900ರ ಮೈಲುಗಲ್ಲು ತಲುಪಿದ ಮುಖ್ಯಮಂತ್ರಿ ನಾಟಕ 
ರಾಜ್ಯ

900ರ ಮೈಲುಗಲ್ಲು ತಲುಪಿದ ಮುಖ್ಯಮಂತ್ರಿ ನಾಟಕ; ರವೀಂದ್ರ ಕಲಾಕ್ಷೇತ್ರದಲ್ಲಿ ಸೆ.26ಕ್ಕೆ ಪ್ರದರ್ಶನ

ಪ್ರಮುಖ ಮುಖ್ಯಾಂಶಗಳು

  • 900ರ ಮೈಲುಗಲ್ಲು ತಲುಪಿದ ಮುಖ್ಯಮಂತ್ರಿ ನಾಟಕ
  • ರವೀಂದ್ರ ಕಲಾಕ್ಷೇತ್ರದಲ್ಲಿ ಸೆ.26ಕ್ಕೆ ಸಂಜೆ 4.30ರಿಂದ ಪ್ರದರ್ಶನ
  • ಮುಖ್ಯಮಂತ್ರಿ ಚಂದ್ರು ಅವರ ಕುರಿತು ವಿವಿಧ ಕಾರ್ಯಕ್ರಮ ಆಯೋಜನೆ

ಬೆಂಗಳೂರು: ಕನ್ನಡರಂಗಭೂಮಿಯಲ್ಲಿ ನಾಲ್ಕೂವರೆದಶಕಗಳಿಗೂ ಹೆಚ್ಚು ಕಾಲ ಪ್ರೇಕ್ಷಕರನ್ನುರಂಜಿಸುತ್ತ ಬಂದಿರುವ ಮುಖ್ಯಮಂತ್ರಿನಾಟಕ ಇದೀಗ 900ನೇಪ್ರದರ್ಶನದ ಸಂಭ್ರಮದಲ್ಲಿದೆ.ಸೆ.26ರಂದುಸಂಜೆ 4.30ರಿಂದ6.30ರವರೆಗೆರವೀಂದ್ರ ಕಲಾಕ್ಷೇತ್ರದಲ್ಲಿನಡೆಯಲಿರುವ 900ನೇವಿಶೇಷ ಪ್ರದರ್ಶನವು ಈ ಐತಿಹಾಸಿಕರಂಗಪಯಣದ ಮಹತ್ವದ ಮೈಲುಗಲ್ಲಾಗಲಿದೆ.

ರಂಜಿತ್ಕಪೂರ್ ಮೂಲ ನಾಟಕದವನ್ನುಬಿ.ಎಸ್.ಲೋಹಿತಾಶ್ವಕನ್ನಡಕ್ಕೆ ರೂಪಾಂತರಿಸಿ,ಡಾ.ಬಿ.ವಿ.ರಾಜಾರಾಂ ನಿರ್ದೇಶನಮಾಡಿರುವ ಮುಖ್ಯಮಂತ್ರಿ ನಾಟಕದ900ನೇವಿಶೇಷ ಪ್ರದರ್ಶನ ಕಲಾಗಂಗೋತ್ರಿನಿರ್ಮಾಣದಲ್ಲಿ ಸೆ.26ರಂದುಶನಿವಾರ ಸಂಜೆ 4.30ರಿಂದ6.30ರವರೆಗೆನಡೆಯಲಿದೆ.

ಮುಖ್ಯಮಂತ್ರಿನಾಟಕದ 900ನೇವಿಶೇಷ ಪ್ರದರ್ಶನದ ಹಿನ್ನೆಲೆಯಲ್ಲಿಡಾ. ಮುಖ್ಯಮಂತ್ರಿಚಂದ್ರು ಅವರ ದೀರ್ಘಕಾಲದ ರಂಗಸಾಧನೆಕುರಿತು ಚಿಂತನ,ಮಾತುಕತೆ,ಚಿತ್ರ ದರ್ಶನ,ಚಂದ್ರಯಾನ,ಅಭಿನಂದನೆ ಹೀಗೆವಿವಿಧ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಸೇರಿದಂತೆ ಹಲವು ಮಾಜಿ ಮುಖ್ಯಮಂತ್ರಿಗಳು,ಕಲಾವಿದರು,ಗಣ್ಯರುಭಾಗವಹಿಸಲಿದ್ದಾರೆ.

ಕರ್ನಾಟಕದಶಾಶ್ವತ ಮುಖ್ಯಮಂತ್ರಿ !

ಮುಖ್ಯಮಂತ್ರಿನಾಟಕದ ಮೂಲಕವೇ ಜನಪ್ರಿಯರಾದ ಡಾ.ಮುಖ್ಯಮಂತ್ರಿಚಂದ್ರು ಈ ನಾಟಕದೊಂದಿಗೆ ಅವಿನಾಭಾವಸಂಬಂಧ ಹೊಂದಿದ್ದು,ಅವರ ರಂಗಪಯಣವುದೇಶ ವಿದೇಶಗಳಲ್ಲೂ ವಿಸ್ತರಿಸಿಕೊಂಡಿದೆ. ಪ್ರೇಕ್ಷಕರಮೆಚ್ಚುಗೆಗೆ ಪಾತ್ರವಾದ ಅವರನಟನೆ ಕನ್ನಡ ರಂಗಭೂಮಿಯ ಇತಿಹಾಸದಲ್ಲಿಒಂದು ಅಳಿಸಲಾಗದ ದಾಖಲೆಯಾಗಿದೆ.

ಹೊನ್ನೇನಸಂದ್ರನರಸಿಂಹಯ್ಯ ಚಂದ್ರಶೇಖರ ಎಂಬ ಮೂಲಹೆಸರಿನ ಡಾ.ಮುಖ್ಯಮಂತ್ರಿಚಂದ್ರು ಅವರು ವಿಜ್ಞಾನದಲ್ಲಿಪದವೀಧರರಾಗಿದ್ದಾರೆ.ಆದರೆ ಮುಖ್ಯಮಂತ್ರಿನಾಟಕದ ಮೂಲಕ ಕನ್ನಡ ನಾಡಿನ ಮನೆಮಾತಾದಕಾರಣ ಮುಖ್ಯಮಂತ್ರಿ ಚಂದ್ರುಎಂದೇ ಪ್ರಸಿದ್ಧರು.ವಿಧಾನಸಭೆ ವಿಧಾನಪರಿಷತ್ ಸದಸ್ಯರಾಗಿ ರಾಜಕೀಯದಲ್ಲೂತಮ್ಮ ಛಾಪು ಮೂಡಿಸಿ ನಾಡಿನ ಶಾಶ್ವತಮುಖ್ಯಮಂತ್ರಿ ಎಂಬ ಹೆಗ್ಗಳಿಕೆಹೊಂದಿದ್ದಾರೆ.

ರಂಗಭೂಮಿಯಜತೆಗೆ ಚಲನಚಿತ್ರ ಮತ್ತುಕಿರುತೆರೆಯಲ್ಲಿಯೂ ತಮ್ಮದೇ ಛಾಪುಮೂಡಿಸಿರುವ ಮುಖ್ಯಮಂತ್ರಿ ಚಂದ್ರುಅವರು ಹಾಸ್ಯಾಭಿನಯದಲ್ಲಿವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ.ಮೂಕಾಭಿನಯದಲ್ಲಿಯೂಸಿದ್ಧಹಸ್ತರಾಗಿದ್ದು,600ಕ್ಕೂ ಹೆಚ್ಚುಹಾಸ್ಯ ಪ್ರದರ್ಶನಗಳನ್ನುನೀಡಿದ್ದಾರೆ.ರಂಗಭೂಮಿ ಮತ್ತುಕಲಾ ಕ್ಷೇತ್ರದಲ್ಲಿನ ಅವರ ಸೇವೆಯನ್ನುಗುರುತಿಸಿ ಅನೇಕ ಗೌರವಸನ್ಮಾನಗಳುಸಂದಿವೆ.