ಮಾದನಾಯಕನಹಳ್ಳಿ ಠಾಣೆ ಆರಕ್ಷಕ ನಿರೀಕ್ಷಕ ಮುರಳೀಧರ್​ ಸ್ಥಳ ಪರಿಶೀಲನೆ 
ರಾಜ್ಯ

ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿ / NELAMANGAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ : ಬೆಂಗಳೂರು ಉತ್ತರ ತಾಲೂಕಿನ ಮಾದಾವರದಲ್ಲಿ ದುಷ್ಕರ್ಮಿಗಳು ಧಾರವಾಡ ಮೂಲದ ರವಿ (30) ಎಂಬಾತನನ್ನು ಹತ್ಯೆ ಮಾಡಿ ಗುರುತು ಸಿಗದಂತೆ ಮಾಡಲು ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. 
2 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರವಿ ಪೀಣ್ಯ ಬಳಿ ಎಗ್​ರೈಸ್​ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಜ.1ರಂದು ತಡರಾತ್ರಿ ದುಷ್ಕರ್ಮಿಗಳು ತಲೆ ಮೇಲೆ ಕಲ್ಲುಹಾಕಿ ಹತ್ಯೆ ಮಾಡಿದ್ದಾರೆ. ಬಳಿಕ ಮೃತ ದೇಹಕ್ಕೆ ಬೆಂಕಿ ಹಚ್ಚಿ  ಪರಾರಿಯಾಗಿದ್ದಾರೆ. ಜ.2ರಂದು ಬೆಳಗ್ಗೆ 8 ಗಂಟೆಗೆ ಮಾದಾವರದ ಆಟದ ಮೈದಾನದಲ್ಲಿ ಕ್ರಿಕೆಟ್​ ಆಟವಾಡಲು ಬಂದಿದ್ದ ನಾಲ್ಕೆ$ದು ಯುವಕರ ತಂಡ ಶವ ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಸ್ಪಿ ಭೇಟಿ : ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ನೂತನ ಪೊಲೀಸ್​ ವರಿಷ್ಠಾಧಿಕಾರಿ ಎಂ.ವಿ.ಚಂದ್ರಕಾಂತ್​, ಅಪರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಾಗರಾಜು, ವೆಂಕಟೇಶ್​ ಪ್ರಸನ್ನ, ಡಿವೈಎಸ್ಪಿ ಜಗದೀಶ್​ ಮತ್ತು ಮಾದನಾಯಕನಹಳ್ಳಿ ಠಾಣೆ ಆರಕ್ಷಕ ನಿರೀಕ್ಷಕ ಮುರಳೀಧರ್​ ಸ್ಥಳ ಪರಿಶೀಲನೆ ನಡೆಸಿದ್ದಾರೆ.  

ಮಾದನಾಯಕನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ಮಾದಾವರದ ಆಟದ ಮೈದಾನದಲ್ಲಿ ರವಿ ಎಂಬಾತನ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಮಾಹಿತಿ ದೊರಕಿದೆ. ತನಿಖೆ ಚುರುಕುಗೊಳಿಸಲಾಗುವುದು.