ಬಾಲಕಿಯ ಕೊಲೆ ಪ್ರಕರಣ ಅಪರಾಧಿಗೆ ಶಿಕ್ಷೆ ಪ್ರಕಟ 
ರಾಜ್ಯ

ಬಾಲಕಿ ಕೊಲೆ ಪ್ರಕರಣ:ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ

ಪ್ರಮುಖ ಮುಖ್ಯಾಂಶಗಳು

  • ಬಾಲಕಿಯನ್ನು ಕೊಲೆ ಮಾಡಿದ್ದ ಅಪರಾಧಿಗೆ ಜೈಲು ಶಿಕ್ಷೆ ಪ್ರಕಟ
  • ಚಿಕ್ಕೋಡಿ ನ್ಯಾಯಾಲಯದಿಂದ ಶಿಕ್ಷೆ ವಿಧಿಸಿ ತೀರ್ಪು
  • ರಾಯಬಾಗ ತಾಲೂಕಿನ ಹಾರುಗೇರಿಯಲ್ಲಿ ನಡೆದಿದ್ದ ಪ್ರಕರಣ
ಪ್ರೀತಿ ನಿರಾಕರಿಸಿದ ಬಾಲಕಿ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ
ಚಿಕ್ಕೋಡಿ:
ಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದ ರಾಯಬಾಗ ತಾಲೂಕಿನ ಹಾರುಗೇರಿಯ ನಿವಾಸಿಯಾದ ಅಮೀರ ಲಾಲಸಾಬ ಜಮಾದಾರ(26) ಅಪರಾಧಿಗೆ ಇಲ್ಲಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶ ವಿಜಯಕುಮಾರ ಅವರು 3೦ ಸಾವಿರ ರೂ.ದಂಡ ಹಾಗೂ ಜೀವಾವಧಿ ಶಿಕ್ಷೆ ನೀಡಿ ಈಚೆಗೆ ತೀರ್ಪು ನೀಡಿದ್ದಾರೆ.
ಕೊಲೆಯಾದ ಬಾಲಕಿ ಲಕ್ಷ್ಮೀ ರುದ್ರನ್ನವರ ಅಥಣಿ ತಾಲೂಕಿನ ಪಿ.ಕೆ ನಾಗನೂರ ನಿವಾಸಿಯಾಗಿದ್ದು, ಹಾಲಿ ಹಾರೂಗೇರಿಯಲ್ಲಿ ವಾಸವಾಗಿದ್ದರು. ಕೊಲೆಯಾದ ಅಪ್ರಾಪ್ತೆಯನ್ನು ಪ್ರೀತಿಸುವಂತೆ ಅಪರಾಧಿ ಪೀಡಿಸಿದ್ದು, ಲಕ್ಷ್ಮೀ ಆತನ ಪ್ರೀತಿ ನಿರಾಕರಿಸಿದ್ದಳು, ಇದರಿಂದ ಕೋಪಿತಗೊಂಡ ಅಪರಾಧಿ ಅಮೀರ ಜಮಾದಾರ ಬಾಲಕಿಯನ್ನು ಚಾಕುವಿನಿಂದ ಇರಿದು 2021 ರಲ್ಲಿ ಕೊಲೆ ಮಾಡಿದರ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖಾಧಿಕಾರಿ ರಾಘವೇಂದ್ರ ಖೋತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾದೀಶ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕೊಲೆಯಾದ ಯುವತಿಯ ಪರ ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ ವಾದ ಮಂಡಿಸಿದ್ದರು.