ತಾತ್ಮಕ ಹೋರಾಟದ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.

ಅಪಪ್ರಚಾರಗಳಿಗೆ ನಮ್ಮ ಉತ್ತರ ಸ್ಪಷ್ಟ. ನಮ್ಮ ತಂಡಗಳು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಭೇಟಿ ನೀಡುತ್ತಿವೆ; ಅತಿಕ್ರಮ ಪ್ರವೇಶ ಮಾಡಿಲ್ಲ. ಮಾರಲ್ ಪೋಲೀಸಿಂಗ್ ಅಥವಾ ಬೆದರಿಕೆ ಪ್ರಶ್ನೆಯೇ ಇಲ್ಲ. ನಾವು ಸಂಸ್ಥೆಗಳ ಆಡಳಿತ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳೊಂದಿಗೆ ಸೌಜನ್ಯದಿಂದ ಮಾತನಾಡುತ್ತೇವೆ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಗಳನ್ನು ಕೇಳುವುದು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನಮ್ಮ ಹಕ್ಕು. ಖಾಸಗಿ ಸಂಸ್ಥೆ ಎಂಬ ಕಾರಣಕ್ಕೆ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾರ್ವಜನಿಕ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಉದ್ಯೋಗಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವೇತನ ಅಥವಾ ಖಾಸಗಿ ದಾಖಲೆಗಳನ್ನು ನಾವು ಕೇಳುತ್ತಿಲ್ಲ. ಒಟ್ಟು ಉದ್ಯೋಗಿಗಳಲ್ಲಿ ಎಷ್ಟು ಮಂದಿ ಕನ್ನಡಿಗರು, ಕಳೆದ 3 ವರ್ಷಗಳಲ್ಲಿ ಎಷ್ಟು ಕನ್ನಡಿಗರು ನೇಮಕಗೊಂಡರು, ಯಾವ ಹುದ್ದೆಗಳಲ್ಲಿ ಅವರಿಗೆ ಅವಕಾಶ ಸಿಕ್ಕಿತು ಎಂಬ ಒಟ್ಟಾರೆ ಅಂಕಿಅಂಶಗಳನ್ನಷ್ಟೇ ಕೇಳಬಹುದು.

ಒಂದು ಸಮಾಜದ ಪ್ರಗತಿಯನ್ನು ಜಗಮಗಿಸುವ ಗಗನಚುಂಬಿ ಕಟ್ಟಡಗಳು, ಸಾವಿರಾರು ಕೋಟಿ ರೂ.ಗಳ ಹೂಡಿಕೆಯಿಂದಷ್ಟೇ ಅಳೆಯಲಾಗದು; ಅದರ ಲಾಭ ಆ ಮಣ್ಣಿನಲ್ಲಿ ತಲೆತಲಾಂತರಗಳಿಂದ ಬದುಕಿ ಬಂದಿರುವ ನೆಲದ ಮಕ್ಕಳಿಗೆ ಎಷ್ಟು ತಲುಪಿದೆ ಎಂಬುದೂ ಕೂಡ ಮುಖ್ಯ. ಕರ್ನಾಟಕದ ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ತೆರಳಬೇಕಾದ ಪರಿಸ್ಥಿತಿ ಮುಂದುವರಿದರೆ ಈ ದೋಷಪೂರಿತ ಅಭಿವೃದ್ಧಿಯ ಮಾದರಿ ಪ್ರಶ್ನಿಸಲೇಬೇಕು.

ನಮ್ಮ ನೆಲ, ನೀರು, ವಿದ್ಯುತ್, ರಸ್ತೆ, ರೈತರ ಜಮೀನು, ಜನರ ತೆರಿಗೆ ಹಣದಿಂದ ಬೆಳೆದ ಸಂಸ್ಥೆಗಳು ಯುವಜನರ ಭವಿಷ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಕನ್ನಡಿಗರಿಗೆ ಉದ್ಯೋಗ ನೀಡಿ ಎಂದು ನಾವು ಭಿಕ್ಷೆ ಕೇಳುತ್ತಿಲ್ಲ; ಈ ನಾಡಿನ ಅಭಿವೃದ್ಧಿಗೆ ಕೊಡುಗೆ ನೀಡಿದ ಜನರಿಗೆ ನ್ಯಾಯಯುತ ಅವಕಾಶ ನೀಡಿ ಎಂದು ಹೇಳಿದರು.

ಈ ನಾಡಿನ ಋಣವನ್ನು ನೆನಪಿಸುವುದೇ ಅಭಿಯಾನದ ಉದ್ದೇಶ. ಕನ್ನಡಿಗರ ಉದ್ಯೋಗದ ಪ್ರಶ್ನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯಾವ ರಾಜಿ ಮಾಡಿ ಕೊಳ್ಳುವುದಿಲ್ಲ.ಯಾವುದೇ ಗೊಡ್ಡು ಬೆದರಿಕೆಗಳಿಗೆ ಮಣಿಯುವ ಪ್ರಶ್ನೆಯೂ ಇಲ್ಲ.