Mother and children commit suicide over debt issues. 
ರಾಜ್ಯ

ಸಾಲದ ವಿಚಾರಕ್ಕೆ ತಾಯಿ, ಮಕ್ಕಳು ಆತ್ಮಹತ್ಯೆ

ಕೋಲಾರ ಡೆಸ್ಕ್
ಕೋಲಾರ: ಬೆಗ್ಲಿಬೆಣಜೇನಹಳ್ಳಿಯಲ್ಲಿ ಸಾಲದ ವಿಚಾರಕ್ಕೆ ಕೌಟುಂಬಿಕ ಕಲಹ ಉಂಟಾಗಿ ತಾಯಿ ಮತ್ತು ಇಬ್ಬರು ಮಕ್ಕಳು ಶುಕ್ರವಾರ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಸುರೇಶ್​ ಕುಮಾರ್​ ಅವರ ಪತ್ನಿ ಪ್ರಮೀಳಾ(36), ಪುತ್ರಿ ಸ್ವಪ್ನಾ(22), ಪುತ್ರ ಚರಣ್​ (18) ಮೃತರು. ಕೃಷಿ ಹೊಂಡ ಇರುವ ತೋಟದ ಮಾಲೀಕ ಎಂದಿನಂತೆ ತೋಟಕ್ಕೆ ಹೋದಾಗ ಹೊಂಡದಲ್ಲಿ ಶವಗಳು ತೇಲುತ್ತಿದ್ದುದನ್ನು ಕಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲೀಗ ನೀರವ ಮೌನ ಆವರಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೃಷಿ ಹೊಂಡ ಸಮೀಪ ಜಮಾಯಿಸಿದ್ದರು.
ಪ್ರಮೀಳಾ
ಸ್ವಪ್ನಾ
ಚರಣ್
ಖಾಸಗಿ ಪೈನಾನ್ಸ್​ ಕಂಪನಿಯಲ್ಲಿ ಸುಮಾರು 15 ಲಕ್ಷ ರೂ. ಸಾಲ ಪಡೆದುಕೊಂಡಿದ್ದು, ಆರ್ಥಿಕ ಸಮಸ್ಯೆಯಿಂದ ಮರುಪಾವತಿ ಮಾಡುವುದು ತಡವಾಗಿದೆ. ಇದರಿಂದ ಪೈನಾನ್ಸ್​ ಕಂಪನಿಯ ಸಿಬ್ಬಂದಿ ಮನೆ ಬಳಿಗೆ ಬಂದು ಸಾಲ ಕಟ್ಟುವಂತೆ ಪೀಡಿಸಿದ್ದರು. ಇದರಿಂದಾಗಿ ಕುಟುಂಬದಲ್ಲಿ ಕಲಹ ಉಂಟಾಗಿದ್ದು, ಟನೆಗೆ ಇದೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಪಂಚನಾಮೆ ಮಾಡಲಾಯಿತು.