ಕೌದಳ್ಳಿಯಲ್ಲಿ ಮುಸ್ಲಿಮರು ಮೆರವಣಿಗೆ ನಡೆಸುವುದರ ಮೂಲಕ ಈದ್ ಮಿಲಾದ್ ಆಚರಿಸಿದರು.  
ರಾಜ್ಯ

ಕೌದಳ್ಳಿ ಗ್ರಾಮದಲ್ಲಿ ಮುಸ್ಲಿಮರ ಮೆರವಣಿಗೆ

ಪ್ರಮುಖ ಮುಖ್ಯಾಂಶಗಳು

  • ಕೌದಳ್ಳಿ ಗ್ರಾಮ
  • ಮುಸ್ಲಿಮರು ಮೆರವಣಿಗೆ

ಹನೂರು:

ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಬುಧವಾರ ಮುಸ್ಲಿಮರು ಮೆರವಣಿಗೆ ನಡೆಸುವ ಮೂಲಕ ಈದ್ ಮಿಲಾದನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಮೆಕ್ಕಾ, ಮದೀನಾ ಮಾದರಿಯನ್ನು ವಾಹನದಲ್ಲಿರಿಸಿದ ಮುಸ್ಲಿಮರು ಹಸಿರು ಬಾವುಟ ಹಾಗೂ ಮೊಹಮ್ಮದ್ ಪೈಗಂಬರ್ ಸಂದೇಶದ ಫಲಕ ಹಿಡಿದು ಮಸೀದಿಯಿಂದ ಹೊರಟು, ಮುಖ್ಯ ವೃತ್ತ ಹಾಗೂ ವಿವಿಧ ಬಡಾವಣೆಯಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಪೈಗಂಬರ್‌ರ ಕುರಿತಾದ ಘೋಷಣೆಯನ್ನು ಮೊಳಗಿಸಿದರು.
ಬಳಿಕ ಮಸೀದಿಗೆ ತೆರಳಿ ಮೊಹಮ್ಮದ್ ಪೈಗಂಬರ್‌ರಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳು ಕುರಾನ್ ಬೋಧಿಸಿದರು.