ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ಅಹೋರಾತ್ರಿ ಸಂಗೀತ ಮಹೋತ್ಸವ’ದಲ್ಲಿ ತಬಲಾ ವಾದಕ ಪಂಡಿತ್ ಯೋಗೇಶ್ ಸಂಸಿಯವರಿಗೆ ಗುರುಗಂಧರ್ವ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶತಾವಧಾನಿ ಡಾ.ಆರ್. ಗಣೇಶ್, ರಮಣಶ್ರೀ ಗ್ರೂಪ್ ಷಡಕ್ಷರಿ ಮತ್ತಿತರರಿದ್ದರು.  
ರಾಜ್ಯ

ಸಂಗೀತ ದೇವರ ಸನ್ನಿಧಿಗೆ ಕರೆದೊಯ್ಯುವ ಸುಲಭ ಮಾರ್ಗ; ಶತಾವಧಾನಿ ಗಣೇಶ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಸಂಗೀತ ದೇವರ ಸನ್ನಿಧಿಗೆ ಕರೆದೊಯ್ಯುವ ಸುಲಭ ಮಾರ್ಗ
  • ಶತಾವಧಾನಿ ಡಾ. ಆರ್. ಗಣೇಶ್ ಅಭಿಮತ
  • ಸಂಗೀತ ದಿಗ್ಗಜರ ಸ್ಮರಣಾರ್ಥ ‘ಅಹೋರಾತ್ರಿ ಸಂಗೀತ ಮಹೋತ್ಸವ’

ಬೆಂಗಳೂರು:ಪವಿತ್ರ ನದಿಗಳಾದಗಂಗೆ ಮತ್ತು ಸರಸ್ವತಿ ನೀಡುವಮುಕ್ತಿಯನ್ನು ಸಂಗೀತವು ಅತ್ಯಂತಸುಲಭವಾಗಿ ನೀಡಬಲ್ಲದು.ಸಂಗೀತವು ದೇವರಸನ್ನಿಧಿಗೆ ನಮ್ಮನ್ನು ಕರೆದೊಯ್ಯುವಸುಲಭ ಮಾರ್ಗ ಎಂದು ವಿದ್ವಾಂಸಶತಾವಧಾನಿ ಡಾ.ಆರ್.ಗಣೇಶ್ಹೇಳಿದ್ದಾರೆ.

ರವೀಂದ್ರಕಲಾಕ್ಷೇತ್ರದಲ್ಲಿ ಶನಿವಾರಹಮ್ಮಿಕೊಂಡಿದ್ದ ಗಾಯನಾಚಾರ್ಯಗುರುರಾವ್ ದೇಶಪಾಂಡೆ, ಪಂಡಿತ್ ಭೀಮಸೇನ್ಜೋಶಿ ಸ್ಮರಣಾರ್ಥ ನಡೆದ 41ನೇ‘ಅಹೋರಾತ್ರಿ ಸಂಗೀತ ಮಹೋತ್ಸವ’ವನ್ನುಉದ್ಘಾಟಿಸಿ ಮಾತನಾಡಿದರು.

ನಾದದಆರಾಧನೆಯು ನಮ್ಮನ್ನು ನೇರವಾಗಿದೇವರ ಸನ್ನಿಧಿಗೆ ತಲುಪಿಸುವಶಕ್ತಿ ಹೊಂದಿದೆ.ಬೆಂಗಳೂರಿನಲ್ಲಿಶಾಸ್ತ್ರೀಯ ಸಂಗೀತದ ಪರಂಪರೆ,ಕಲೆ ಮತ್ತುಸಂಘಟನೆ ಎರಡನ್ನು ನಿಭಾಯಿಸುವಪರಿ, ಸಂಗೀತಕಚೇರಿಗಳಲ್ಲಿ ತಬಲಾ ಮುಂತಾದಲಯವಾದ್ಯಗಳ ಮಹತ್ವ ಕುರಿತುವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿತಬಲಾ ವಾದಕ ಪಂಡಿತ್ ಯೋಗೇಶ್ಸಂಸಿಯವರಿಗೆ ಗುರುಗಂಧರ್ವರಾಷ್ಟ್ರೀಯ ಪ್ರಶಸ್ತಿ ನೀಡಿಗೌರವಿಸಲಾಯಿತು.

ಸಂಗೀತೋತ್ಸವದಲ್ಲಿಡಾ. ದತ್ತಾತ್ರೇಯಎಲ್. ವೇಲಣಕರ್ಗಾಯನ, ಪಂಡಿತ್ಇಂದ್ರಾಯುಧ ಮಜುಂದಾರ್ ಸರೋದ್ವಾದನ ಹಾಗೂ ಪಂಡಿತ್ ರುಚಿರಾಕೇದಾರ್ ಮತ್ತು ಪಂಡಿತ್ ವಿನಾಯಕ್ತೋರವಿಯವರ ಗಾಯನ ಬೆಳಗಿನವರೆಗೆನಡೆಯಿತು.