ಬಸವಕಲ್ಯಾಣ ತಾಲೂಕಿನ ಮುಡಬಿಯಲ್ಲಿ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಬಸ್ ನಿಲ್ದಾಣ.
- ಕುಡಿವ ನೀರು, ಶೌಚಗೃಹ ವ್ಯವಸ್ಥೆಯೂ ಇಲ್ಲ
- ಪ್ರಯಾಣಿಕರಿಗೆ ತೀವ್ರ ತೊಂದರೆ
ಬಸವಕಲ್ಯಾಣ: ಮುಡಬಿ ಬಸ್ ನಿಲ್ದಾಣ ಮೂಲ ಸೌಲಭ್ಯಗಳಿಂದ ವಂಚಿತ ಗೊಂಡಿದ್ದು, ಸಂಬಂಧಿತರ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಗೃಹವೂ ಇಲ್ಲವೇಇಲ್ಲ. ಇನ್ನು ಸ್ವಚ್ಛತೆಯೂ ಹೇಳತಿರದು. ಹೀಗಾಗಿ ಇಲ್ಲಗಳ ನಡುವೆ ಇರುವ ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಗುತ್ತಿದೆ.
ನಿಲ್ದಾಣದಲ್ಲಿ ಬಸ್ಗಾಗಿ ಕಾದು ನಿಲ್ಲುವ ಜನರು ನೀರು ಬೇಕಾದರೇ ಅಕ್ಕ ಪಕ್ಕದ ಅಂಗಡಿ-&ಹೋಟೆಲ್ನಲ್ಲಿ ವಾಟರ್ ಬಾಟಲ್ ಖರೀದಿಸಬೇಕು. ಇನ್ನೂ ಶೌಚಗೃಹ ಇಲ್ಲದೆ ಇರುವುದು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಅಶುದ್ಧ ನೀರು ಕುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದ ಮುಂಭಾಗ ಇಕ್ಕಟ್ಟಾದ ಸ್ಥಳವಿದ್ದು, ಬಂಡಿ, ವಾಹನಗಳು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮುಡಬಿ ಹೋಬಳಿ ಕೇಂದ್ರವಾಗಿದ್ದು, ಸುತ್ತಲಿನ ಹತ್ತಾರು ಹಳ್ಳಿಯಿಂದ ಶಾಲಾ-&ಕಾಲೇಜಿಗೆ ಬರುವ ವಿದ್ಯಾರ್ಥಿಗಳು, ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಬಸ್ನಿಲ್ದಾಣದ ಬಳಿಯೇ ಇಳಿಯಬೇಕು. ಇಲ್ಲಿಗೆ ಹೋಗಿ ಬರಬೇಕಾದರೂ ಬಸ್ಗಾಗಿ ಇಲ್ಲೊಂದಿಷ್ಟು ಸಮಯ ಕಾಯಬೇಕಾಗುತ್ತದೆ. ಆದರೆ ಜನರಿಗಾಗಿ ಅಗತ್ಯವಿರುವ ಸೌಲಭ್ಯಗಳು ಇಲ್ಲದೇ ತೊಂದರೆ ಅನುಭವಿಸಬೇಕಗುತ್ತದೆ.
ಮುಡಬಿ ಸೇರಿ ಸುತ್ತಲಿನ ಗ್ರಾಮ, ವಾಡಿ, ತಾಂಡಾಗಳಿಂದ ದಿನವೂ ಬರುವ ಸಾರ್ವಜನಿಕರು, ವೃದ್ದರು, ವಿದ್ಯಾರ್ಥಿಗಳು ಬಸ್ ಮತ್ತು ಬಸ್ ನಿಲ್ದಾಣವನ್ನು ಅವಲಂಭಿಸಿದ್ದು, ಇಲ್ಲಿ ಸಮಸ್ಯೆ ಅನೇಕ ವರ್ಷಗಳಿಂದ ಮುಂದುವರೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಮಸ್ಯೆ ಗಂಬೀರವಾಗಿ ಪರಿಗಣಿಸಬೇಕು. ಅಗತ್ಯವಿರುವ ಸೌಲಭ್ಯ ಕಲ್ಪಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪ್ರತ್ಯೇಕ ಎರಡು ಶೌಚಗೃಹ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಸುರಕ್ಷೆತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಶೆಯಾಗಿದೆ.