ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್  
ರಾಜ್ಯ

ಬಾಕಿ ತೀರಿಸಲು ಇನ್ನಷ್ಟು ತೆರಿಗೆಗಳನ್ನು ಜನರ ಮೇಲೆ

ಬೆಂಗಳೂರು: ಕೆಟ್ಟು ಹೋದ ಲಾರಿಯಂತಿರುವ ಆಡಳಿತವನ್ನು ಸಿದ್ದರಾಮಯ್ಯ ಮೌನವಾಗಿ ಡಿ.ಕೆ.ಶಿವಕುಮಾರ್‌ಗೆ ಬಿಟ್ಟು ಹೋಗಿದ್ದಾರೆ. ಬಾಕಿ ತೀರಿಸಲು ಇನ್ನಷ್ಟು ತೆರಿಗೆಗಳನ್ನು ಜನರ ಮೇಲೆ ಹೊಸ ಸಿಎಂ ಹೇರುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರ ಹಳೆಯ ಲಾರಿ ಇದ್ದಂತೆ. ಈಗ ಲಾರಿಯ ಚಾಲಕ ಬದಲಾಗಿದ್ದಾನೆಯೇ ಹೊರತು ಲಾರಿ ಬದಲಾಗಿಲ್ಲ. ಮುಖ್ಯಮಂತ್ರಿ ಬದಲಾದರೆ ಆರ್ಥಿಕ ಇಲಾಖೆ ಲೆಕ್ಕಪತ್ರ ಬದಲಾಗುವುದಿಲ್ಲ. 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಇದ್ದರೆ, 7.64 ಲಕ್ಷ ಕೋಟಿ ರೂ.ಸಾಲವಿದೆ. ಈ ವರ್ಷ 94,428 ಕೋಟಿ ರೂ. ಕೊರತೆ ಇದೆ.
ಅಭಿವೃದ್ಧಿಗೆ ಹಣವೇ ಇಲ್ಲ. ಬಿಜೆಪಿ ಸರ್ಕಾರ ಅಭಿವೃದ್ಧಿಗಾಗಿ 84 ಸಾವಿರ ಕೋಟಿ ರೂ. ಖರ್ಚು ಮಾಡಿತ್ತು. ಗ್ಯಾರಂಟಿ ಬಂದ ಮೇಲೆ ಆ ಮೊತ್ತದಲ್ಲಿ ಕಡಿತವಾಗಿದೆ. ಮೂರು ಬಾರಿ ಸತತವಾಗಿ ಕೊರತೆ ಬಜೆಟ್ ಮಂಡಿಸಲಾಗಿದೆ. ಡಿ.ಕೆ.ಶಿವಕುಮಾರ್ ಹೋಗಿ ಭಸ್ಮಾಸುರ ಸಿದ್ದರಾಮಯ್ಯ ಅವರ ಆಶೀರ್ವಾದ ಪಡೆದಿದ್ದಾರೆ. ಆರ್ಥಿಕ ಸುಸ್ಥಿರತೆ ಇಲ್ಲದ ಆಡಳಿತವನ್ನು ಅವರು ಬಿಟ್ಟು ಹೋಗಿದ್ದಾರೆ. ಅಭಿವೃದ್ಧಿಯ ಕರ್ನಾಟಕ ಸಾಲದ ಕರ್ನಾಟಕ ಆಗಿದೆ ಎಂದರು.