/ ಔರಾದ್ನಲ್ಲಿ ಶನಿವಾರ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ದೇಶಮುಖ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಧ್ಯ ಆನಂದ ದೇವಪ್ಪ, ಶಿವಕುಮಾರ ಸ್ವಾಮಿ, ಪ್ರಥ್ವಿರಾಜ್ ಎಸ್., ಶಿವಕುಮಾರ ಸ್ವಾಮಿ, ಸಂತೋಷ ಚೆಟ್ಟೆ, ಸ್ವಾಮಿದಾಸ ನಾಗುರೆ ಇತರರಿದ್ದರು.
ಔರಾದ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪ್ರಧಾನ ಕಾರ್ಯದರ್ಶಿಯಾಗಿ ಅನಿಲಕುಮಾರ ದೇಶಮುಖ ಎರಡನೇ ಸಲ ಆಯ್ಕೆಯಾಗಿದ್ದಾರೆ. ಜಿಲ್ಲಾ ಘಟಕದಿಂದ ಗೌಪ್ಯ ಮತದಾನದ ಮೂಲಕ ಶನಿವಾರ ನಡೆದ ಚುನಾವಣೆಯ ಫಲಿತಾಂಶವನ್ನು ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಘೋಷಿಸಿದರು.
ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಮಾತನಾಡಿ, ಪತ್ರಕರ್ತರ ಸಂಕ್ಕೆ ತನ್ನದೇ ಆದ ಇತಿಹಾಸವಿದೆ. ಸಂಘವು ಸದಾ ಪತ್ರಕರ್ತರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ವಿರುದ್ಧ ಯಾವುದೇ ಚಟುವಟಿಕೆಗಳನ್ನು ನಡೆಸದೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಪ್ರಥ್ವಿರಾಜ್ ಎಸ್., ಕಾರ್ಯದರ್ಶಿಗಳಾದ ಸಂತೋಷ ಚೆಟ್ಟೆ, ಸ್ವಾಮಿದಾಸ ನಾಗುರೆ, ಕಾರ್ಯಕಾರಿ ಸದಸ್ಯರಾದ ಶರಣಪ್ಪ ಚಿಟಮೆ, ಶ್ರೀಕಾಂತ ಪಾಟೀಲ, ಚನ್ನಬಸವ ಮೊಕ್ತೆದಾರ್, ಮಲ್ಲಪ್ಪ ಗೌಡ, ಸುನೀಲ ಜಿರೋಬೆ, ಮನ್ಮಥ ಸ್ವಾಮಿ, ಸುಧೀರ ಪಾಂಡ್ರೆ, ರವೀಂದ್ರ ಮೊಕ್ತೆದಾರ್, ಅಹ್ಮದ್ ಜಂಬಗಿ, ಲ್ಮಣ ರಾಠೋಡ್, ರವಿಕುಮಾರ ಶಿಂಧೆ, ಅವಿನಾಶ ಪಾಂಡ್ರೆ, ಸೂರ್ಯಕಾಂತ ಎಕಲಾರ, ಶಿವಕುಮಾರ ಸ್ವಾಮಿ, ಅಂಬ್ರೇಶ ಚಿದ್ರೆ, ರಾಜಕುಮಾರ ಚಾಂಬೋಳೆ, ರವಿಕುಮಾರ ಮಠಪತಿ, ಅಮರ ಸ್ವಾಮಿ, ಅಂಬಾದಾಸ ನಳಗೆ, ಅಮರನಾಥ, ವಿನೋದ ಚಿದ್ರೆ ಇದ್ದರು.