Mother dies after going to save children 
ರಾಜ್ಯ

ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಸಾವು

ಚಿಂತಾಮಣಿ: ತಾಲೂಕಿನ ಮುರಗಮಲ್ಲಾದ ಕೆರೆಯಲ್ಲಿ ಬುಧವಾರ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಶಿವಾಜಿನಗರದ ತಬಸಾಖಾನಂ(25) ಮೃತೆ.
ಮುರಗಮಲ್ಲಾ ಅಮ್ಮಾಜಾನ್​ ಮತ್ತು ಬಾವಜಾನ್​ ದರ್ಗಾಕ್ಕೆ ಬೆಂಗಳೂರಿನ ಶಿವಾಜಿನಗರದಿಂದ ಕುಟುಂಬ ಸಮೇತ ಬಂದಿದ್ದು, ಕೆರೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದರು. ಈ ವೇಳೆ ಮಕ್ಕಳು ಆಟವಾಡುತ್ತಾ ನೀರಿಗೆ ಇಳಿದಿದ್ದಾರೆ. ಕೆರೆಯಲ್ಲಿ ಮಕ್ಕಳು ಮುಳುಗುತ್ತಿರುವುದನ್ನು ಕಂಡ ತಾಯಿ ತಬಸಾಖಾನಂ ರಕ್ಷಿಸಲು ಹೋಗಿದ್ದಾರೆ.
ಅದೇ ಸಮಯಕ್ಕೆ ಅಲ್ಲಿಯೇ ಇದ್ದ ತಬಸಾಖಾನಂ ತಂದೆ ಮತ್ತು ಪತಿ ಮಕ್ಕಳನ್ನು ರಸಿದ್ದಾರೆ. ಆದರೆ, ತಬಸಾಖಾನಂ ನೀರಿನ ಆಳದಲ್ಲಿ ಸಿಲುಕಿಕೊಂಡಿದ್ದರಿಂದ ರಕ್ಷಣೆ ಸಾಧ್ಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದರು. ಮೃತದೇಹವನ್ನು ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.