Mother and son die after being hit by a bus. 
ರಾಜ್ಯ

ಬಸ್​ ಡಿಕ್ಕಿಯಾಗಿ ತಾಯಿ, ಮಗ ಸಾವು

ಗೌರಿಬಿದನೂರು;

ನಗರದ ಅಂಬೇಡ್ಕರ್​ ವೃತ್ತದಲ್ಲಿ ಶುಕ್ರವಾರ ಸಂಜೆ ಬಸ್​ ಡಿಕ್ಕಿಯಾಗಿ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟ್ಟಿದ್ದು, ಮತ್ತೊಬ್ಬ ಮಗ ಗಾಯಗೊಂಡಿದ್ದಾನೆ.

ಕಾದಲವೇಣಿ ಗ್ರಾಮದ ಸುರೇಶ್​ ಅವರ ಪತ್ನಿ ನಾಗಮಣಿ(35) ಹಾಗೂ ಹಿರಿಯ ಪುತ್ರ ಗಗನ್​(13) ಮೃತರು. ಕಿರಿಯ ಪುತ್ರ ಚಂದನ್​(8) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗೌರಿಬಿದನೂರು ಮಾರ್ಗದಲ್ಲಿ ಮಧುಗಿರಿ ಹಾಗೂ ತಿರುಪತಿ ನಡುವೆ ಸಂಚರಿಸುತ್ತಿದ್ದ ಬಸ್​ ವೇಗವಾಗಿ ಬಂದು ರಸ್ತೆ ದಾಟುತ್ತಿದ್ದವರಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.
ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಸ್​ ವಶಕ್ಕೆ ಪಡೆದಿದ್ದಾರೆ.

ಸಂಭ್ರಮದ ಬದಲಿಗೆ ಸೂತಕ

ಗಗನ್​ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದರೆ, ಚಂದನ್​ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ವರಮಹಾಲ್ಮ ಹಬ್ಬದ ಪ್ರಯುಕ್ತ ತಾಯಿ ಮತ್ತು ಮಕ್ಕಳು ನಗರದ ದೇವಾಲಯವೊಂದಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಬಳಿಕ ನಾಗಮಣಿ ತವರು ಮನೆ ಕುಂಟ ಚಿಕ್ಕನಹಳ್ಳಿಗೆ ಹಬ್ಬಕ್ಕೆಂದು ಹೋಗುವಾಗ ಅವಡ ಸಂಭವಿಸಿದೆ. ಅಪಘಾತದಲ್ಲಿ ತಾಯಿ, ಮಗ ಮೃತಪಟ್ಟಿರುವ ಸುದ್ದಿ ಕಾದಲವೇಣಿ ಗ್ರಾಮಕ್ಕೆ ಬರಸಿಡಿಲಿನಂತೆ ಬಂದೆರಗಿದೆ. ಹಬ್ಬದ ಸಂಭ್ರಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಚಾಲಕ ಪೊಲೀಸರಿಗೆ ಶರಣಾಗಿದ್ದಾನೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆಯಾದ ಬಳಿಕ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.
21 ನಾಗಮಣಿ
ಗಗನ್​