ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
- ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ
- ಟಿಪ್ಪರ್ ರಭಸಕ್ಕೆ ಬೈಕ್ ನಜ್ಜುಗುಜ್ಜು, ಪವಾಡದಂತೆ ಬದುಕುಳಿದ ಸವಾರ
ಬೆಂಗಳೂರು: ಬೈಕ್‌ಗೆ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕೊದಲೆಳೆ ಅಂತರದಲ್ಲಿ ಬದುಕುಳಿದ ಘಟನೆ ಬೆಂಗಳೂರಿನ ಜಕ್ಕೂರು ಬಳಿ ಸಂಭವಿಸಿದೆ.
ನಗರದ ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಂಸಿಇಸಿಎಚ್‌ಎಸ್ ಲೇಔಟ್‌ನಲ್ಲಿ ಶುಕ್ರವಾರ ಬೆಳಗ್ಗೆ ಈ ಅಪಘಾತ ನಡೆದಿದ್ದಾಗಿ ವರದಿಯಾಗಿದೆ. ಟಿಪ್ಪರ್ ಗುದ್ದಿದ ರಭಸಕ್ಕೆ ಲಾರಿಯ ಅಡಿ ಸಿಲುಕಿದ ಬೈಕ್ ಸವಾರ ಪವಾಡ ಸದೃಶದಂತೆ ಸಾವಿನಿಂದ ಬಚಾವ್ ಆದ ದೃಶ್ಯ ಒಂದು ನಿಮಿಷ ನೋಡುಗರ ಮೈಜುಮ್ ಎನ್ನುವಂತಿದೆ.
ಬೆಳಗ್ಗೆ 10:45ರ ಸುಮಾರಿಗೆ ಸಚಿನ್ ಶೆಟ್ಟಿ ಎಂಬುವವರು ಎಂಸಿಇಸಿಎಚ್‌ಎಸ್ ಲೇಔಟ್ ರಸ್ತೆಯಲ್ಲಿ ತಮ್ಮ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಚಾಲಕ ಸಚಿನ್ ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ರಭಸಕ್ಕೆ ಸಚಿನ್ ಕಳೆಗೆ ಬಿದ್ದರೆ, ಬೈಕ್ ಒಂದಷ್ಟು ದೂರ ರಸ್ತೆಯ ಮೇಲೆ ಉಜ್ಜಿಕೊಂಡು ಹೋಗಿದೆ. ಅಪಘಾತದಲ್ಲಿ ಸಚಿನ್ ಶೆಟ್ಟಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.