ನುಗ್ಗೇಹಳ್ಳಿಯ ಮಸೀದಿಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
- ಬಾಗೂರು ರಸ್ತೆಯಲ್ಲಿರುವ ಮಸೀದಿ
- ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ
ನುಗ್ಗೇಹಳ್ಳಿ: ಇಲ್ಲಿನ ಬಾಗೂರು ರಸ್ತೆಯಲ್ಲಿರುವ ಮಸೀದಿಯಲ್ಲಿ ಗ್ರಾಮದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಮುಸ್ಲಿಮರು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ಹೊಸ ಬಟ್ಟೆ ಧರಿಸುವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವವಣಿಗೆಯಲ್ಲಿ ಸಾಗಿದರು. ನಂತರ ಮಸೀದಿಯಲ್ಲಿ ಧರ್ಮ ಗುರುಗಳ ಬೋಧನೆಯನ್ನು ಕೇಳುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಮಸೀದಿ ಅಧ್ಯಕ್ಷ ಪ್ಯಾರುಖಾನ್, ಉಪಾಧ್ಯಕ್ಷ ಸಮೀವುಲ್ಲಾ, ಕಾರ್ಯದರ್ಶಿ ಇಮ್ರಾನ್ ಖಾನ್, ಖಜಾಂಚಿ ಇಲಿಯಾಸ್ ಅಹಮದ್, ಸದಸ್ಯರಾದ ಅಲಿ, ವಜೀರ್ ಅಹಮದ್, ರಿಜ್ವಾನ್, ಅಮ್ಜದ್ ಖಾನ್, ಸದತ್, ಸಜ್ಜಾದ್ ಪಾಷ ಇತರರಿದ್ದರು.