ಮಹಾಲಿಂಗಪುರ ಜಿಎಲ್‌ಬಿಸಿ ಹತ್ತಿರ ಬೆಳವಡಿ ವಡ್ಡರ ಯಲ್ಲಣ್ಣ ವತ್ತ ನಿರ್ಮಾಣಕ್ಕೆ ಪುರಸಭೆ ವತಿಯಿಂದ ಠರಾವು ಪಾಸ ಮಾಡಿ ಭೋವಿ ಸಮಾಜದ ಮುಖಂಡರಿಗೆ ಹಸ್ತಾಂತರಿಸಲಾಯಿತು. ಶಾಸಕ ಸಿದ್ದು ಸವದಿ, ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ, ಬಸನಗೌಡ ಪಾಟೀಲ ಇತರರಿದ್ದರು.
- ಸಿದ್ಧರಾಮೇಶ್ವರ ಭೋವಿ ಸಮಾಜ ಸೇವಾ ಸಂಘದ ಹೋರಾಟಕ್ಕೆ ಸಿಕ್ಕ ಜಯ
ಮಹಾಲಿಂಗಪುರ: ನಗರದ ಜಿ.ಎಲ್.ಬಿ.ಸಿ. ಕಂಪೌಂಡ್ ಸಮೀಪ ಲೋಕೋಪಯೋಗಿ ಇಲಾಖೆಯ ರಸ್ತೆಯ ಬಲಭಾಗದಲ್ಲಿ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ವೃತ್ತ ನಿರ್ಮಾಣಕ್ಕೆ ಮಹಾಲಿಂಗಪುರ ಪುರಸಭೆ ಅಧಿಕತವಾಗಿ ಠರಾವು ಅಂಗೀಕರಿಸಿದೆ. ಠರಾವಿನ ಪ್ರತಿಯನ್ನು ಇತ್ತೀಚೆಗೆ ಶಾಸಕ ಸಿದ್ದು ಸವದಿ ಹಾಗೂ ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಅವರು ಸಿದ್ಧರಾಮೇಶ್ವರ ಭೋವಿ (ವಡ್ಡರ) ಸಮಾಜ ಸೇವಾ ಸಂಘದ ಮುಖಂಡರಿಗೆ ಹಸ್ತಾಂತರಿಸಿದರು.
ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಅವರ ಹೆಸರಿನಲ್ಲಿ ವೃತ್ತ ನಿರ್ಮಿಸುವಂತೆ ಭೋವಿ (ವಡ್ಡರ) ಸಮಾಜ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿತ್ತು. ಮನವಿ ಸಲ್ಲಿಕೆ, ಸಭೆಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವ ಮೂಲಕ ಸಂಘದ ಪದಧಿಕಾರಿಗಳು ಮತ್ತು ಸಮಾಜದ ಮುಖಂಡರು ಒತ್ತಾಯ ಮುಂದುವರಿಸಿದ್ದರು. ಇದರ ಲವಾಗಿ ಪುರಸಭೆ ಸಭೆಯಲ್ಲಿ ವತ್ತ ನಿರ್ಮಾಣಕ್ಕೆ ಅಧಿಕತ ಅನುಮೋದನೆ ದೊರೆತಿದೆ.
ಈ ನಿರ್ಧಾರದಿಂದ ಭೋವಿ ಸಮಾಜದಲ್ಲಿ ಸಂತಸ ಮನೆಮಾಡಿದ್ದು, ವತ್ತ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸುವಂತೆ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ. ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಅವರ ಹೋರಾಟ, ತ್ಯಾಗ ಮತ್ತು ಸಾಮಾಜಿಕ ಕೊಡುಗೆ ಮುಂದಿನ ಪೀಳಿಗೆಗೆ ಪರಿಚಯವಾಗುವಂತೆ ವತ್ತ ನಿರ್ಮಾಣವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬಸನಗೌಡ ಪಾಟೀಲ, ಶೇಖರ ಅಂಗಡಿ, ಗುರುಪಾದ ಅಂಬಿ, ಪ್ರಶಾಂತ ಚುನಮುರಿ, ಹಣಮಂತ ಜಮಾದಾರ, ದುಂಡಪ್ಪ ನಾಗನೂರ, ಪ್ರಕಾಶ ಪಾತ್ರೋಟ, ಸಂತೋಷ ಪಾತ್ರೋಟ, ತಿಪ್ಪಣ್ಣ ಬಂಡಿವಡ್ಡರ ಸೇರಿ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.