ಯಾದಗಿರಿಯ ಲಕ್ಷ್ಮೀ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ನಗರಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಸಸಿ ನೆಟ್ಟರು. ಪೌರಾಯುಕ್ತ ಉಮೇಶ ಚವ್ಹಾಣ್​, ಶಿವಪುತ್ರ ಇತರರಿದ್ದರು.ಯಾದಗಿರಿಯ ಲಕ್ಷ್ಮೀ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ನಗರಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಸಸಿ ನೆಟ್ಟರು. ಪೌರಾಯುಕ್ತ ಉಮೇಶ ಚವ್ಹಾಣ್​, ಶಿವಪುತ್ರ ಇತರರಿದ್ದರು. 
ರಾಜ್ಯ

ಗಿರಿ ಜಿಲ್ಲೆ ಹಸಿರುಕರಣಕ್ಕೆ ನಗರಸಭೆ ಸಂಕಲ್ಪ

ಪ್ರಮುಖ ಮುಖ್ಯಾಂಶಗಳು

  • ನಗರದ ಹತ್ತು ಉದ್ಯಾನವನಗಳಲ್ಲಿ ನೂರಾರು ಸಸಿ ನೆಡುವ ಕಾರ್ಯಕ್ಕೆ ಚಾಲನೆ
ಯಾದಗಿರಿ: ನಗರವನ್ನು ಹಸಿರುಕರಣ ಮಾಡಲು ಮುಂದಾಗಿರುವ ನಗರಸಭೆ ಈ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮವೊಂದು ಹಂತ, ಹಂತವಾಗಿ ಜಾರಿ ಮಾಡಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಲಕ್ಷ್ಮೀ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ನನ್ನ ಕುಟುಂಬ, ನಮ್ಮಗಿಡ ಎಂಬ ಹೆಸರಲ್ಲಿ ಉದ್ಯಾನವನಗಳ ಸುತ್ತ ಮುತ್ತಲಿನ ಜನರಿಂದ ಸಸಿ ನೆಡೆಸಿ, ಅವುಗಳ ಪೊಷಣೆ ಮಾಡುವ ಮೂಲಕ ನಗರವನ್ನು ಹಸಿರೀಕರಣಕ್ಕೆ ನಗರಸಭೆ ಹೆಜ್ಜೆ ಇರಿಸಿದೆ.
ಮಂಗಳವಾರ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಅವರು ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಈ ಮಹತ್ವದ ಕೆಲಸಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಪರಿಸರ ಉಳಿದರೇ ನಾವೇಲ್ಲ ಆರೋಗ್ಯದಿಂದಿರಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ತಮ್ಮ, ತಮ್ಮ ನಗರ ಮತ್ತು ಬಡಾವಣೆಗಳಲ್ಲಿನ ಉದ್ಯಾನವನಗಳಲ್ಲಿ ಸಸಿ ನೆಟ್ಟು ಅವುಗಳನ್ನು ಪೊಷಿಸಬೇಕು. ಅಲ್ಲದೆ ಅವುಗಳನ್ನು ನಿಮ್ಮ ಕುಟುಂಬದ ಸದಸ್ಯರಂತೆ ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್​ ಮಾತನಾಡಿ, ನಗರದ ಹತ್ತು ಉದ್ಯಾನಗಳಲ್ಲಿ ಈ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಪ್ರತಿ ಉದ್ಯಾನವನದಲ್ಲೂ ಕನಿಷ್ಟ ಐವತ್ತು ಸಸಿಗಳನ್ನು ಆಯಾ ಏರಿಯಾಗಳ ನಿವಾಸಿಗಳಿಂದಲ್ಲೆ ನೆಟ್ಟು, ಪ್ರತಿಯೊಂದು ಸಸಿಗೂ ನೆಟ್ಟವರ ಮನೆ ಹೆಸರು ಕೊಟ್ಟು, ಅದರ ಹೊಣೆಗಾರಿಕೆ ಅವರಿಗೆ ವಹಿಸಲಾಗುವುದು ಎಂದರು. ನಗರಸಭೆ ಸಿಬ್ಬಂದಿ ಶಿವಪುತ್ರ, ಲಕ್ಷ್ಮೀ ನಗರದದ ಸಾರ್ವಜನಿಕರು ಭಾಗವಹಿಸಿದ್ದರು.
"

ಉದ್ಯಾನವನಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರುಕರಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ವಿನೂತನ ಕೆಲಸಕ್ಕೆ ಸಾರ್ವಜನಿಕರನ್ನೇ ಮುಂದೆ ಮಾಡಿ ಅವರ ಮೂಲಕವೇ ಸಾವಿರಾರು ಸಸಿಗಳನ್ನು ನೆಟ್ಟು ಬರುವ ದಿನಗಳಲ್ಲಿ ಗಿಡ-ಮರಗಳಾವುದನ್ನು ನಾವೆಲ್ಲವೂ ನೋಡಬಹುದು.

— > ಉಮೇಶ ಚವ್ಹಾಣ್​ ಪೌರಾಯುಕ್ತ, ನಗರಸಭೆ ಯಾದಗಿರಿ