ಯಾದವಾಡ ಗ್ರಾಮದ ವಿದ್ಯಾವರ್ಧಕ ಸಂದ ಜಿಎನ್ಎಸ್ ಪಿಯು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು. ವಿಶ್ವಾರಾಧ್ಯ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ, ಶಿವಪ್ಪಗೌಡ ನ್ಯಾಮಗೌಡ, ಆರ್.ಬಿ.ಕಲ್ಯಾಣಿ, ಪಿ.ಎಂ.ದೇಶಪಾಂಡೆ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡಲಗಿ
ಕಲ್ಯಾಣಿ&ನ್ಯಾಮಗೌಡರ ಮತ್ತು ಹಿರಿಯರ ತ್ಯಾಗ, ಪರಿಶ್ರಮದ ಲವಾಗಿ ಗುರು ನೀಲಕಂಠ ಸ್ವಾಮಿ ಪಪೂ ಮಹಾವಿದ್ಯಾಲಯ ಹೆಮ್ಮರವಾಗಿ ಬೆಳೆದು, ಯಾದವಾಡ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ ಎಂದು ಶಾಸಕ ಬಾಲಚಂದ್ರ
ಜಾರಕಿಹೊಳಿ ಶ್ಲಾನೆ ವ್ಯಕ್ತಪಡಿಸಿದರು.
ಯಾದವಾಡ ಗ್ರಾಮದ ವಿದ್ಯಾವರ್ಧಕ ಸಂದ ಜಿಎನ್ಎಸ್ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ನಿರ್ಮಿಸಿರುವ ಬೋಧನಾ ಕೊಠಡಿ ಶನಿವಾರ ಉದ್ಘಾಟಿಸಿ ಮಾತನಾಡಿ, ಮೂಡಲಗಿ ಶೈಣಿಕ ವಲಯ ಶಿಣದಲ್ಲಿ ಮಹತ್ತರ ಸಾಧನೆ ಮಾಡುತ್ತಿರುವುದು ಸಂತಸ ತಂದಿದೆ. ವಿದ್ಯಾವರ್ಧಕ ಸಂದಿಂದ ಸ್ಥಾಪನೆಗೊಂಡಿರುವ ಜಿಎನ್ಎಸ್ ಸಂಸ್ಥೆ ಉನ್ನತಿಗಾಗಿ ಸಹಾಯ, ಸಹಕಾರ ನೀಡಲು ಬದ್ಧ ಎಂದರು.
ಯಾದವಾಡ ಭಾಗದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ಈ ಮೂಲಕ ಸಾರ್ವಜನಿಕರ ದೂರು, ದುಮ್ಮಾನಗಳಿಗೆ ಸ್ಪಂದಿಸಲಾಗುತ್ತಿದೆ. ಈಗಾಗಲೇ ಕುರಬಟ್ಟಿಯ ಈರಾಲಿಂಗೇಶ್ವರ ಮಠಕ್ಕೆ 35 ಲ ರೂ. ಮತ್ತು ಬೆಳಗಲಿ ಬಸಪ್ಪಜ್ಜನ ಮಠಕ್ಕೆ 30 ಲ ರೂ. ನೀಡಲಾಗಿದೆ. ಸುಸಜ್ಜಿತ ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದೇವೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಜಿಆರ್ಬಿಸಿಗೆ ಹಿಡಕಲ್ ಡ್ಯಾಂನಿಂದ ನೀರು ಬಿಡುವಂತೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕೋರಿದ್ದರಿಂದ ಶುಕ್ರವಾರದಿಂದ ಟಪ್ರಭಾ ಬಲದಂಡೆ ಕಾಲುವೆಗೆ 1 ಟಿಎಂಸಿ ನೀರು ಹರಿಸಲಾಗಿದೆ. ಇದರ ಜತೆಯಲ್ಲಿ ಹಿರಣ್ಯಕೇಶಿಯಿಂದ 800 ಕ್ಯೂಸೆಕ್ ನೀರು ಬರುತ್ತಿದೆ. ಯಾದವಾಡ ಭಾಗದವರೆಗೆ ನೀರು ತಲುಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಚೌಕೇಶ್ವರ ಮಠದ ವಿಶ್ವಾರಾಧ್ಯ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ, ವಿದ್ಯಾವರ್ಧಕ ಸಂದ ಅಧ್ಯ ಶಿವಪ್ಪಗೌಡ ನ್ಯಾಮಗೌಡ, ಸಂಸ್ಥೆ ಉಪಾಧ್ಯ ಆರ್.ಬಿ.ಕಲ್ಯಾಣಿ, ಗೌರವ ಕಾರ್ಯದರ್ಶಿ ಪಿ.ಎಂ.ದೇಶಪಾಂಡೆ, ನಿರ್ದೇಶಕರಾದ ವೈ.ಎಲ್.ನ್ಯಾಮಗೌಡರ, ಎ.ಎಂ.ಚಿಕ್ಕಲಗೌಡರ, ಎಂ.ಬಿ.ಚಿಪ್ಪಲಕಟ್ಟಿ, ಡಾ.ಎಸ್.ಕೆ.ಪಾಟೀಲ, ವಿ.ಎಸ್.ಕಲ್ಯಾಣಿ, ಬಿಇಒ ಪ್ರಕಾಶ ಹಿರೇಮಠ ಇತರರಿದ್ದರು.