ತ್ಯಾಗರಾಜ ನಗರದ ಶ್ರೀದತ್ತಾತ್ರೇಯ ಮಂದಿರದಲ್ಲಿ ಇತ್ತೀಚೆಗೆ ನಡೆದ ತ್ರೈಮೂರ್ತಿ ಅವತಾರ ಸಂಗೀತ ರೂಪಕದಲ್ಲಿ ಜಯಲಕ್ಷ್ಮೀ ಇನಾಮದಾರ್ ಮತ್ತು ತಂಡದವರು ಗಾಯನ ನಡೆಸಿಕೊಟ್ಟರು.  
ರಾಜ್ಯ

ದತ್ತಾತ್ರೇಯ ಮಂದಿರದಲ್ಲಿ ತ್ರೈಮೂರ್ತಿ ಅವತಾರ ಸಂಗೀತ ರೂಪಕ

ಪ್ರಮುಖ ಮುಖ್ಯಾಂಶಗಳು

  • ತ್ರೈಮೂರ್ತಿ ಅವತಾರ ಸಂಗೀತ ರೂಪಕ
  • ತ್ಯಾಗರಾಜ ನಗರದ ಶ್ರೀದತ್ತಾತ್ರೇಯ ಮಂದಿರ
  • ಗುರುಗಳ ಮಹಿಮೆ ಸಾರುವ ತ್ರೈಮೂರ್ತಿ ಅವತಾರ

ಬೆಂಗಳೂರು:ತ್ಯಾಗರಾಜನಗರದ ಶ್ರೀದತ್ತಾತ್ರೇಯ ಮಂದಿರದಲ್ಲಿಇತ್ತೀಚೆಗೆ ಗುರುಗಳ ಮಹಿಮೆ ಸಾರುವ ತ್ರೈಮೂರ್ತಿ ಅವತಾರ ಸಂಗೀತ ರೂಪಕಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಸ್ವರಭಾರತಿ ಅಕಾಡೆಮಿ ಹಾಗೂ ದತ್ತಾತ್ರೇಯದೇವಸ್ಥಾನ ಟ್ರಸ್ಟ್ ಜಂಟಿ ಸಹಯೋಗ,ಕರ್ನಾಟಕ ಕಲಾಶ್ರೀಜಯಲಕ್ಷ್ಮೀ ಇನಾಮದಾರ್ ನಿರ್ದೇಶನಮತ್ತು ಕಥಾ ನಿರೂಪಣೆಯಲ್ಲಿಶ್ರೀಗುರು ಚರಿತ್ರೆ ಆಧರಿತ ಸಂಗೀತರೂಪಕ ನಡೆಯಿತು.

ಸಂಗೀತರೂಪಕದಲ್ಲಿ ಜಯಲಕ್ಷ್ಮೀ ಇನಾಮದಾರ್ಶಿಷ್ಯರಾದ ಅನ್ನಪೂರ್ಣಾ ನಾಗರಾಜ್,ಗೀತಾ ನರೇಂದ್ರ, ವಾರುಣಿ ನಾಗರಾಜ್,ಮಹಿಮಾ ಇನಾಮದಾರ್ಗಾಯನ ನಡೆಸಿಕೊಟ್ಟರು.ಡಾ.ಗೋಪಾಲ್ ರಾಯಚೂರ್ಹಾರ್ಮೋನಿಯಂ,ಮಂಜುನಾಥ್ ಸಾಗರ್ತಬಲಾ ಸಾಥ್ ನೀಡಿದರು.