ಮಳಗಲಿ ಗ್ರಾಮದ ವಾಲ್ಮೀಕಿ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮನೆಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಿದರು.
ಮುರಗೋಡ: ಸಮಾಜದಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟಲು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯ ಎಂದು ಮುರಗೋಡ ಠಾಣೆ ಪಿಐ ವೀರಯ್ಯ ಮಠಪತಿ ಹೇಳಿದರು. ಸಮೀಪದ ಮಳಗಲಿ ಗ್ರಾಮದ ವಾಲ್ಮೀಕಿ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮನೆಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಜೂಜಾಟ, ಮಟ್ಕಾ, ನಕಲಿ ಸಾರಾಯಿ ಮಾರಾಟ, ದೌರ್ಜನ್ಯ, ಅತ್ಯಾಚಾರ, ಮನೆ ಕಳ್ಳತನದಂಥ ಪ್ರಕರಣ ತಡೆಯುವಲ್ಲಿ ಪೊಲೀಸರಿಗೆ ಮಾಹಿತಿ ನೀಡಿದರೆ ಅಪರಾಧ ತಡೆಯಲು ಸಹಕಾರಿಯಾಗುತ್ತದೆ ಎಂದರು. ಪಿಎಸ್ಐ ಡಬ್ಲು.ಎಚ್.ಯಾದವಾಡ, ಸುರೇಶ ಹುಂಬಿ, ಈರಣ್ಣ ವಕ್ಕುಂದ, ಯಲ್ಲಪ್ಪ ಮೆಟಗುಪ್ಪಿ, ತಿಮ್ಮಣ್ಣ ಬಂಡಿವಡ್ಡರ, ರಾವೇಂದ್ರ ರುದ್ರಪ್ಪನವರ, ದಿಲಾವರ ಪೆಂಡಾರಿ ಇತರರಿದ್ದರು.