ಅರಿಕೆರೆ ಗ್ರಾಮದಲ್ಲೇ ಎಂಎಸ್ಪಿಸಿ ಕೇಂದ್ರ ಮರುಪ್ರಾರಂಭಿಸಿ MSPC center
ಶ್ರೀನಿವಾಸಪುರ: ಸುಮಾರು 18 ವರ್ಷಗಳಿಂದ ಅರಿಕೆರೆ ಗ್ರಾಮದಲ್ಲಿದ್ದ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರವನ್ನು ಒತ್ತಡಕ್ಕೆ ಮಣಿದು ಪಟ್ಟಣಕ್ಕೆ ಸ್ಥಳಾಂತರಗೊಳಿಸಿರುವುದನ್ನು ವಿರೋಧಿಸಿ ಶ್ರೀ ನಾಗನಾಥೇಶ್ವರಸ್ವಾಮಿ ದೇವಾಲಯದ ಟ್ರಸ್ಟ್ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಅರಿಕೆರೆ ಗ್ರಾಮದಲ್ಲೇ ಕೇಂದ್ರವನ್ನು ಮರು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದೆ. MSPC center
ತಾಲೂಕಿನ ಯಲ್ದೂರು ಹೋಬಳಿಯ ಅರಿಕೆರೆ ಗ್ರಾಮದಲ್ಲಿ ಶ್ರೀ ನಾಗನಾಥೇಶ್ವರಸ್ವಾಮಿ ದೇವಾಲಯ ಟ್ರಸ್ಟ್ ಜಾಗದಲ್ಲಿ ಸುಮಾರು 18 ವರ್ಷಗಳಿಂದ ಸಿಡಿಪಿಒ ಕಚೇರಿಯಿಂದ ಎಂಎಸ್ಪಿಸಿ ಟಕವನ್ನು ನಡೆಸಲಾಗುತ್ತಿದೆ. ಈ ಕೇಂದ್ರದಲ್ಲಿ ಸ್ಥಳಿಯ ಮಹಿಳಾ ಗುಂಪು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಉತ್ತಮ ವಾತಾವರಣ ಇದ್ದರೂ ಯಾರದೋ ಒತ್ತಡಕ್ಕೆ ಮಣಿದು ನಮ್ಮ ಗಮನಕ್ಕೂ ತಾರದೆ ಶ್ರೀನಿವಾಸಪುರದ ಚಿಂತಾಮಣಿ ರಸ್ತೆಯ ಜೂಸ್ ಫ್ಯಾಕ್ಟರಿ ಮುಂಭಾಗಲ್ಲಿನ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಮೀಪದ ಸ್ಥಳದಲ್ಲಿ ಎಂಎಸ್ಪಿಸಿ ಟಕ ಪ್ರಾರಂಭಿಸಿರುವುದು ಸರಿಯಲ್ಲ ಎಂದು ಟ್ರಸ್ಟ್ ಅಧ್ಯಕ್ಷ ರಮೇಶ್ ಬಾಬು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ವರ್ಷಗಳಿಂದ ನಮ್ಮ ದೇವಾಲಯಕ್ಕೆ ಸೇರಿದ ಆವರಣದಲ್ಲಿ ಎಂಎಸ್ಪಿಸಿ ಕೇಂದ್ರ ಪ್ರಾರಂಭಿಸಿ ಈವರೆಗೆ ನಡೆಸಿಕೊಂಡು ಬರಲಾಗಿದೆ. ಕಾರ್ಮಿಕರಿಗೆ ಅಗತ್ಯ ಸೌಲಭ್ಯ ನೀಡಿದ್ದೇವೆ. ಮಾಸಿಕವಾಗಿ ಬರುತ್ತಿದ್ದ ಬಾಡಿಗೆ ಹಣ ದೇವಾಲಯದ ಅಭಿವೃದ್ಧಿಗೆ ವಿನಿಯೋಗವಾಗುತ್ತಿತ್ತು ಎಂದರು.
ಒಬ್ಬರ ಸ್ವಾರ್ಥಕ್ಕೆ ಎಂಎಸ್ಪಿಸಿ ಕೇಂದ್ರವನ್ನು ಪಟ್ಟಣಕ್ಕೆ, ಅದರಲ್ಲೂ ಮಾವಿನಕಾಯಿ ಮಂಡಿಗಳ ಪ್ರಾಂಗಣದಲ್ಲಿ ತೆರೆಯಲಾಗಿದೆ. ಬೇಸಿಗೆ ಇರುವುದರಿಂದ ಶೀಟುಗಳ ಶೆಡ್ಡಿನಲ್ಲಿ ಪೂರಕ ಆಹಾರ ಪದಾರ್ಥ ಸಿದ್ಧಪಡಿಸುವುದು ಅವೈಜ್ಞಾನಿಕ ಎಂದರು.