1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ  
ರಾಜ್ಯ

1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ: ಮಾರ್ಗಸೂಚಿ ಪ್ರಕಟಿಸಿದ ಶಿಕ್ಷಣ ಇಲಾಖೆ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಕಲಿಕೆಯನ್ನು ಸಮರ್ಪಕವಾಗಿಸುವ ಕಲಿಕಾ ಚೇತರಿಕೆ, ಕಲಿಕಾ ಬಲವರ್ಧನೆ, ಕಲಿಕಾ ಲಾಧಾರಿತ ಪ್ರಶ್ನೆಕೋಠಿ, ಸೇತುಬಂಧಗಳ ಉಪಕ್ರಮದಡಿ ಮೌಲ್ಯಾಂಕನ ಪರೀಕ್ಷೆಗಳನ್ನು ನಡೆಸುವಂತೆ ಶಾಲಾ ಶಿಕ್ಷಣ ಆಯುಕ್ತರು ಸುತ್ತೋಲೆ
  • ಇಲಾಖೆಯು 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಮಾಡಬೇಕಾದ ಪಾಠಗಳು ಹಾಗೂ ಕೈಗೊಳ್ಳಬೇಕಾದ ಚಟುವಟಿಕೆಗಳ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ.
  • ಅದರ ಪ್ರಕಾರ ಶಿಕ್ಷಕರು, ಪಾಠವಾರು ಮೌಲ್ಯಾಂಕನ ನಡೆಸಬೇಕು. ಎಷ್ಟು ಅಂಕಗಳಿಗೆ ನಡೆಸಬೇಕು ಎಂಬುದನ್ನು ಸಹ ನೀಡಲಾಗಿದೆ
ಬೆಂಗಳೂರು:

ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ 2026-26ನೇ ಸಾಲಿನಲ್ಲಿ ಅಭ್ಯಾಸ ಮಾಡುತ್ತಿರುವ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ವಿದ್ಯಾರ್ಥಿಗಳ ಕಲಿಕೆಯನ್ನು ಸಮರ್ಪಕವಾಗಿಸುವ ಕಲಿಕಾ ಚೇತರಿಕೆ, ಕಲಿಕಾ ಬಲವರ್ಧನೆ, ಕಲಿಕಾ ಲಾಧಾರಿತ ಪ್ರಶ್ನೆಕೋಠಿ, ಸೇತುಬಂಧಗಳ ಉಪಕ್ರಮದಡಿ ಮೌಲ್ಯಾಂಕನ ಪರೀಕ್ಷೆಗಳನ್ನು ನಡೆಸುವಂತೆ ಶಾಲಾ ಶಿಕ್ಷಣ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಪ್ರತಿ ತಿಂಗಳ ವೇಳಾಪಟ್ಟಿ:

ಇಲಾಖೆಯು 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಮಾಡಬೇಕಾದ ಪಾಠಗಳು ಹಾಗೂ ಕೈಗೊಳ್ಳಬೇಕಾದ ಚಟುವಟಿಕೆಗಳ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ. ಅದರ ಪ್ರಕಾರ ಶಿಕ್ಷಕರು, ಪಾಠವಾರು ಮೌಲ್ಯಾಂಕನ ನಡೆಸಬೇಕು. ಎಷ್ಟು ಅಂಕಗಳಿಗೆ ನಡೆಸಬೇಕು ಎಂಬುದನ್ನು ಸಹ ನೀಡಲಾಗಿದೆ.
ಪಾಠ ಆಧಾರಿತ ಮೌಲ್ಯಾಂಕನ (ಎಲ್‌ಬಿಎ) ಪ್ರಶ್ನೆಕೋಠಿ ಆಧರಿಸಿ ರೂಪಣಾತ್ಮಕ (ಎ್ಎ) ಹಾಗೂ ಸಂಕಲನಾತ್ಮಕ (ಎಸ್‌ಎ) ಮೌಲ್ಯಾಂಕನ ಕೈಗೊಂಡು ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ತಿಳಿಯಬೇಕು.
ಎಲ್‌ಬಿಎ ವಿಶ್ಲೇಷಣಾ ವರದಿಯನ್ನು ಆಧರಿಸಿ ಪ್ರತಿ ಮೌಲ್ಯಾಂಕನ ನಂತರ ವಿದ್ಯಾರ್ಥಿಗಳ ಕಲಿಕಾ ಸಾಧನೆಗೆ ಕ್ರಮ ವಹಿಸಬೇಕು. ಈ ವರ್ಷದಿಂದ ಆರಂಭಿಸಿರುವ ಸಮಗ್ರ ಪ್ರಗತಿ ಪತ್ರ (ಹೋಲಿಸ್ಟಿಕ್ ಪ್ರೋಗ್ರೆಸ್ ಕಾರ್ಡ್) ಸಿದ್ಧಪಡಿಸಿ ಶಾಲಾ ಶೈಕ್ಷಣಿಕ ದಿನಚರಿಯಲ್ಲಿ ಅಳವಡಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.

ಮೌಲ್ಯಾಂಕನ ಕ್ರಮ ಹೇಗೆ?

- 1ರಿಂದ 5ನೇ ತರಗತಿಗಳಿಗೆ 10 ಅಂಕಗಳಿಗೆ ಲಿಖಿತ ಹಾಗೂ 5 ಅಂಕಗಳಿಗೆ ಮೌಖಿಕ ಒಟ್ಟು 15 ಅಂಕಗಳಿಗೆ ಎಲ್ಲ ರೀತಿಯ ವಸ್ತು ನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಂತೆ ಕಲಿಕಾ ಲಾಧಾರಿತ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿ ಮೌಲ್ಯಾಂಕನ ನಡೆಸಬೇಕು.
- 6ರಿಂದ 8ನೇ ತರಗತಿಗಳಿಗೆ 20 ಅಂಕಗಳಿಗೆ ವಸ್ತುನಿಷ್ಠ ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಪರೀಕ್ಷೆಯನ್ನು ನಡೆಸಬೇಕು.
- 8ರಿಂದ 10ನೇ ತರಗತಿಗಳಿಗೆ 20 ಅಂಕಗಳಿಗೆ ಎಲ್‌ಬಿಎ ಪ್ರಶ್ನೆಕೋಠಿಯ ಬಹು ಆಯ್ಕೆಯ ಪ್ರಶ್ನೆಗಳು ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿ ಮೌಲ್ಯಾಂಕನ ನಡೆಸಿ ಸ್ಯಾಟ್ಸ್‌ನಲ್ಲಿ ಅಪ್‌ಲೋಡ್ ಮಾಡಬೇಕು.