ಮುನವಳ್ಳಿ ತಾಲೂಕು ೂಷಣೆಗೆ ಆಗ್ರಹಿಸಿ ಕಂದಾಯ ಅಧಿಕಾರಿ ಸಂತೋಷ ಅವಜಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುರುಂದ್ರ ಶ್ರೀ, ಉಮೇಶ ಬಾಳಿ, ಅಂಬರೀಷ ಯಲಿಗಾರ, ಪಂಚನಗೌಡ ದ್ಯಾಮನಗೌಡರ, ನಿಂಗನಗೌಡ ಮಲಗೌಡ್ರ, ಪಂಚಪ್ಪ ಹನಸಿ, ಎಂ.ಕೆ.ಹಿರೇಮಠ, ಸಿ.ಬಿ.ಬಾಳಿ, ಚಂದ್ರು ಜಂಬ್ರಿ, ಕಲ್ಲಪ್ಪ ನಲವಡೆ, ಸುಭಾಸ ಗೀದಿಗೌಡ್ರ, ಇತರರಿದ್ದರು.ಚ
ಮುನವಳ್ಳಿ: ಪಟ್ಟಣವನ್ನು ತಾಲೂಕು ಕೇಂದ್ರವಾಗಿ ೂಷಿಸಬೇಕು ಎಂದು ಆಗ್ರಹಿಸಿ ಸೋಮಶೇಖರಮಠದ ಮುರುಂದ್ರ ಶ್ರೀ ನೇತೃತ್ವದಲ್ಲಿ ಬುಧವಾರ ಶ್ರೀ ಪಂಚಲಿಂಗೇಶ್ವರ ಕ್ರಾಸ್ ಬಳಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ಮಾಡಲಾಯಿತು.
ಮುಖಂಡರಾದ ಉಮೇಶ ಬಾಳಿ, ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಸದ್ಯ ಬೆಳಗಾವಿ ಜಿಲ್ಲೆ ವಿಭಜನೆ ಸನಿಹದಲ್ಲಿದೆ. ಪಟ್ಟಣ ಈಗಾಗಲೇ ಪುರಸಭೆ ದರ್ಜೆ ಹೊಂದಿದ್ದು, ತಾಲೂಕಾಗುವ ಅರ್ಹತೆ ಹೊಂದಿದೆ. ಸುತ್ತಲಿನ 38 ಹಳ್ಳಿಗಳು ಈ ಬೇಡಿಕೆಗೆ ಒಮ್ಮತ ಸೂಚಿಸಿವೆ. ಹಾಗಾಗಿ, ಅಧಿವೇಶನದಲ್ಲಿ ಮುನವಳ್ಳಿ ತಾಲೂಕು ೂಷಣೆ ಮಾಡಬೇಕು. ಇಲ್ಲವಾದಲ್ಲಿ ತೀವ್ರ್ರ ಹೋರಾಟ ನಡೆಸಲಾಗುವುದು ಎಂದರು. ಅಂಬರೀಷ ಯಲಿಗಾರ, ನಿಂಗನಗೌಡ ಮಲಗೌಡ್ರ, ಪಂಚಪ್ಪ ಹನಸಿ, ಎಂ.ಕೆ.ಹಿರೇಮಠ, ಪುರಸಭೆ ಅಧ್ಯ ಸಿ.ಬಿ.ಬಾಳಿ, ಸವದತ್ತಿ ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಕಲ್ಲಪ್ಪ ನಲವಡೆ, ಪುರಸಭೆ ಸದಸ್ಯ ಸುಭಾಸ ಗೀದಿಗೌಡ್ರ, ಮೀರಾಸಾಬ್ ವಟ್ನಾಳ, ಗುರು ಚಂದರಗಿ, ಪರಶುರಾಮ ಗಂಟಿ, ಬಸು ಶಿಗ್ಗಾಂವಿ, ಮಲ್ಲೇಶ ಸುಳೇಭಾವಿ, ಶ್ರೀಕಾಂತ ನೇಗಿನಾಳ, ಡಾ.ಬಿ.ಎಚ್.ಭೈರಕದಾರ, ಶಿವಾನಂದ ಮೇಟಿ, ಮಹಾಂತೇಶ ಕುರಬಗಟ್ಟಿ, ನಾಗಪ್ಪ ಕಾಮಣ್ಣವರ, ಐ.ಜಿ.ಚಂದರಗಿ ಇತರರಿದ್ದರು.