ಬಾಲಕನ ಸಾವು ಪ್ರಕರಣ: ಶಿಕ್ಷಕರ ಮೇಲೆ ದೂರು ದಾಖಲು
- ವಸತಿ ಶಾಲೆಯ ಬಾಲಕ ಸಾವು ಪ್ರಕರಣ
- ಕುಟುಂಬಸ್ಥರಿಂದ ಕೊಲೆ ಆರೋಪ
- ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದ ಘಟನೆ
- ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬಾಲಕನ ಅನುಮಾನಾಸ್ಪದ ಸಾವು ಪ್ರಕರಣ
| ಕುಟುಂಬಸ್ಥರಿಂದ ಕೊಲೆ ಆರೋಪ | ಇಬ್ಬರು ಶಿಕ್ಷಕರ ಮೇಲೆ ದೂರು ದಾಖಲು
ಚಿಕ್ಕೋಡಿ: ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾ ದ ನೀಡಗುಂದಿ ಗ್ರಾಮದ ಗೌತಮ ಭಜಂತ್ರಿ ಸಾವಿನ ಪ್ರಕರಣದಲ್ಲಿ ಕೊಲೆಯ ಆರೋಪ ಕೇಳಿ ಬಂದಿದೆ.
ಮೃತ ಬಾಲಕನ ಕುಟುಂಬಸ್ಥರು ಸಾವಿನ ಬಗ್ಗೆ ಕೊಲೆ ಶಂಕೆ ವ್ಯಕ್ತಪಡಿಸಿ, ವಸತಿ ಶಾಲೆಯ ಪ್ರಿನ್ಸಿಪಾಲ ಹಾಗೂ ವಾರ್ಡ್ ನ ಮೇಲೆ ದೂರು ದಾಖಲಿಸಿದ್ದಾರೆ. ಬಾಲಕನ ಮೃತದೇಹದ ಮೇಲೆ ಗಾಯಗಳ ಗುರುತು ಕಂಡು ಬಂದಿವೆ. ಶಾಲೆಯ ಶಿಕ್ಷಕರು ಯಾರೋ ಕಾರಣಕ್ಕೆ ಬಾಲಕನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ಕುರಿತು ರಾಯಬಾಗ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂದೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ,ಮೃತನ ಸಾವಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕುಡಚಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತ ಕುಟುಂಬಕ್ಕೆ 20 ಲಕ್ಷ ರೂ.ಪರಿಹಾರ ನೀಡುವಂತೆ ಮಾಜಿ ಶಾಸಕ ಪಿ.ರಾಜೀವ ಆಗ್ರಹಿಸಿದರು.