ಹಳೆ ವೈಷಮ್ಯ ಯುವಕನ ಕೊಲೆ 
ರಾಜ್ಯ

ಹಳೆ ವೈಷಮ್ಯದಿಂದ ಯುವಕನ ಹತ್ಯೆ!

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಹಳೆ ವೈಷಮ್ಯಕ್ಕೆ ಯುವಕನ ಹತ್ಯೆ
  • ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘಟನೆ
  • ಇಬ್ಬರನ್ನು ವಶಕ್ಕೆ ಪಡೆದ ಸಂಕೇಶ್ವರ ಪೊಲೀಸರು

ಹಳೆ ವೈಷಮ್ಯಕ್ಕೆ ಯುವಕನ ಬರ್ಬರ ಹತ್ಯೆ
ಚಿಕ್ಕೋಡಿ: ಅನೈತಿಕ ಸಂಬಂಧ, ರಸ್ತೆ ಮಾರ್ಗದ ವಿವಾದ ಹಾಗೂ ಪುರಸಭೆ ಉಪ ಚುನಾವಣೆ ವೈಷಮ್ಯದ ಹಿನ್ನಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ಬಾಬು ಬೂಸಗೋಳ(೩೫) ಎಂಬಾತನ ದುಷ್ಕರ್ಮಿಗಳು ಬೈಕ್‌ಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಂಕೇಶ್ವರ ಪಟ್ಟಣದ ಗೋರಕ್ಷಣ ಮಾಳದಲ್ಲಿ ಶನಿವಾರ ನಡೆದಿದೆ.
ಸುಬ್ಬರಾವ್ ಬಿಸುರೆ, ಅಕ್ಷಯ ಮರಡಿ, ಪವನ ಮರಡಿ, ಅನಿಲ ಮರಡಿ, ಸಂದೀಪ ಮರಡಿ, ಸುರೇಶ ಮರಡಿ ಎಂಬುವವರನ್ನು ಬಂಧಿಸಲಾಗಿದೆ. ಕೊಲೆಯಾದ ಬಾಬು ಬೂಸಗೋಳ ಫೈನಾನ್ಸ್ ನಡೆಸುತ್ತಿದ್ದ, ಆರೋಪಿ ಸುಬ್ಬರಾವ್ ಬಿಸುರೆ ಪತ್ನಿ ಜತೆ ಅನೈತಿಕ ಸಂಬಂಧ ಬೆಳೆಸಿದ್ದನು, ಹಾಗೂ ಇನ್ನುಳಿದ ಆರೋಪಿತರೊಂದಿಗೆ ಮನೆಗೆ ಹೋಗುವ ದಾರಿ ವಿಚಾರವಾಗಿ ಗಲಾಟೆ ನಡೆದಿತ್ತು ಮತ್ತು ಪುರಸಭೆ ಚುನಾವಣೆಯ ಹಳೆಯ ವೈಷಮ್ಯದಿಂದ ಕೊಲೆ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಸಂಕೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.