ಸಲಿಂಗಕಾಮಕ್ಕೆ ಅಡ್ಡಿಯೆಂದು ಮಗುವನ್ನೇ ಕೊಲೆ ಮಾಡಿದ ತಾಯಿ
ಹೊಸೂರು : ಉಸಿರಾಟ ಸಮಸ್ಯೆಯಿಂದ 5 ತಿಂಗಳ ಹಸುಗೂಸು ಮೃತಪಟ್ಟಿದೆ ಎಂದಿದ್ದ ತಾಯಿಯ ಸಲಿಂಗಕಾಮದ ಮುಖವಾಡ ಪೊಲೀಸರ ತನಿಖೆಯಿಂದ ಕಳಚಿಬಿದ್ದಿದೆ. ಚಿನ್ನಟ್ಟಿ ಗ್ರಾಮದ ಸುರೇಶ್ ಪತ್ನಿ ಭಾರತಿ(26) ಹಾಗೂ ಪಕ್ಕದ ಮನೆಯ ಸುಮಿತ್ರಾ(25) ನಡುವಿನ ಸಲಿಂಗಕಾಮಕ್ಕೆ ಮಗು ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ತಾಯಿ ಭಾರತಿಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂಬ ಸತ್ಯ ತನಿಖೆಯಲ್ಲಿ ಬಹಿರಂಗಗೊಂಡಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಹೆಣ್ಣು ಮಕ್ಕಳು ಶಾಲೆಗೆ ಹೋದ ನಂತರ ಮನೆಯಲ್ಲಿ ಭಾರತಿ ಮತ್ತು ಪಕ್ಕದ ಮನೆಯ ಸುಮಿತ್ರಾ ದೈಹಿಕ ಸಂಪರ್ಕ ಬೆಳೆಸುತ್ತಿದ್ದರು. ಈ ಬಗ್ಗೆ ಸುರೇಶ್ಗೆ ವಿಷಯ ತಿಳಿದು ಪ್ರತಿದಿನವೂ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಠಾಣೆಯಲ್ಲಿ ದೂರು ದಾಖಲಾದ ನಂತರ ವಿಚಾರಣೆ ನಡೆದು ಸತ್ಯ ಬಯಲಾಗಿದೆ.
ಬೇರೆ ಮೊಬೈಲ್ ಬಳಕೆ : ಭಾರತಿ ಮತ್ತು ಸುಮಿತ್ರಾ ಮಾತನಾಡಿಕೊಳ್ಳಲು, ನಗ್ನ ವಿಡಿಯೋ ಕಾಲ್ ಮಾಡಲು ಮತ್ತು ಖಾಸಗಿ ಫೋಟೊಗಳನ್ನು ಹಂಚಿಕೊಳ್ಳಲು ಬೇರೆ ಮೊಬೈಲ್ ಇಟ್ಟುಕೊಂಡಿದ್ದರು. ಸ್ನಾನ ಮಾಡುವಾಗ ನಗ್ನವಾಗಿ ವಿಡಿಯೋ ಕಾಲ್ ಮಾಡುವುದು, ಇಬ್ಬರೂ ಮುತ್ತು ಕೊಡುತ್ತಾ ೋಟೋ ಕ್ಲಿಕ್ಲಿಸಿಕೊಳ್ಳುತ್ತಿದ್ದರು. ಭಾರತಿ ಎದೆ ಮೇಲೆ ಸುಮಿ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಳು. ಇಬ್ಬರೂ ಚಾಕುವಿನಿಂದ ಕೈಕೊಯ್ದುಕೊಂಡಿದ್ದರು. ಅಲ್ಲದೆ, ಪೋಟೋಗಳನ್ನು ಹಾಕಿ ರೀಲ್ಸ್ ಕೂಡ ಮಾಡಿದ್ದರು ಎಂಬ ಮಾತು ಕೇಳಿಬಂದಿದೆ,
ಏನಿದು ಪ್ರಕರಣ? : ಚಿನ್ನಟ್ಟಿಯ ಸುರೇಶ್ ಹಾಗೂ ಭಾರತಿ ದಂಪತಿಗೆ 5 ಹಾಗೂ 2 ವರ್ಷದ ಮಕ್ಕಳಿದ್ದು 5 ತಿಂಗಳ ಮಗುವಿತ್ತು. ದಂಪತಿ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಹಲವು ಬಾರಿ ರಾಜಿ ಪಂಚಾಯಿತಿ ನಡೆದಿತ್ತು. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಸುರೇಶ್ ನ.4ರಂದು ಮನೆಗೆ ಮರಳಿದಾಗ ಮಗು ಅರೆಪ್ರಜ್ಞಾವಸ್ಥೆಯಲ್ಲಿದ್ದಂತೆ ಕಂಡುಬಂದಿತ್ತು. ವಿಚಾರಿಸಿದಾಗ ಮಗು ಹಾಲು ಕುಡಿಯುವಾಗ ಕೆಮ್ಮು ಬರುತ್ತಿದ್ದು ಆರೋಗ್ಯ ಹದಗೆಟ್ಟಿದೆ ಎಂದು ಪತ್ನಿ ತಿಳಿಸಿದ್ದಳು. ತಕ್ಷಣ ಮಗುವನ್ನು ಕೆಳಮಂಗಲಂ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಮಗು ಪರೀಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದರು.