Murdered by beating with a pickaxe 
ರಾಜ್ಯ

ಪಿಕಾಸಿಯಿಂದ ಹೊಡೆದು ಕೊಲೆ

ವಿಠ್ಠಲ ಹಣಮಂತ ಬಾಳೇಕುಂದ್ರಿ
ಖಾನಾಪುರ: ಮನೆಯ ಹಿಂದೆ ಚರಂಡಿ ಮೂಲಕ ನೀರು ಹರಿಸುವ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಟನೆ ತಾಲೂಕಿನ ತೋಲಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಅಮೀರ್​ ಹುಸೇನ್​ ಪಾಶ್ಚಾಪುರ(48) ಕೊಲೆಗೀಡಾದವ. ಕೊಲೆ ಆರೋಪಿ ಅಶೋಕ ರಾಮಾ ಉಗರಖೋಡ(28)ನನ್ನು ನಂದಗಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಗಳದ ವೇಳೆ ಆರೋಪಿ ಕೈಗೆ ಸಿಕ್ಕ ಪಿಕಾಸಿಯಿಂದ ಹಲ್ಲೆ ನಡೆಸಿದ್ದಾನೆಂದು ಪ್ರಕರಣ ದಾಖಲಿಸಿಕೊಂಡಿರುವ ನಂದಗಡ ಪೊಲೀಸರು ತಿಳಿಸಿದ್ದಾರೆ.