ಗೋಪಿ ಕೊಲೆ ಖಂಡಿಸಿ ಕುಟುಂಬಸ್ಥರು ತಾಲೂಕು ಕಚೇರಿ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಆನೇಕಲ್ : ಭಾನುವಾರ ಸಂಜೆ ಅಪಹರಣವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ತಮಿಳುನಾಡಿನ ಡೆಂಕಣಿಕೋಟೆ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ತಾಲೂಕಿನ ಕರ್ಪೂರು ಬಳಿ ಹೊನ್ನ ಕಳಸಾಪುರದ ರಿಯಲ್ ಎಸ್ಟೇಟ್ ಉದ್ಯಮಿ ಗೋಪಾಲ್ (38) ಹತ್ಯೆಯಾದವರು.
ಏನಿದು ಟನೆ: ಗೋಪಾಲ್ ಸ್ನೇಹಿತ ಸತೀಶ್ ಜತೆ ಬೆಸ್ತಮಾನಹಳ್ಳಿ &ಕರ್ಪೂರು ಮಾರ್ಗವಾಗಿ ಆನೇಕಲ್ಗೆ ಕಾರಿನಲ್ಲಿ ಬರುತ್ತಿದ್ದಾಗ ಟಾಟಾಏಸ್ನಿಂದ ಡಿಕ್ಕಿ ಹೊಡೆದು ಬಳಿಕ ಇನ್ನೊಂದು ಕಾರಿನಲ್ಲಿ ಗೋಪಿಯನ್ನು ಅಪಹರಿಸಲಾಗಿತ್ತು. ಜತೆಯಲ್ಲಿದ್ದ ಸತೀಶ್ ತಪ್ಪಿಸಿಕೊಂಡು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಏಳು ತಂಡ ರಚನೆ- ಪ್ರಕರಣದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಎಸ್ಪಿಚಂದ್ರಕಾಂತ್, ಅಡಿಷನಲ್ ಎಸ್ಪಿ ಪ್ರಸನ್ನ ಕುಮಾರ್ ಸೇರಿದಂತೆ ಇಬ್ಬರು ಡಿವೈಎಸ್ಪಿ, ಹತ್ತಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳ ಏಳು ತಂಡಗಳನ್ನು ರಚಿಸಲಾಗಿತ್ತು. ಗೋಪಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆನೇಕಲ್ ಪೊಲೀಸ್ ಠಾಣೆ ಬಳಿ ಜಮಾಯಿಸಿ, ಈ ಹಿಂದೆ ಗೋಪಿ ಜತೆಯಲ್ಲಿ ವ್ಯವಹಾರ ಮಾಡುತ್ತಿದ್ದ ಮೋಹನ್ ಬಾಬು ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಮೇರೆಗೆ ಪೊಲೀಸರು ಮೋಹನ್ ಬಾಬುನನ್ನು ರಾತ್ರಿ ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಈ ವೇಳೆ ಸುಪಾರಿ ಕೊಟ್ಟಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಶವ ಪತ್ತೆ: ಸೋಮವಾರ ಬೆಳಗ್ಗೆ ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ರ್ನಿಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಗೋಪಿ ಅವರ ಮೃತದೇಹ ದೊರೆತಿದ್ದು, ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಡೆಂಕಣಿಕೋಟೆ ಪೊಲೀಸರು ಆನೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದ ಕುಟುಂಬಸ್ಥರು, ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರೆ ಇಂಥ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ಸಿಗುವವರೆಗೂ ಮೃತದೇಹ ಪಡೆಯುವುದಿಲ್ಲ ಎಂದು ತಾಲೂಕು ಕಚೇರಿ ಎದುರಿನ ಮುಖ್ಯ ರಸ್ತೆಯಲ್ಲಿ ಗೋಪಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಿಂದಾಗಿ 2 ಗಂಟೆಗಳಿಗೂ ಹೆಚ್ಚು ಹೊತ್ತು ಸಂಚಾರ ಸಿಕ್ಕು ಉಂಟಾಗಿತ್ತು. ಈ ಬೆನ್ನಲ್ಲೇ ಗ್ರಾಮಸ್ಥರು ಮೋಹನ್ ಬಾಬು ಮನೆ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರಿಗೆ ಮೊದಲೇ ಮಾಹಿತಿ ಇದ್ದ ಕಾರಣ ಪರಿಸ್ಥಿತಿ ನಿಯಂತ್ರಿಸಿದರು. ಗೋಪಿ ಪತ್ನಿ ಆನೇಕಲ್ ಪಟ್ಟಣದ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.
ಆಪ್ತ ಸ್ನೇಹಿತರ ನಡುವೆ ದ್ವೇಷ : ಮೋಹನ್ ಬಾಬು ಹಾಗೂ ಗೋಪಿ ಇಬ್ಬರೂ ಹೊನ್ನ ಕಳಸಾಪುರ ಗ್ರಾಮದವರಾಗಿದ್ದು, ಹತ್ತಿರದ ಸಂಬಂಧಿಕರು. ಜತೆಗೆ ಎದುರು&ಬದರು ಮನೆಯಲ್ಲಿ ವಾಸವಾಗಿದ್ದರು. 10 ವರ್ಷದ ಹಿಂದೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದರು. ಮೋಹನ್ ಬಾಬು ಹೇಳಿದ ಕೆಲಸವನ್ನು ಗೋಪಿ ಮಾಡುತ್ತಿದ್ದ. ಆದರೆ, ಇಬ್ಬರ ನಡುವೆ ವ್ಯವಹಾರದಲ್ಲಿ ಬಿರುಕು ಮೂಡಿದ ನಂತರ ಗೋಪಿ ಪ್ರತ್ಯೇಕವಾಗಿ ವ್ಯವಹಾರ ಮಾಡುತ್ತಿದ್ದ. ಇದರಿಂದ ಮೋಹನ್ ಬಾಬುಗೆ ಬರುತ್ತಿದ್ದ ವ್ಯವಹಾರ ಕಡಿಮೆಯಾಗಿ ರೊಚ್ಚಿಗೆದ್ದಿದ್ದ ಎನ್ನಲಾಗಿದೆ. ವ್ಯವಹಾರಗಳು ಗೋಪಿ ಬಳಿ ಹೋಗುತ್ತಿವೆ ಎಂಬ ಕಾರಣವೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಎರಡು ವರ್ಷದ ಹಿಂದೆಯೂ ಗೋಪಿ ಮೇಲೆ ಹಲ್ಲೆ ಮಾಡಿದ್ದ ಮೋಹನ್ ಬಾಬು, ಇತ್ತೀಚೆಗೆ ಮೊಬೈಲ್ ಮೂಲಕ ಗನ್ ಫೋಟೋ ಸಮೇತ "ನಿನ್ನ ಕೊನೆಯ ದಿನಗಳು ಪ್ರಾರಂಭ ಆಗಿವೆ' ಎಂಬ ಮೆಸೇಜ್ ಮಾಡಿರುವುದು ಮೊಬೈಲ್ ಪರಿಶೀಲನೆ ವೇಳೆ ಪೊಲೀಸರಿಗೆ ಗೊತ್ತಾಗಿದೆ.
ದುಷ್ಕರ್ಮಿಗಳ ಪತ್ತೆಗೆ ಏಳು ತಂಡ ರಚನೆ ಮಾಡಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮದ ವಿಚಾರವಾಗಿ ಅದೇ ಗ್ರಾಮದ ಮೋಹನ್ಬಾಬು ಕೊಲೆ ಮಾಡಿಸಿದ್ದಾನೆ. ಅಪಹರಣಕಾರರನ್ನು ಬಂಧಿಸಿ ನೊಂದ ಕುಟುಂಬಸ್ಥರಿಗೆ ನ್ಯಾಯ ಒದಗಿಸುತ್ತೇವೆ.
ಕೊಲೆಯಾದ ಗೋಪಾಲ್ ಹಾಗೂ ಸುಪಾರಿ ಕೊಟ್ಟವನೂ ನಮ್ಮ ಜನಾಂಗದವನೇ ಆಗಿದ್ದಾನೆ. ಆದರೆ, ಅನ್ಯಾಯ ಆದ ಕುಟುಂಬದ ಪರವಾಗಿ ಬಂದಿದ್ದೇನೆ. ಪೊಲೀಸರು ತನಿಖೆ ಕೈಗೊಂಡಿದ್ದು, ಗೃಹ ಸಚಿವರ ಜತೆ ಈ ಬಗ್ಗೆ ಮಾತನಾಡಿ ಆರೋಪಿಗಳಿಗೆ ತಕ್ಕ ಶಿೆ ಆಗುವಂತೆ ಮನವಿ ಮಾಡುತ್ತೇನೆ.