ಕಲಬುರಗಿಯ ಕನ್ನಡ ಭವನದ ಸುವರ್ಣ ಸೌಧದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಗಾನ ಯಾನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಬಾಲರಾಜ್​ ಗುತ್ತೇದಾರ್​, ಡಾ.ಸದಾನಂದ ಪೆರ್ಲ, ನಾಗಪ್ಪ ಹೊನ್ನಳ್ಳಿ, ಯಲಗೊಂಡ, ಬಿ.ಎಚ್​.ನಿರಗುಡಿ, ಸಾವಿತ್ರಿ ಪಾಟೀಲ್​, ನಾಗಪ್ಪ ಹೊನ್ನಳ್ಳಿ, ಅಂಬಯ್ಯ ಗುತ್ತೇದಾರ್​, ಸಂಸ್ಥೆಯ ಅಧ್ಯಕ್ಷ ಬಸಯ್ಯ ಗುತ್ತೇದಾರ ತೆಲ್ಲೂರ, ದೇವೇಗೌಡ ತೆಲ್ಲೂರ ಇತರರಿದ್ದರು. 
ರಾಜ್ಯ

ಸಂಸ್ಕೃತಿ ಉಳಿವಿಗೆ ಸಂಗೀತ, ಸಾಹಿತ್ಯ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್​ ಅಧ್ಯಕ್ಷ ಬಾಲರಾಜ್​ ಗುತ್ತೇದಾರ್​ ಹೇಳಿಕೆ
  • * ಸಾಧಕರಿಗೆ ಬ್ರಹ್ಮಶ್ರೀ ನಾರಾಯಣಗುರು ಪ್ರಶಸ್ತಿ ಪ್ರದಾನ
ಕಲಬುರಗಿ: ಕಲೆ, ಸಾಹಿತ್ಯ ಹಾಗೂ ಸಂಗೀತದಿಂದ ಕನ್ನಡ ಸಂಸ್ಕೃತಿ ಉಳಿಸಿ, ಬೆಳೆಸಲು ಸಾಧ್ಯ ಎಂದು ಜೆಡಿಎಸ್​ ಜಿಲ್ಲಾಧ್ಯಕ್ಷ ಬಾಲರಾಜ್​ ಗುತ್ತೇದಾರ್​ ಹೇಳಿದರು.
ಕಲಬುರಗಿಯ ಕನಕ ಪುರಂದರ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕನ್ನಡ ಭವನದ ಸುವರ್ಣ ಸೌಧದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಗಾನ ಯಾನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದರು.
ಕಲ್ಯಾಣ ಕರ್ನಾಟಕದಲ್ಲಿ ವಿಶೇಷವಾಗಿ ಸಂಗೀತ ಕ್ಷೇತ್ರದಲ್ಲಿ ಕಲಾವಿದರು ಉತ್ತಮ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ. ಹೀಗಾಗಿ ಸಂಗೀತ, ಸಾಹಿತ್ಯ, ಕಲೆಗೆ ನಿರಂತರ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಅಫಜಲಪುರದ ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕಲಬುರಗಿ ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಸದಾನಂದ ಪೆರ್ಲ ಮಾತನಾಡಿ, ಅಕಾಡೆಮಿಗಳಲ್ಲಿ ಈ ಭಾಗದ ಕಲಾವಿದರಿಗೆ ಆದ್ಯತೆ ಸಿಗಬೇಕು. ಕಲ್ಯಾಣ ಕರ್ನಾಟಕ ಭಾಗದ ಸಂಗೀತ ಸೇರಿದಂತೆ ಸಾಂಸ್ಕೃತಿಕ ರಂಗದ ಸಾಧಕರಿಗೆ ರಾಜ್ಯ ಅಕಾಡೆಮಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಸಂಗೀತ ಮತ್ತು ನೃತ್ಯ ಅಕಾಡೆಮಿಗೆ ಈ ಭಾಗದವರನ್ನು ಅಧ್ಯಕ್ಷರಾಗಿ ನೇಮಕ ಮಾಡಲು ಸರ್ಕಾರ ಚಿಂತನೆ ಮಾಡಬೇಕು ಎಂದು ಹೇಳಿದರು.
ನಾಗಪ್ಪ ಹೊನ್ನಳ್ಳಿ, ಕುರುಬ ಗೊಂಡ ನೌಕರರ ಸಂದ ಜಿಲ್ಲಾಧ್ಯಕ್ಷ ಯಲಗೊಂಡ, ಬಿ.ಎಚ್​. ನಿರಗುಡಿ, ಸಾವಿತ್ರಿ ಪಾಟೀಲ್​, ನಾಗಪ್ಪ ಹೊನ್ನಳ್ಳಿ, ಶಂಕರ್​ರಾವ್​ ಹುಲ್ಲೂರ, ಅಂಬಯ್ಯ ಗುತ್ತೇದಾರ್​, ಹಿರೇಕುರುಬರ, ಸಂಸ್ಥೆಯ ಅಧ್ಯಕ್ಷ ಬಸಯ್ಯ ಗುತ್ತೇದಾರ ತೆಲ್ಲೂರ, ದೇವೇಗೌಡ ತೆಲ್ಲೂರ, ಮಲ್ಲಯ್ಯ ಗುತ್ತೇದಾರ್​, ಮಹಾಂತೇಶ್​ ಪಂಚಾಳ್​, ಶಿವಪುತ್ರ ಕರಣಿಕ ಇತರರಿದ್ದರು.
ಡಾ.ಶಿವಶಂಕರ್​ ಬಿರಾದಾರ್​ ಪ್ರಾರ್ಥನಾ ಗೀತೆ ಹಾಡಿದರು. ಖ್ಯಾತ ಹಿಂದೂಸ್ತಾನಿ ಗಾಯಕ ಡಾ.ರಮೇಶ್​ ಕುಲಕರ್ಣಿ, ಸಂಗೀತ ಶಿಕ್ಷಕರಾದ ಮಳ್ಳಿ ಹಣಮಂತರಾವ ಹಾಗೂ ಮಲ್ಲಿಕಾರ್ಜುನ ಭಜಂತ್ರಿ, ಜಡೇಶ್​ ಹೂಗಾರ್​, ಅಂಬರೀಶ್​ ಹೂಗಾರ್​, ಶಿವರುದ್ರಯ್ಯ ಗೌಡಗಾಂವ, ಸೈದಪ್ಪ ಸಪ್ಪನಗೋಳ, ಶಿವಾನಂದ ಮಂದೇವಾಲ್​, ಮಹಾಲಿಂಗಯ್ಯ ಸ್ಥಾವರಮಠ, ದತ್ತರಾಜ ಕಲಶೆಟ್ಟಿ, ಶ್ರೀಶೈಲ ಕೊಂಡೆದ, ಭೀಮಾಶಂಕರ ಹೂಗಾರ್​, ಶಿವಲಿಂಗಯ್ಯ ಮಠಪತಿ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರ ಮನಸೂರೆಗೊಂಡಿತು.
ಭರತನಾಟ್ಯ ಕಲಾವಿದೆ ಅನನ್ಯ ಗೋಲ್ಡ್​ಸ್ಮಿತ್​ ಅವರ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಶೃತಿ ರಮೇಶ್​ ಕುಲಕರ್ಣಿ ದಾಸವಾಣಿ ನಡೆಸಿಕೊಟ್ಟರು. ವಿವಿಧ ೇತ್ರಗಳಲ್ಲಿ ಸಾಧನೆ ಮಾಡಿದ 30ಕ್ಕೂ ಹೆಚ್ಚು ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೈವಿಧ್ಯಮಯ ಸಂಗೀತ, ನೃತ್ಯ ಹಾಗೂ ಸಾಂಸತಿಕ ಪ್ರದರ್ಶನಗಳೊಂದಿಗೆ ನಡೆದ ಗಾನಯಾನ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿತು.
"

ಉತ್ತರ ಕರ್ನಾಟಕದಲ್ಲಿ ಸಂಗೀತ ಪರಂಪರೆಗೆ ದೊಡ್ಡ ಇತಿಹಾಸವಿದೆ. ಕಲ್ಯಾಣದ ನೆಲದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರು ದಣ ಕರ್ನಾಟಕದ ಕಲಾವಿದರನ್ನು ಮೀರಿಸುವ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ.

— ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಅಫಜಲಪುರ.