7 Murder  
ರಾಜ್ಯ

ಒಂದೇ ಕುಟುಂಬದ 7 ಜನರ ಹತ್ಯೆ, ಇಬ್ಬರ ಮೃತದೇಹ ತಮಿಳುನಾಡಿನಲ್ಲಿ ಪತ್ತೆ

ಮೃತದೇಹಗಳ ಮೇಲಿನ ಚಿನ್ನಾಭರಣ ಕಿತ್ತುಕೊಂಡು ಗಿರವಿ ಇಟ್ಟಿದ್ದ

ಬೆಂಗಳೂರು: ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಕಾರಣಕ್ಕೆ ಹತ್ಯೆಗೈದ ಎಂಬುದು ಇನ್ನೂ ನಿಗೂಢವಾಗಿದೆ. ಈವರೆಗೆ ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಹಂತಕನ ಕ್ರೌರ್ಯ ಯಾವ ಸಿನಿಮಾಗೂ ಕಮ್ಮಿಯಿಲ್ಲದಂತೆ ಘನ ೋರ ಹಾಗೂ ರೋಚಕವಾಗಿದೆ.

ಅಕ್ಟೋಬರ್ 16ರಂದು ಪತ್ನಿ ಸುನಿತಾಳನ್ನು ಮಗಳ ಮುಂದೇಯ ಒರಳುಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದ ಆರೋಪಿ ಇಂದುಶೇಖರ್ ಮನೆಯ ಬೆಡ್‌ರೂಮ್‌ನಲ್ಲಿ ಮೃತದೇಹವನ್ನು ಪ್ಲ್ಯಾಸ್ಟಿಕ್ ಚೀಲದಲ್ಲಿ ತುಂಬಿ ಇಟ್ಟಿದ್ದ. ಇದಕ್ಕೂ ಮುನ್ನ ಮಾಂಸದ ಊಟದಲ್ಲಿ ಮತ್ತು ಬರುವ ಔಷಧ ಬೆರೆಯಿಸಿ ಪತ್ನಿಗೆ ಊಟ ಮಾಡಿಸಿದ್ದ. ನಂತರ ಒರಳು ಕಲ್ಲಿನಿಂದ ತಲೆಗೆ ಹೊಡೆದು ಸಾಯಿಸಿದ್ದ.

ಇದಾದ ಬಳಿಕ ಅತ್ತೆ ರೂಪವತಿಗೆ ಕರೆ ಮಾಡಿ ಮನೆಗೆ ಊಟಕ್ಕೆಂದು ಕರೆದು, ಅ. 18ರಂದು ಅವಳನ್ನು ಹತ್ಯೆಗೈದು, ಅ.19ರಂದು ಎರಡು ಮೃತದೇಹಗಳನ್ನು ಮಗಳ ಸಹಾಯ ಪಡೆದು ತಮಿಳುನಾಡಿನ ಸೇಲಂ ಹಾಗೂ ಧರ್ಮಪುರಿ ನಡುವೆ ಎರ್ಕಾಡು ಘಾಟ್‌ನಲ್ಲಿ ಮೃತದೇಹಗಳನ್ನು ಎಸೆದು ವಾಪಸ್ ಬಂದಿದ್ದ ಹಂತಕನ ಕರಾಳ ಕಥೆ ಅಚ್ಚರಿ ಮೂಡಿಸಿದೆ.

ಚಿನ್ನಾಭರಣ ಗಿರವಿ ಇಟ್ಟಿದ ಹಂತಕ:

ಪತ್ನಿ ಹಾಗೂ ಅತ್ತೆಯನ್ನು ಹತ್ಯೆಗೈದ ಬಳಿ ಆರೋಪಿ ಎರಡು ಮೃತದೇಹಗಳ ಮೈಮೆಲಿದ್ದ ಚಿನ್ನಾಭರಣವನ್ನು ಕಿತ್ತುಕೊಂಡು ಶ್ರೀರಾಂಪುರ ಸಮೀಪದ ಜ್ಯುವೆಲ್ಲರಿ ಅಂಗಡಿಯೊದರಲ್ಲಿ ಗಿರವಿ ಇಟ್ಟಿದ್ದ. ಅದರಿಂದ ಬಂದ ಹಣದಿಂದ ಇಬ್ಬರ ಮೃತದೇಹ ಸಾಗಣೆ ಹಾಗೂ ಇನ್ನೊಳಿದವರ ಹತ್ಯೆಗೆ ಬಳಕೆ ಮಾಡಿಕೊಂಡಿದ್ದ. ಅಲ್ಲದೇ ಆ ಹಣದಿಂದ ಬಾಡೂಟ, ಮದ್ಯ ಸೇವನೆ ಹಾಗೂ ತಮಿಳುನಾಡಿಗೆ ದೇಹಗಳನ್ನು ಸಾಗಣೆ ಮಾಡಲು ಖರ್ಚು ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಎರಡು ಮೃತದೇಹಗಳು ಪತ್ತೆ:

ಪೂರ್ವ ನಿಯೋಜನೆಯಂತೆ ಪ್ಲಾನ್ ಮಾಡಿದ್ದ ಆರೋಪಿ ಅ.19ರಂದು ತಮಿಳುನಾಡಿನಲ್ಲಿ ಎಸೆದು ಬಂದಿದ್ದ ಪತ್ನಿ ಹಾಗೂ ಅತ್ತೆಯ ಮೃತದೇಹಗಳು ಪತ್ತೆಯಾಗಿವೆ. ಆರೋಪಿ ತೋರಿಸಿದ ಸ್ಥಳದಲ್ಲಿ ಶನಿವಾರ ಬೆಳಗ್ಗೆ ಪೊಲೀಸರು ಹುಡುಕಾಟ ನಡೆಸಿದ ವೇಳೆ ಸುನಿತಾ ಹಾಗೂ ರೂಪವತಿ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ.

ಎರಡು ಮೃತದೇಹಗಳಿಗೆ ಸೆಲ್ಲೋ ಟೇಪ್‌ನಿಂದ್ ಮುಖ, ತಲೆಗೆ ನಾಲ್ಕೈದು ಸುತ್ತು ಸುತ್ತಿದ್ದ. ಕಲ್ಲಿನಿಂದ ತಲೆ, ಮುಖಕ್ಕೆ ಹಲ್ಲೆ ಮಾಡಿರುವುದರಿಂದ ರಕ್ತಸೋರಿಕೆಯಾಗಬಾರದು ಎಂದು ಟೇಪ್‌ನ್ನು ಬಳಕೆ ಮಾಡಿದ್ದ. ಮೃತದೇಹಗಳು ಪತ್ತೆಯಾಗಿರುವುದರಿಂದ ಕುಟುಂಬಸ್ಥರನ್ನು ಸೇಲಂಗೆ ಕರೆದೊಯ್ದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಸಂಬಂಧಿಕರಿಗೆ ಪೊಲೀಸರು ಹಸ್ತಾಂತರಿಸಲಿದ್ದಾರೆ.

ಕೊಲೆ ನಡೆದು ಹದಿನೈದು ದಿನ ಕಳೆದಿರುವ ಪರಿಣಾಮ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈವರೆಗೆ ಮೂರು ಮೃತದೇಹಗಳು ಪತ್ತೆಯಾಗಿದ್ದು ಬಾಕಿ ಉಳಿದ ನಾಲ್ಕು ಮೃತದೇಹಗಳ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಬಾಲಕ ಪುನೀತ್ ಅಂತ್ಯಕ್ರಿಯೆ:

ಚಿಕ್ಕಮಗು ಎನ್ನದೆ 7 ವರ್ಷದ ಪುನೀತ್‌ನನ್ನು ಹತ್ಯೆಗೈದು ನಂದಿಬೆಟ್ಟದಲ್ಲಿ ಎಸೆದು ಬಂದಿದ್ದ ಬಾಲಕನ ಅಂತ್ಯಕ್ರಿಯೇಯನ್ನು ಶನಿವಾರ ಕುಟುಂಬಸ್ಥರು ನೆರವೇರಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ನಿನ್ನೆ ಪುನೀತ್‌ನ ಮೃತದೇಹ ಪತ್ತೆಯಾಗಿತ್ತು. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಮರಣೋತ್ತರ ವರದಿಯಲ್ಲಿ ಬಾಲಕನ ತಲೆಗೆ ಆರು ಬಾರಿ ಕಲ್ಲಿನಿಂದ ಹೊಡೆದಿರುವ ಗಂಭೀರ ಗಾಯದ ಗುರುಗಳಾಗಿವೆ ಎಂಬುದು ಮರಣೋತ್ತರ ವರದಿಯಲ್ಲಿ ತಿಳಿದಿದೆ.

ಏಳು ಮಂದಿ ಹತ್ಯೆಯ ವಿವರ:

ಪತ್ನಿ ಸುನಿತಾ ಹಾಗೂ ಅತ್ತೆ ರೂಪವತಿಯನ್ನು ಅ.16 ಮತ್ತು 18ರಂದು ಹತ್ಯೆ ಮಾಡಿದ್ದರೆ. ಬಾಮೈದ ಶಿವಕುಮಾರ್, ದಿವ್ಯಾ ಹಾಗೂ ಅವರ 7 ವರ್ಷದ ಪುತ್ರ ಪುನೀತ್ ಅ.24ರಂದು ಹತ್ಯೆ ಮಾಡಿದ್ದಾನೆ. ಅ.23ರಂದು ಬೆಳಗ್ಗೆ ಅಕ್ಕ ಹಾಗೂ ತಾಯಿ ರೂಪವತಿಗೆ ಕರೆ ಮಾಡಿದ್ದ ಶಿವಕುಮಾರ್ ಪೋನ್ ಕರೆಗಳನ್ನು ಸ್ವೀಕರಿಸಿರಲಿಲ್ಲ. ಇದರಿಂದ ಬಾವ ಇಂದುಶೇಖರ್‌ಗೆ ಕರೆ ಮಾಡಿದ್ದರು. ಪತ್ನಿ ಸುನಿತಾ ಹಾಗೂ ಅತ್ತೆ ಇಬ್ಬರು ಪ್ರವಾಸಕ್ಕೆ ಹೋಗಿದ್ದಾರೆ. ನೀವು ಮನೆಗೆ ಊಟಕ್ಕೆ ಬರುವಂತೆ ಹೇಳಿದ್ದ. ಆತನ ಮಾತಿನಂತೆ ಮೂವರು ಹಂತಕನ ಮನೆಗೆ ಬಂದಿದ್ದರು.

ದಂಪತಿಗೆ ರಾತ್ರಿ ಮಾಂಸ ಆಹಾರ ಮತ್ತು ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದ. ದಿವ್ಯಾ ಮತ್ತು ಪುನೀತ್ ಇಬ್ಬರು ರೂಮಿನಲ್ಲಿ ನಿದ್ರೆಗೆ ಜಾರಿದ್ದರೂ. ಶಿವಕುಮಾರ್ ಹಾಲ್ನಲ್ಲಿ ಮಲಗಿದ್ದ. ಇದೇ ಸಮಯಕ್ಕೆ ಕಾದು ಕುಳಿತಿದ್ದ ಆರೋಪಿ ಇಂದುಶೇಖರ್ ರುಬ್ಬುವ ಕಲ್ಲಿನಿಂದ ಶಿವಕುಮಾರ್ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಇಟ್ಟಿದ್ದ. ಅ.25ರಂದು ಬೆಳಗಿಜಾವ ಎಚ್ಚರವಾಗಿದ್ದ ದಿವ್ಯಾ, ಪತಿ ಶಿವಕುಮಾರ್ ಎಲ್ಲಿದ್ದಾರೆ ಎಂದು ಕೇಳಿದ್ದಾಳೆ. ಅಷ್ಟರಲ್ಲೇ ಅವಳ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ. ತಾಯಿ ಕುರುಚಾಟ ಕೇಳಿದ ಬಾಲಕ ಪುನೀತ್ ಕೊಠಡಿಯಿಂದ ಎದ್ದು ಹೊರಕ್ಕೆ ಬಂದಿದ್ದಾನೆ. ಆತನನ್ನು ಕಲ್ಲಿನಿಂದ ಜಜ್ಜಿ ಬೆಳಗಾಗುವುದರೊಳಗೆ ಮೂವರನ್ನು ಕೊಲೆ ಮಾಡಿದ್ದಾನೆ. ಅಪ್ರಾಪ್ತೆ ಮಗಳು-ತಂದೆ ಸೇರಿ ಮೂವರ ಶವಗಳನ್ನು ಅ.27ರಂದು ತಂದೆ- ಮಗಳು ಕಾರಿನ ಡಿಕ್ಕಿಯಲ್ಲಿ ಹಾಕಿದ್ದಾರೆ. ಮೈಸೂರಿನ ಚಾರ್ಮಾಡಿ ಬೆಟ್ಟದಲ್ಲಿ ಶಿವಕುಮಾರ್ ಮತ್ತು ದಿವ್ಯಾಳ ದೇಹಗಳನ್ನು ಎಸೆದು ಬಂದಿದ್ದಾನೆ. ಆದರೆ ಮಗ ಪುನೀತ್ ಮೃತದೇಹ ಬೆಂಗಳೂರಿಗೆ ವಾಪಸ್ ತಂದು ನಂದಿ ಬೆಟ್ಟದಲ್ಲಿ ಎಸೆದಿದ್ದಾನೆ. ನಂತರ ದಿವ್ಯಾ ಮೊಬೈಲ್ ನಿಂದ ಆಕೆಯ ತಾಯಿಗೆ ನಾವು ಟ್ರಿಪ್ ಬಂದಿದ್ದೇವೆ ಎಂದು ಸಂದೇಶ ಕಳುಹಿಸಿದ್ದ ಆರೋಪಿ ಹೀನ ಕೃತ್ಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಶಂಕರ್, ನಳಿನಿ ಹತ್ಯೆ:

ಕೊನೆಯದಾಗಿ ಅ.31ರಂದು ಅಕ್ಕ ಸುನಿತಾ, ತಾಯಿ ರೂಪವತಿ ಹಾಗೂ ಶಿವಕುಮಾರ್‌ಗೆ ಕರೆ ಮಾಡಿದ್ದ ಶಂಕರ್, ಈ ವೇಳೆ ಆರೋಪಿ ಇಂದುಶೇಖರ್‌ಗೆ ಕರೆ ಮಾಡಿದ್ದಾಗ ಎಲ್ಲರೂ ಆಲ್ ಇಂಡಿಯಾ ಟ್ರಿಪ್‌ಗೆ ಹೋಗಿದ್ದಾರೆ. ಇಂದು ರಾತ್ರಿ ಮನೆಗೆ ಊಟಕ್ಕೆ ಬರುವಂತೆ ಹೇಳಿದ್ದಾನೆ. ನವೆಂಬರ್ 1ರಂದು ಭಾನುವಾರ ಅಕ್ಕನ ಮನೆಗೆ ಪತ್ನಿ ನಳಿನಿ, ಮಗ ಯತೀನ್ ಜೆತೆ ಬಂದಿದ್ದ ಶಂಕರ್ ದಂಪತಿಗೆ ರಾತ್ರಿ ಮಾಂಸಹಾರ ಮತ್ತು ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಾನೆ.

ರಾತ್ರಿ ನಿದ್ರೆ ಮಂಪರಿಗೆ ಜಾರಿದ ತಕ್ಷಣ ಶಂಕರ್, ನಳಿನಿ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ನಂತರ ದಂಪತಿಯ ಮೃತದೇಹಗಳನ್ನು ಚೀಲದಲ್ಲಿ ತುಂಬಿ ಪ್ಯಾಕ್ ಮಾಡಿದ್ದ. ಆದರೆ 11ವರ್ಷದ ಯತೀನ್‌ಗೆ ಮೂಹೂರ್ತ ಬೇರೆ ದಿನ ನಿಗದಿ ಪಡಿಸಿದ್ದ. ಯತೀಶ್ ಅಪ್ಪ-ಅಮ್ಮ ಎಲ್ಲಿ ಎಂದು ಕೇಳಿದಾಗಿ ಅವರು ಬೇಗ ಎದ್ದು ಮನೆಗೆ ಹೋಗಿದ್ದಾರೆ ಎಂದು ಸಮಜಾಯಿಸಿ ಉತ್ತರ ನೀಡಿದ್ದ.

ನ.2ರಂದು ಬೆಳಗಿಜಾವ ಶಿರಾಡಿ ಘಾಟ್‌ಗೆ ನಳಿನಿ ಮತ್ತು ಶಂಕರ್ ಮೃದೇಹಗಳನ್ನು ಎಸದು ಬಂದಿದ್ದ. ಮಗ ಯತೀಶ್ ಎನೆಂದು ಕೇಳಿದಕ್ಕೆ ಕಸದ ಚೀಲಗಳು ಎಂದು ಹೇಳಿದ್ದ. 15ದಿನ ಅಂತರದಲ್ಲಿ ಏಳು ಮಂದಿಯನ್ನು ಹತ್ಯೆಗೈದು ಮುಗಿಸಿದ್ದ ಹಂತಕನನ್ನು ಕೊನೆ ಘಳಿಗೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶವ ಸಾಗಿಸಿದ್ದ ಕಾರು ಸೀಜ್

ಏಳು ಮೃತದೇಹಗಳನ್ನು ಸಾಗಣೆ ಮಾಡಿದ್ದ ಆರೊಪಿ ಕಾರನ್ನು ರಾಜಾಜಿನಗರ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ಕಾರಿನಲ್ಲಿ ಚೀಲ, ಮದ್ಯದ ಬಾಟಲ್ ಪತ್ತೆಯಾಗಿದೆ. ಬೆಂಗಳೂರಿನಿಂದ ತಮಿಳುನಾಡಿಗೆ ಆರೋಪಿ ಶವಸಾಗಿಸುವ ವೇಳೆ ಗಡಿಭಾಗದ ಪೊಲೀಸ್ ಚೆಕ್‌ಪೋಸ್ಟ್ ದಾಟಿಸಿದ್ದು ಹೇಗೆ? ಪೊಲೀಸರು ಕಾರು ಪರಿಶೀಲನೆ ಮಾಡಲಿಲ್ಲವೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಆದರೆ, ಕಾರಿನ ಮೇಲೆ ಪ್ರೇಸ್ ಎಂದು ಬರೆಸಿಕೊಂಡಿರುವುದು ಹಂತಕನಿಗೆ ಅನುಕೂಲವಾಗಿದೆ. ತಾನು ಪತ್ರಕರ್ತ ಎಂದು ಹೇಳಿಕೊಂಡು ಓಡಾಡುತ್ತಿದ್ದ ಕಾರಣ ಮೃತದೇಹ ಸಾಗಣೆಗೆ ಸಹಾಯವಾಗಿದೆ ಎನ್ನಲಾಗಿದೆ.

ಸ್ಥಳೀಯರು ಬಿಚ್ಚಿಟ್ಟ ಸತ್ಯ:

ಆರೋಪಿ ಕ್ಯಾಬ್ ಚಾಲಕ ಇಂದುಶೇಖರ್‌ನ ಹಿಂಸಾತ್ಮಕ ಹಿನ್ನೆಲೆ ಹೊಂದಿರುವುದು, ಆತನ ನಡವಳಿಕೆ ಬಗ್ಗೆ ನೆರೆಹೊರೆಯವರು, ಬಾಡಿಗೆದಾರರು ಆತಂಕಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಆರೋಪಿ ಮನೆಯಲ್ಲಿ ಪತ್ನಿಯೊಂದಿಗೆ ನಿತ್ಯಜಗಳವಾಡುತ್ತಿದ್ದ. ಒರಟು ಸ್ವಭಾವದ ವ್ಯಕ್ತಿಯಾಗಿದ್ದು, ಸಣ್ಣಪುಟ್ಟ ವಿಚಾರಗಳಿಗೂ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ, ಕಾರು ಪಾರ್ಕಿಂಗ್ ಸೇರಿ ಸಣ್ಣ ವಿಚಾರಗಳಿಗೂ ಸ್ಥಳೀಯರೊಂದಿಗೆ ಗಲಾಟೆ, ಅವಾಚ್ಛ ಶಬ್ದಗಳಿಂದ ನಿಂದಿಸುತ್ತಿದ್ದ. ಈತನ ನಡವಳಿಕೆಗೆ ಹೆದರಿ ಕಟ್ಟಡದ ಇತರ ಬಾಡಿಗೆದಾರರು ಸಂಪರ್ಕವನ್ನೇ ಇಟ್ಟುಕೊಳ್ಳುತ್ತಿರಲಿಲ್ಲ. ಇಂದುಶೇಖರ್ ಇತರರೊಂದಿಗೆ ಗಲಾಟೆ ಮಾಡುವಾಗಲೆಲ್ಲಾ ಆತನ ಮಗಳು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದಳು. ಬಾಡಿಗೆ ಮನೆ ಕಟ್ಟಡದ ವಿಚಾರವಾಗಿ ಗಲಾಟೆ ಮಾಡಿಕೊಂಡಿರುವ ಪ್ರಕರಣ ಸದ್ಯ ಕೋರ್ಟ್‌ನಲ್ಲಿ ಸಿವಿಲ್ ವ್ಯಾಜ್ಯನಡೆಯುತ್ತಿದೆ.