- ನಿಪ್ಪಾಣಿ ಯುವಕನ ಕೊಲೆ ಪ್ರಕರಣ
- ಇಬ್ಬರು ಆರೋಪಿತರ ಬಂಧನ
- ಬಸವೇಶ್ವರ ಚೌಕ ಠಾಣೆ ಪೊಲೀಸರಿಂದ ಬಂಧನ
ನಿಪ್ಪಾಣಿ ಕೊಲೆ ಪ್ರಕರಣ: ಇಬ್ಬರ ಬಂಧನ
ಚಿಕ್ಕೋಡಿ : ನಿಪ್ಪಾಣಿ ಬಸವೇಶ್ವರ ಚೌಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನಿಪ್ಪಾಣಿ ತಾಲೂಕಿನ ಬೋಸಲೆವಾಡಾ( ಜತ್ರಾಟವೇಸ್) ಗ್ರಾಮದ ನಿವಾಸಿ ಅಭಿಷೇಕ ಬಾಬನೆ(೨೬) ಎಂಬಾತನ ಕೊಲೆ ಪ್ರಕರಣದ ಆರೋಪಿತರಾದ ಸಾಯಿನಾಥ@ಶುಭಂ ಬಾಮನೆ(೧೯),ವಿಠ್ಠಲ ಬಾಮನೆ(೨೦)ಯನ್ನು ಪೊಲೀಸರು ಭಾನುವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೃತ ಯುವಕ ಹಾಗೂ ಆತನ ಸಹೋದರ ಶುಭಂ ಬಾಮನೆ ಆರೋಪಿತರ ಸಹೋದರಿಯೊಂದಿಗೆ ಸಲುಗೆಯಿಂದ ಮಾತನಾಡಿರುವ ವಿಷಯಕ್ಕೆ ನಡೆದ ಜಗಳದಿಂದ ವೈಷ್ಯಮ ಬೆಳೆದಿತ್ತು.ಇದೆ ವಿಷಯವಾಗಿ ಆರೋಪಿತರ ತಂದೆ ಹಾಗೂ ಅಪ್ರಾಪ್ತ ಸಹೋದರ ಮೃತ ಯುವಕನ ಜತೆ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಆರೋಪಿತರು ತಮ್ಮ ತಂದೆಗೆ ಹೊಡೆಯುತ್ತಿದ್ದಾರೆ ಎಂದು ಬಾವಿಸಿ ಕೋಪದಲ್ಲಿ ಚಾಕುವಿನಿಂದ ಮೃತ ಅಭಿಷೇಕ ಬಾಮನೆ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.ಆರೋಪಿತರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು,ಇನ್ನೋರ್ವ ಆರೋಪಿ ಅಪ್ರಾಪ್ತನನ್ನು ಬಾಲ ನ್ಯಾಯಾಲಯ ಮಂಡಳಿಗೆ ಒಪ್ಪಿಸಿರುವುದಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಿಳಿಸಿದ್ದಾರೆ.