Municipal Corporation earns Rs. 12.67 lakh in auction
ಶಿಡ್ಲಗಟ್ಟ: ಶಿಡ್ಲಗಟ್ಟದ ನಗರಸಭೆಗೆ ಸೇರಿದ ಸಂತೆ ಮಾರುಕಟ್ಟೆ, ದಿನವಹಿ ಮಾರುಕಟ್ಟೆ, ಖಾಸಗಿ ಬಸ್ಗಳ ನಿಲ್ದಾಣದ ಶುಲ್ಕ, ಒಳಚರಂಡಿ ಶುದ್ಧೀಕರಣ ಟಕದ ಶುಲ್ಕ, ಇವುಗಳ 2026&27ನೇ ಸಾಲಿನ ವಾರ್ಷಿಕ ವಸೂಲಾತಿ ಹಕ್ಕನ್ನು ಗುರುವಾರ ನಗರಸಭೆ ಸಮುದಾಯ ಭವನದಲ್ಲಿ ಬಹಿರಂಗ ಹರಾಜು ನಡೆಸಲಾಯಿತು.
ಸಂತೆ ಮಾರುಕಟ್ಟೆಯನ್ನು ನಗರದ ನವೀನ್ಕುಮಾರ್ ಹರಾಜನಲ್ಲಿ 3.91 ಲಕ್ಷ ರೂ.ಗೆ ಹರಾಜು ಕೂಗಿದರು. ದಿನವಹಿ ಮಾರುಕಟ್ಟೆಯನ್ನು ಅಂಬರೀಶ್ 4.70 ಲಕ್ಷ ಸಾವಿರ ರೂ.ಗೆ ಮತ್ತು ಖಾಸಗಿ ಬಸ್ ನಿಲ್ದಾಣದ ಶುಲ್ಕ ವಸೂಲಿಯನ್ನು ನರಸಿಂಹ 4.06 ಲಕ್ಷ ರೂ.ಗೆ ಹರಾಜು ಕೂಗಿದರು.
ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಮಾತನಾಡಿ, ಕಳೆದ ವರ್ಷ ಸಂತೆ ಮಾರುಕಟ್ಟೆ, ದಿನವಹಿ ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣದ ಶುಲ್ಕ ಹರಾಜಿನಿಂದ 8.70 ಲಕ್ಷ ರೂ. ಆದಾಯ ಬಂದಿತ್ತು. ಈ ಬಾರಿ 12.67 ಲಕ್ಷ ರೂ. ಆದಾಯ ಬರುತ್ತಿದೆ. ಹಾಗಾಗಿ ಸುಮಾರು 4 ಲಕ್ಷ ರೂಗಳಷ್ಟು ಆದಾಯ ನಗರಸಭೆಗೆ ಹೆಚ್ಚಾಗಿದೆ. ಒಳಚರಂಡಿ ಶುದ್ಧೀಕರಣ ಟಕದ ಶುಲ್ಕದ ಮರು ಹರಾಜನ್ನು ಮತ್ತೊಮ್ಮೆ ಆನ್ಲೈನ್ ಮೂಲಕ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.
ನಗರಸಭೆ ಸಿಬ್ಬಂದಿ ನಾಗರಾಜ್, ಅತೀಕ್, ಮುನಿಕೃಷ್ಣ ಮತ್ತಿತರರು ಇದ್ದರು.