ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತೇಶ್ವರ ಸಭಾ ಭವನದಲ್ಲಿ ಆಯೋಜಿಸಲಾದ ಅವ್ಮ ಫೌಂಡೇಶನ್ ಉದ್ಘಾಟನಾ ಸಮಾರಂಭವನ್ನು ಮಾಜಿ ಶಾಸಕ ಸೋಮನಗೌಡ ಪಾಟೀಲ ಉದ್ಘಾಟಿಸಿದರು. ಎಸ್.ಆರ್. ಬೇನಾಳಮಠ, ಶೇಷಾಚಲ ಹವಾಲ್ದಾರ, ವಿದ್ಯಾ ವೀರಕ್ತಮಠ ಮತ್ತಿತರರಿದ್ದರು.
- ಮಾಜಿ ಶಾಸಕ ಸೋಮನಗೌಡ ಪಾಟೀಲ ಹೇಳಿಕೆ
- ಅಮ್ಮ ಫೌಂಡೇಷನ್ ಉದ್ಘಾಟನೆ
ತಾಳಿಕೋಟೆ: ತಾಯಿ ತನ್ನ ಎಲ್ಲ ಮಕ್ಕಳಿಗೆ ಸಂಸ್ಕಾರದ ಬದುಕನ್ನು ರೂಪಿಸುವ ಕೆಲಸ ಮಾಡುತ್ತಾಳೆ. ಅಂತಹ ಅಮ್ಮನ ಹೆಸರಿನಲ್ಲಿ ಪ್ರಾರಂಭಿಸಿದ ಫೌಂಡೇಷನ್ ಇತರರಿಗೆ ಮಾದರಿಯಾಗಿ ಬೆಳೆಯಲಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಮಾಜಿ ಶಾಸಕ ಸೋಮನಗೌಡ ಪಾಟೀಲ ಹೇಳಿದರು.
ಪಟ್ಟಣದ ಶ್ರಿ ಖಾಸ್ಗತೇಶ್ವರ ಸಭಾಭವನದಲ್ಲಿ ಮಂಗಳವಾರ ನೂತನವಾಗಿ ಆರಂಭವಾದ ಅಮ್ಮ ಫೌಂಡೇಷನ್ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಮ್ಮ ಎಂಬ ಪದದಲ್ಲಿ ಜಗತ್ತನ್ನೇ ಗೆಲ್ಲಿಸುವಂತಹ ಶಕ್ತಿ ಅಡಗಿದೆ. ಮಕ್ಕಳಿಗೆ ತಾಯಿಯಾಗಿ ಮೊದಲ ಗುರುವಾಗಿ ಸಂಸ್ಕಾರ ಜತೆಗೆ ಶಿಕ್ಷಣ ಕಲಿಸಿ ದೇಶಕ್ಕೆ ಒಳ್ಳೆಯ ಪ್ರಜೆಯನ್ನಾಗಿಸುವ ಕೆಲಸ ಮಾಡುತ್ತಾಳೆ. ಅಂತಹ ತಾಯಿ ಸ್ವರೂಪದ ಹೆಸರಿನ ಮೇಲೆ ಪ್ರಾರಂಭಿಸಿದ ಅಮ್ಮ ಫೌಂಡೇಷನ್‌ದ ಉದ್ದೇಶ, ಒಳ್ಳೆಯ ವಿಚಾರ ಎಲ್ಲ ಫೌಂಡೇಷನ್‌ಗಳಿಗಿಂತಲೂ ವಿಭಿನ್ನವಾಗಿ ಸಮಾಜದ ಎಲ್ಲ ಅಂಕು-ಡೊಂಕುಗಳನ್ನು ತಿದ್ದುವಂತಹ ಕಾರ್ಯ ಮಾಡಲಿ ಎಂದು ಆಶಿಸಿದ ಅವರು ಇಂದು ನೂರಾರು ಜನ ಮಕ್ಕಳಿಂದ ಸಾಮೂಹಿಕವಾಗಿ ತಾಯಿಯ ಪಾದಪೂಜಾ ಕಾರ್ಯಕ್ರಮವನ್ನು ಆಯೋಜಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಕಾರ್ಯ ಮಾಡಿದ ಫೌಂಡೇಷನ್‌ನ ಮುಖ್ಯಸ್ಥರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಮಾಜಿ ಶಾಸಕ ಶಿವಪುತ್ರಪ್ಪ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮಾಜಿ ಶಾಸಕ ಎ.ಎಸ್. ಪಾಟೀಲ ಅವರು ಮಾತನಾಡಿದರು.
ಜೆಎಸ್‌ಜಿ ೌಂಡೇಷನ್ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಅವರು ಅಮ್ಮ ಫೌಂಡೇಷನ್ ಸಂಸ್ಥೆಯ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು. ಶ್ರೀ ಖಾಸ್ಗತೇಶ್ವರ ಮಠದ ಆಡಳಿತಾಧಿಕಾರಿ ಮುರಗೇಶ ವೀರಕ್ತಮಠ ಆಶೀರ್ವಚನ ನೀಡಿದರು. ಅಮ್ಮ ಫೌಂಡೇಷನ್ ಅಧ್ಯಕ್ಷೆ ಬಿ.ಕೆ. ಮಣ್ಣೂರ ಅಧ್ಯಕ್ಷತೆ ವಹಿಸಿದ್ದರು. ನೂರಾರು ತಾಯಂದಿರರಿಗೆ ಮಕ್ಕಳಿಂದ ಪಾದಪೂಜೆ ನೆರವೇರಿಸಲಾಯಿತು. ಎಸ್.ಆರ್. ಬೇನಾಳಮಠ, ಶೇಷಾಚಲ ಹವಾಲ್ದಾರ, ವಿದ್ಯಾ ವಿರಕ್ತಮಠ, ಫೌಂಡೇಷನ್ ಉಪಾಧ್ಯಕ್ಷ ಸುರೇಖಾ ಬಿಳೇಬಾವಿ, ಕಾರ್ಯದರ್ಶಿ ಸುಮಂಗಲಾ ಕೊಳೂರ, ಸದಸ್ಯರಾದ ಸುರೇಖಾ ಸಾಲಂಕಿ, ಡಾ.ಗಂಗಾಂಬಿಕಾ ಪಾಟೀಲ, ಅನೀತಾ ಸಜ್ಜನ, ರೇಣುಕಾ ಕಾರ್ಜೋಳ, ಗೀತಾ ಪತ್ತಾರ, ಗುರುಬಾಯಿ ಮಣೂರ, ಡಾ.ಚನ್ನಮ್ಮ ಕತ್ತಿ, ಲಿಂಗೇಶ ರೇವಣಸಿದ್ದಯ್ಯ ಮತ್ತಿತರರಿದ್ದರು.