ರಟ್ಟಿಹಳ್ಳಿ ಪಟ್ಟಣದಲ್ಲಿ ಕೊಲೆಯಾದ ಶಿವಾಜಿರಾವ್ ಭೈರೋಜಿ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿ, ಧನಸಹಾಯ ಮಾಡಿದರು.
ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲೆ ಪದೇಪದೆ ಹಲ್ಲೆಯಾಗುತ್ತಿವೆ. ನರೇಗಲ್ ಮತ್ತು ರಟ್ಟಿಹಳ್ಳಿ ಪ್ರಕರಣದಲ್ಲಿ ಅಮಾಯಕ ಯುವಕರು ಹಲ್ಲೆಗೊಳಗಾಗಿದ್ದಾರೆ. ಓರ್ವ ವ್ಯಕ್ತಿ ಕೊಲೆಯಾಗಿದ್ದಾನೆ. ಇದು ವ್ಯವಸ್ಥಿತವಾಗಿ ನಡೆದಿರುವ ಷಡ್ಯಂತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಪಟ್ಟಣದಲ್ಲಿ ಇತ್ತೀಚಿಗೆ ಮುಸ್ಲಿಂ ಯುವಕರಿಂದ ಕೊಲೆಯಾದ ಶಿವಾಜಿರಾವ್ ಭೈರೋಜಿ ನಿವಾಸಕ್ಕೆ ಸೋಮವಾರ ತೆರಳಿ ಕುಟುಂಬಸ್ಥರಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಧನಸಹಾಯ ಮಾಡಿ ಸಾಂತ್ವನ ಹೇಳಿ ಮಾತನಾಡಿದ ಅವರು, ರಾಜ್ಯದಲ್ಲಿ ನರಸತ್ತ ಕಾಂಗ್ರೆಸ್ ಸರ್ಕಾರವಾಗಿದೆ. ನಿಮಗೆ ತಾಕತ್ತಿದ್ದರೆ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಬಡ ಕುಟುಂಬಕ್ಕೆ ಆಧಾರವಾಗಿದ್ದ ಯುವಕನ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು ಮತ್ತು ಪುತ್ರಿಗೆ ಸರ್ಕಾರಿ ನೌಕರಿ ನೀಡಬೇಕು. ಈ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಹಾವೇರಿ ಜಿಲ್ಲೆಯಲ್ಲಿ ಈ ಘಟನೆಗಳು ಸಂಭವಿಸಿದರೂ ಯಾವ ಸಚಿವರು ಸಹ ಭೇಟಿ ನೀಡಿಲ್ಲ ಹರಿಯಾಯ್ದರು.
16ರಂದು ಪ್ರತಿಭಟನೆ: ಕಾಂಗ್ರೆಸ್ ಸರ್ಕಾರ ಮೂರು ವರ್ಷದ ಆಡಳಿತದಲ್ಲಿ ರಾಜ್ಯದಲ್ಲಿ ಹುಬ್ಬಳ್ಳಿಯ ನೇಹಾ ಹತ್ಯೆ, ಯಲ್ಲಾಪುರದಲ್ಲಿ ದಲಿತ ಮಹಿಳೆಯ ಬರ್ಬರ ಕೊಲೆ, ಕೊಪ್ಪದಳದಲ್ಲಿ ವಾಲ್ಮೀಕಿ ಸಮುದಾಯದ ವ್ಯಕ್ತಿಯ ಹತ್ಯೆಗಳು ನಡೆದಿವೆ. ಇದೀಗ ನರೇಗಲ್ ಮತ್ತು ರಟ್ಟಿಹಳ್ಳಿಯಲ್ಲೂ ಅಹಿತಕರ ಘಟನೆಗಳು ಜರುಗಿದ್ದು, ಇದು ಕಾಂಗ್ರೆಸ್ ಸರ್ಕಾರದ ಹೊಣೆಗೇಡಿತನವಾಗಿದೆ. ಈ ಘಟನೆಗಳನ್ನು ಖಂಡಿಸಿ ಹಾವೇರಿಯಲ್ಲಿ ಜು.16ರಂದು ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಜಿಲ್ಲೆಯ ನರೇಗಲ್ಲನಲ್ಲಿ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ, ಶಿಗಾಂವಿಯಲ್ಲಿ ಹಗಲಿನಲ್ಲಿ ಕೊಲೆ, ಹಾನಗಲ್ ತಾಲೂಕಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಆರೋಪಿಗಳು ಬೇಲ್ ಪಡೆದು ಯುದ್ದ ಗೆದ್ದ ರೀತಿಯಲ್ಲಿ ಮೆರವಣಿಗೆ, ಲವ್ ಜಿಹಾದ್ ಪ್ರಕರಣಗಳು ಜರುಗುತ್ತಿದೆ. ಆದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಕಾಂಗ್ರೆಸ್ ಸರ್ಕಾರದ ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಜಿಲ್ಲೆಯಲ್ಲಿ ಕಾನೂನು ಆಡಳಿತ ವ್ಯವಸ್ಥ ಕುಸಿದು ಹೋಗಿದೆ. ಕೋಮುಸೌಹಾರ್ಧತೆ ಕಡದುವ ಈ ದುಷ್ಟಶಿಕ್ತಿಗಳ ವಿರುದ್ದ ಹಾವೇರಿಯಲ್ಲಿ ಜು.16ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
"
ಕೋಮು ಸೌಹಾರ್ಧತೆ ಕದಡುವ ಶಕ್ತಿಯನ್ನು ಬಗ್ಗು ಬಡಿಯಬೇಕು. ಮುಖ್ಯಮಂತ್ರಿಗಳು ತುಷ್ಟೀಕರಣ ರಾಜಕಾರಣ ಮಾಡದೆ ತಪ್ಪು ಯಾರೇ ಮಾಡಿದರೂ ಕಠಿಣ ಶಿಕ್ಷೆಯಾಗಬೇಕು. ಅನ್ಯಕೋಮಿನವರು ಶಿವಾಜಿರಾವ್ ಮೇಲೆ ಅಮಾನವೀಯಾಗಿದೆ ಕೊಲೆ ಮಾಡಿದ್ದಾರೆ. ರಾಜಕೀಯ ಬೆಂಬಲದ ಕುಮ್ಮಕ್ಕು ಇರುವುದರಿಂದ ಅವರಿಗೆ ಧೈರ್ಯ ಬಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮು ಸೌಹಾರ್ದತೆಗೆ ಜಿಲ್ಲೆ ಹೆಸರಾಗಿತ್ತು.
— ಬಸವರಾಜ ಬೊಮ್ಮಾಯಿ ಸಂಸದ