- ತವಂದಿ ಕೊಲೆ ಪ್ರಕರಣ: ಇಬ್ಬರ ಬಂಧನ
- ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳು
- ನಿಪ್ಪಾಣಿ ಪೊಲೀಸರಿಂದ ಹಂತಕರ ಸೆರೆ
ತಲೆ ಮರೆಸಿಕೊಂಡಿದ್ದ ಇಬ್ಬರು ಕೊಲೆ ಆರೋಪಿಗಳ ಬಂಧನ
ಚಿಕ್ಕೋಡಿ : ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣಾ ಈಚೆಗೆ ನಡೆದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಗಡಹಿಂಗ್ಲಾಜ್ ತಾಲೂಕಿನ ಹೊಳೆ ಹಿಟ್ನಿ ಗ್ರಾಮದ ನಿವಾಸಿ ಮೊಹಮ್ಮದ್ ಶಮಶೇರ್ ಖಲೀಫ್(52) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗಡಹಿಂಗ್ಲಜ್ ತಾಲೂಕಿನ ಹೊಳೆ ಹಿಟ್ನಿ ಗ್ರಾಮದ ನಿವಾಸಿ ಯುವರಾಜ ಮುನ್ನೋಳಿ(22), ನಿಲಜಿ ಗ್ರಾಮದ ಸ್ವಪ್ನಿಲ್ ರಾಂಪೂರೆ(21) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ಯುವರಾಜ ಮುನ್ನೋಳಿ ಕೊಲೆಯಾದ ವ್ಯಕ್ತಿಯ ಪುತ್ರಿಯನ್ನು ಪ್ರೀತಿಸುತ್ತಿದ್ದನು.ಈ ವಿಷಯ ತಿಳಿದ ಮೊಹಮ್ಮದ್ ಖಲೀಪ್ ರಾಜಿ ಪಂಚಾಯತಿ ಮಾಡಿ ಯುವರಾಜನಿಗೆ ಬುದ್ದಿ ಹೇಳಿದರು.ಇದೇ ವಿಷಯದ ದ್ವೇಷದ ಹಿನ್ನೆಲೆ ಆರೋಪಿತರು ನಿಪ್ಪಾಣಿ ತಾಲೂಕಿನ ತವಂದಿ ಗುಡ್ಡಕ್ಕೆ ಮೊಹಮ್ಮದ್ ಖಲೀಪ್ ಅವರಿಗೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಈ ಕುರಿತು ತನಿಖೆ ಮುಂದುವರೆದಿದೆ ಎಂದು ಪ್ರಕರಣ ದಾಖಲಿಸಿಕೊಂಡ ನಿಪ್ಪಾಣಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.